ಅರಕಲಗೂಡು;ವಿದ್ಯಾರ್ಥಿಗಳು ಪರಿಸರದ ಬಗ್ಗೆ ಕಾಳಜಿಯನ್ನು ತಮ್ಮ ಶಾಲಾ ಅವಧಿಯಲ್ಲಿಯೇ ಬೆಳೆಸಿಕೊಂಡು ಪರಿಸರ ಸಂರಕ್ಷಕರಾಗಿ ರೂಪುಗೊಳ್ಳಬೇಕು.ಪರಿಸರ ರಕ್ಷಣೆಯ ಬಗೆಗೆ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಜಾಗ್ರತಿ ಮೂಡಿಸುವ ಕೆಲಸಗಳನ್ನು ನಿರಂತರವಾಗಿ ಮಾಡಬೇಕು ಎಂದು ಸ್ವಸ್ಥ ಸಮಾಜ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಪ್ರದೀಪ್ ರಾಮಸ್ವಾಮಿ ತಿಳಿಸಿದರು.
ಕೊಣನೂರು ಹೋಬಳಿಯ ಬಿಸಿಲಹಳ್ಳಿ ಗ್ರಾಮದ ಸರಕಾರಿ ಶಾಲೆಯಲ್ಲಿ ಹಮ್ಮಿಕೊಳ್ಲಲಾಗಿದ್ದ ಪರಿಸರ ರಕ್ಷಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶಾಲೆಯ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಗುತ್ತಿದೆ .ಈ ಗಿಡಗಳನ್ನು ವಿದ್ಯಾರ್ಥಿಗಳಾದ ನೀವುಗಳೇ ರಕ್ಷಿಸುವ ಕಾರ್ಯಕ್ಕೆ ಮುಂದಾಗಬೇಕು.ಈ ಹಣ್ಣಿನ ಗಿಡಗಳಲ್ಲಿ ಬಿಡುವ ಹಣ್ಣುಗಳು ನಿಮಗೂ ತಿನ್ನಲು ಸಿಗುವುದರ ಜೊತೆಗೆ ಪ್ರಾಣಿಪಕ್ಷಿಗಳ ಹೊಟ್ಟೆಯನ್ನು ತುಂಬಿಸಲಿವೆ.ಈ ತರಹದ ಕೆಲಸಗಳನ್ನು ಪರಿಸರ ಪ್ರೇಮಿಗಳು ಎಲ್ಲೆಡೆಯೂ ಹಮ್ಮಿಕೊಳ್ಳಲಿ ಎಂಬುದು ನನ್ನ ಅಭಿಲಾಷೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕಣಗಾಲ್ ಕೃಷ್ಣಮೂರ್ತಿ,ಅಣ್ಣೇಗೌಡ, ನಿವೃತ್ತ ಶಾಲಾ ಮುಖ್ಯ ಶಿಕ್ಷಕರು ಮಾಳೇನಹಳ್ಳಿ ಸಣ್ಣಪ್ಪ,ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶಿವಕುಮಾರ್ ಹಂಡ್ರಂಗಿ,ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀನಾಥ್ ತೆರಿಗಳಲೆ,ಚೆನ್ನ ರಾಜೇಗೌಡ, ವಿ ಎಸ್ ಎಸ್ ಬ್ಯಾಂಕ್ ಅಧ್ಯಕ್ಷ ಸುರೇಶ್, ಗ್ರಾ ಪಂ ಸದಸ್ಯರುಗಳಾದ ,ಕಂಠಣ್ಣ, ಸಣ್ಣ ಸ್ವಾಮಿ, ಶಿವಣ್ಣ,ಜಗದೀಶ್, ಗ್ರಾಮ ಪಂಚಾಯತಿ ಸದಸ್ಯರು, ಜಗದೀಶ್ ಅಕ್ಕಲವಾಡಿ,ಮುನಿಸ್ವಾಮಿ, ರವಿ, ಆನಂದ್, ಶಿವಣ್ಣ,ಮುಗುಳೂರು ಪಾಂಡುರಂಗ,ಸಿದ್ದರಾಮು,ಮೋಹನ್ ಕೆ ಅಬ್ಬೂರು,ಸೋಮಣ್ಣ ಸೋಮಪುರ,ಕಾಂತಣ್ಣ,ನಸ್ರುಲ್ಲಾ ಟಿಪ್ಪು ,ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
—————————ಶಶಿಕುಮಾರ್ ಕೆಲ್ಲೂರ್