ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಬಲಾದಿ ಗ್ರಾಮದ ಪ್ರತಿಭೆಯ ಚೊಚ್ಚಲ ಸಿನಿಮಾ “ಅನಾಥ” ಬಿಡುಗಡೆಗೆ ಸಜ್ಜಾಗಿದೆ.
ಹೌದು ಭರವಸೆಯ ನಿರ್ದೇಶಕ ಅಣ್ಣಾಶೇಠ್ ಕೆ. ಎ ಅವರು “ಅನಾಥ” ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದೆ ನ.28 ಕ್ಕೆ ರಾಜ್ಯಾದ್ಯಂತ ಈ ಚಲನಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
ಹೌದು ಕನ್ನಡದಲ್ಲಿ ‘ಅನಾಥ’ ತೆಲುಗಿನಲ್ಲಿ ‘ಅನಾಧ ‘ ಎಂಬ ಶೀರ್ಷಿಕೆ ಅಡಿಯಲ್ಲಿ ಗೊನೇಂದ್ರ ಫಿಲಂಸ್ ಸಂಸ್ಥೆಯವರು ಈ ಚಿತ್ರವನ್ನು ನಿರ್ಮಿಸಿದ್ದು, ತೆಲುಗಿನ (ಕನ್ನಡ ಮೂಲದ ) ಸಂಗೀತ ನಿರ್ದೇಶಕ ಶ್ರೀ ಇಂದ್ರ ನಾಯಕನಾಗಿ ಅಭಿನಯಿಸಿದ್ದಾರೆ.
ಡಿವೈನ್ ಸ್ಟಾರ್ ಶ್ರೀ ಇಂದ್ರಗೆ ಜೋಡಿಯಾಗಿ ನಿಖಿತಾ ಸ್ವಾಮಿ ಅಭಿನಯಿಸಿದ್ದಾರೆ. ಬಾಂಬೆ ಮೂಲದ ಮುಗ್ಧ ಚೆಲುವೆ ಯುಕ್ತ ಪೆರ್ವಿ 2ನೇ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಕನ್ನಡದ ಹೆಸರಾಂತ ಖಳನಟ ಶೋಭರಾಜ್,ಪೋಷಕ ಪಾತ್ರದಲ್ಲಿ ಸಂಗೀತಾ, ಹೊನ್ನಾವಳಿ ಕೃಷ್ಣ, ಬಾಯ್ ಬಡ್ಕಿ ಸಿದ್ದು, ಹಾಗೂ ಜಿಮ್ ರವಿ ಸಹೋದರ ಜಿಮ್ ಹರೀಶ್, ಇನ್ನು ಹೆಸರಾಂತ ನಟ -ನಟಿಯರ ತಾರಾಬಳಗವನ್ನೇ ಒಳಗೊಂಡಿದೆ ಚಿತ್ರತಂಡ.
ವೀರೇಶ್ ಕುಮಾರ್ ಅವರ ಛಾಯಾಗ್ರಾಹಣ, ರಮೇಶ್ ರಂಜಿತ್ ಅವರ ಸಾಹಸ, ಬಾಲ ಮಾಸ್ಟರ್ ಅವರ ನೃತ್ಯ, ಮಾರುತಿ ರಾವ್ ಅವರ ಸಂಕಲನ, ಎಲ್ ಎನ್ ಸೂರ್ಯ ರವರ ಸಾಹಿತ್ಯ, ಹಾಗೂ ಶಿವಕುಮಾರ್ ಶೆಟ್ಟಿ ಅವರ ಸಂಭಾಷಣೆ ಚಿತ್ರಕ್ಕಿದ್ದು ವಿಜಯಪುರ ಮೂಲದ ಅಣ್ಣಾಶೇಠ ಈ ಸಿನಿಮಾ ನಿರ್ದೇಶಿಸಿದ್ದಾರೆ.