ನಾಗಮಂಗಲ:ಪತಿಯೇ ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊ,ಲೆ ಮಾಡಿರುವ ಘಟನೆ ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಂಥನಹಳ್ಳಿ ಗ್ರಾಮದಿಂದ ವರದಿಯಾಗಿದೆ.
ಬುಧವಾರ ಮದ್ಯಾನ್ನ ಈ ಘಟನೆ ನಡೆದಿದ್ದು ತೇಜು(35 ವರ್ಷ) ಪತಿ ಜಯರಾಮನಿಂದ ತೀವ್ರ ಹಲ್ಲೆಗೆ ಒಳಗಾಗಿ ಮೃತಪಟ್ಟ ದುರ್ದೈವೆ.ತಲೆ ಹಾಗು ದೇಹದ ವಿವಿಧ ಭಾಗಗಳಿಗೆ ಬಲವಾದ ಪೆಟ್ಟುಗಳು ಬಿದ್ದ ಪರಿಣಾಮ ತೇಜು ರಕ್ತದ ಮಡುವಿನಲ್ಲಿ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಳು.ಕುಟುಂಬಸ್ಥರು ಆಕೆಯನ್ನು ಬಿ.ಜಿ.ನಗರದ ಶ್ರೀ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸದರು ಸಹ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎಂದು ತಿಳಿದು ಬಂದಿದ್ದು,ಬೆಳ್ಳೂರು ಪೊಲೀಸ್ ಠಾಣೆ ಆರಕ್ಷಕ ಉಪನಿರೀಕ್ಷಕ ವೈ.ಎನ್.ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು ಪತಿಯನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.