ಮೂಡಿಗೆರೆ-ಸಿದ್ದರಾಮಯ್ಯರನ್ನು ಸಿಕ್ಕಿಸುವ ಹುನ್ನಾರ-ಮಾಜಿ ಸಚಿವ ಬಿ.ಬಿ.ನಿಂಗಯ್ಯ ಆರೋಪ

ಮೂಡಿಗೆರೆ:೪೦ ವರ್ಷಗಳ ತಮ್ಮ ಸುಧೀರ್ಘ ರಾಜಕಾರಣದಲ್ಲಿ ಒಂದೇ ಒಂದು ತಪ್ಪು ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉತ್ತಮ ಆಡಳಿತ ಸಹಿಸಿಕೊಳ್ಳದೇ ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಮುಡಾ ಹಗರಣದಲ್ಲಿ ಅವರನ್ನು ಸಿಲುಕಿಸುವ ತಂತ್ರ ಮಾಡುತ್ತಿದೆ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಆರೋಪಿಸಿದರು.

ಅವರು ಭಾನುವಾರ ಪಟ್ಟಣದಲ್ಲಿ ಬ್ಲಾಕ್‌ಕಾಂಗ್ರೆಸ್ ವತಿಯಿಂದ ಕೇoದ್ರ ಹಾಗೂ ರಾಜ್ಯಪಾಲರ ವಿರುದ್ಧ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲ.ಇದನ್ನು ತನಿಖೆ ನಡೆಸಲು ಸ್ವತಃ ಮುಖ್ಯಮಂತ್ರಿಗಳೇ ಆದೇಶ ಮಾಡಿದ್ದಾರೆ.ಅಲ್ಲದೇ ಮುಡಾ ಹಗರಣದ ಬಗ್ಗೆ ಮುಖ್ಯಮಂತ್ರಿಗಳು ೨ಗಂಟೆ ಪ್ರೆಸ್ ಮೀಟ್ ಮಾಡಿ ಎಲ್ಲಾ ವಿಷಯಗಳನ್ನು ವಿವರವಾಗಿ ತಿಳಿಸಿದ್ದಾರೆ.ಆದರೂ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ
ಅನುಮತಿ ಕೊಟ್ಟಿರುವುದು ಒಂದು ವ್ಯವಸ್ಥಿತ ಷಡ್ಯಂತರ.ರಾಜಭವನಗಳು ಕೇಂದ್ರ ಸರ್ಕಾರದ ಮಾತು ಕೇಳುತ್ತಿದ್ದು,ಇದು ಪ್ರಜಾಪ್ರಭುತ್ವಕ್ಕೆ ಮಾರಕ ಆಗಲಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರು ಒಂದೇ ಒಂದು ಜನಪರವಾದ ಹೋರಾಟ ಮಾಡಿಲ್ಲ.ಬದಲಾಗಿ ಜನರ ದಿಕ್ಕು ತಪ್ಪಿಸುವ ಹೋರಾಟಗಳನ್ನಷ್ಟೇ ಮಾಡಿದ್ದಾರೆ. ಇದರಿಂದ ರಾಜ್ಯದ ಜನರಿಗೆ ಯಾವುದೇ ಪ್ರಯೋಜನವಿಲ್ಲ. ಅಲ್ಲದೇ ಇಡಿ, ಸಿಬಿಐ ಸಂಸ್ಥೆಗಳನ್ನೂ ದುರುಪಯೋಗಪಡಸಿಕೊಂಡು ವಿರೋಧ ಪಕ್ಷದ ನಾಯಕರ ಮೇಲೆ ಬಲ ಪ್ರಯೋಗ ಮಾಡುತ್ತಿರುವುದನ್ನು ಜನರು ಗಮನಿಸುತ್ತಿದ್ದಾರೆ. ನಮ್ಮ ನಾಯಕ ರಾಹುಲ್ ಗಾಂಧಿ ಅವರು ಸಂಸತ್‌ನಲ್ಲಿ ಕೇಂದ್ರಕ್ಕೆ ಚಾಟಿ ಬೀಸುತ್ತಿರುವುದು ಬಿಜೆಪಿಯವರಿಗೆ ತಲೆ ನೋವಾಗಿದೆ.ಅವರ ಪಾಪದ ಕೊಡ ತುಂಬಿದೆ.ಹಾಗಾಗಿ ಬಿಜೆಪಿಯವರು ಪ್ರಾಯಶ್ಚಿತದ ಪಾದಯಾತ್ರೆ ನಡೆಸುತ್ತಿದ್ದಾರೆಂದು ಹೇಳಿದರು.

ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ ದೇಶದಲ್ಲಿ ಯಾವ ಮುಖ್ಯಮಂತ್ರಿಯೂ ಮಾಡದಂತಹ ಉತ್ತಮ ಆಡಳಿತವನ್ನು ಸಿಎಂ ಸಿದ್ದಾರಾಮಯ್ಯ ಮಾಡಿದ್ದಾರೆ.ಗ್ಯಾರಂಟಿ ಯೋಜನೆಗಳನ್ನ ಎಲ್ಲಾ ಸಮುದಾಯದ ಜನರು ಪಡೆದುಕೊಳ್ಳುತ್ತಿದ್ದು, ಕಾಂಗ್ರೆಸ್ ಸರ್ಕಾರದ ಈ
ಏಳಿಗೆ ಸಹಿಸಿಕೊಳ್ಳಲು ಸಾಧ್ಯವಾಗದೇ ಬಿಜೆಪಿಯವರಿಗೆ ಭಯ ಶುರುವಾಗಿದೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಮುಡಾ ಹಗರಣದಲ್ಲಿ ಸಿಲುಕಿಸುವ ತಂತ್ರ ನಡೆದಿದೆ. ಇದಕ್ಕೆ ನಾವು
ಜಗ್ಗುವುದಿಲ್ಲ.ರಾಜ್ಯಪಾಲರು ಕೈ ಗೊಂಡಿರುವ ನಿರ್ಧಾರ ಕೂಡಲೇ ಕೈ ಬಿಡಬೇಕು.ಇಲ್ಲವಾದರೆ ಮುಂದಿನ ದಿನದಲ್ಲಿ ಉಗ್ರ ಸ್ವರೋಪದ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಕೆ
ನೀಡಿದರು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಜಿ.ಸುರೇಂದ್ರ, ಮುಖಂಡರಾದ ಬಿ.ಎಸ್.ಜಯರಾo, ಜಿಲ್ಲಾ ವಕ್ತಾರ ಎಂ.ಎಸ್.ಅನ0ತ್, ಮುದಾಫಿರ್, ಪೂರ್ಣೇಶ್, ಸುಬ್ಬಯ್ಯ, ಸಂಪತ್ ಬಿಳಗುಳ, ಅಕ್ರಮ್‌ಹಾಜಿ, ಎ.ಜಿ.ಸುಬ್ರಾಯಗೌಡ, ದೀಕ್ಷಿತ್ ಕಣಚೂರು, ರವಿ ಕುನ್ನಳ್ಳಿ, ಸಿ.ಕೆ.ಇಬ್ರಾಹಿಂ, ಸುರೇಶ್ ಜೈನ್, ಷಣ್ಮುಖಾನಂದ, ಕುನ್ನಳ್ಳಿ ಶ್ರೀನಿವಾಸ್, ದೇವರಾಜ್ ಸಬ್ಲಿ, ಬಿ.ಎ.ಉಮರ್,ಸುಧೀರ್ ಚಕ್ರಮಣಿ ಮತ್ತಿತರರಿದ್ದರು.

—————–ವಿಜಯ್ ಕುಮಾರ್

Leave a Reply

Your email address will not be published. Required fields are marked *

× How can I help you?