ಮೈಸೂರು-ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಕಾರ್ಯಕ್ರಮ

ಮೈಸೂರು-ದಸರಾ ವಸ್ತುಪ್ರದರ್ಶನದ ಆವರಣದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಅವದೂತ ಅರ್ಜುನ ಗುರೂಜಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಶ್ರಾವಣ ಶನಿವಾರ ಪ್ರಯುಕ್ತ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನ ನಗರಾಧ್ಯಕ್ಷ ಆರ್ ಮೂರ್ತಿ ಪಾಲ್ಗೊಂಡಿದ್ದರು.

ಈ ಸಂಧರ್ಭದಲ್ಲಿ ಅವಧೂತ ಅರ್ಜುನ ಗುರೂಜಿ ಮಾತನಾಡಿ,ವೀಣೆ ಕುಪ್ಪಣರವರ ಸುಪುತ್ರ ವೀಣೆ ವೆಂಕಟಕೃಷ್ಣಸುಬ್ಬಯ್ಯ ಮೈಸೂರು ಸಂಸ್ಥಾನದಲ್ಲಿ ಸಂಗೀತ ಆಸ್ಥಾನ ಪಂಡಿತರಾಗಿದ್ದರು.ಅವರ ನಿಧನದ ಬಳಿಕ 1840ರಲ್ಲಿ ಅವರ ಧರ್ಮಪತ್ನಿ ವೀಣೆ ವೆಂಕಮ್ಮರವರು ಶ್ರೀ ಸಾಂಬಸದಾಶಿವ ದೇವಾಲಯ ಹಾಗೂ ಶ್ರೀವೀರಾಂಜನೇಯ ಸ್ವಾಮಿ ದೇವಾಲಯವನ್ನ ದೊಡ್ಡಕೆರೆ ದಡದಲ್ಲಿ ನಿರ್ಮಿಸಿದರು.ಈ ಪುಣ್ಯಸನ್ನಿಧಿಯಲ್ಲಿ ಸಾವಿರಾರು ಮದುವೆಗಳು ನಾಮಕರಣ ಶುಭಸಮಾರಂಭಗಳು ಜರುಗಿವೆ.

ಪಕ್ಕದ ಕುಸ್ತಿ ಅಖಾಡದಲ್ಲಿ ಅಭ್ಯಾಸ ಮಾಡುತ್ತಿದ್ದ ಪೈಲ್ವಾನರು ಪ್ರತಿದಿನ ಇಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದರು ಎಂದು ದೇಗುಲದ ಇತಿಹಾಸ ತಿಳಿಸಿದ ಅವರು.ಇಂತಹ ಇತಿಹಾಸವಿರುವ ಈ ದೇವಾಲಯದಲ್ಲಿ ವಸ್ತು ಪ್ರದರ್ಶನ ಪ್ರಾಧಿಕಾರದವರು ಜನಸಾಮಾನ್ಯರಿಗೆ ಅನುಕೂಲವಾಗುವಂತಹ ವ್ಯವಸ್ಥೆಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕಾರ್ಯನಿರ್ವಾಹಣಾಧಿಕಾರಿ ಕೆ.ರುದ್ರೇಶ್, ಕೆಪಿಸಿಸಿ ಸದಸ್ಯರಾದ ನಜರಬಾದ್ ನಟರಾಜ್, ರಾಕೇಶ್ ಕುಮಾರ್, ವಿನಯ್ ಕಣಗಾಲ್, ಪ್ರಧಾನ ಕಾರ್ಯದರ್ಶಿ ಗಿರೀಶ್, ಸಿಎಸ್ ರಘು, ಕೆಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜು ಬಸಪ್ಪ, ಜಿ.ರಾಘವೇಂದ್ರ, ರಂಗಸ್ವಾಮಿ ಪಾಪು, ಗುರುರಾಜ್, ರಂಗನಾಥ್, ನವೀನ್, ಭರತ್, ಇನ್ನಿತರರು ಇದ್ದರು,

———-ಮಧುಕುಮಾರ್

Leave a Reply

Your email address will not be published. Required fields are marked *

× How can I help you?