ರಾಮನಾಥಪುರ-ತಾಲೂಕು ಶರಣ ಸಾಹಿತ್ಯ ಪರಿಷತ್ತನ್ನು ಇನ್ನು ಎತ್ತರಕ್ಕೆ ಒಯ್ಯಲು ಪ್ರಮಾಣಿಕವಾಗಿ ಶ್ರಮಿಸುವುದಾಗಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಆರ್ ಎಂ ರಮೇಶ್ ಭರವಸೆ ನೀಡಿದರು.
ಕೋಟವಾಳು ಗ್ರಾಮದ ವಿದ್ಯಾನಿಕೇತನ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಗದ್ಗುರು ಡಾ. ಶ್ರೀ ಶಿವರಾತ್ರಿರಾಜೇಂದ್ರ ಮಹಾಸ್ವಾಮಿಗಳ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷರಾದ ಎಂ.ಎನ್. ಕುಮಾರಸ್ವಾಮಿರವರಿಂದ ಅಧಿಕೃತವಾಗಿ ತಾಲೂಕು ಅಧ್ಯಕ್ಷರ ಅಧಿಕಾರವನ್ನು ಸ್ವೀಕರಿಸಿ ಮಾತನಾಡಿದರು.
ಸುತ್ತೂರು ಮಠದ ಪರಮಪೂಜ್ಯ ಜಗದ್ಗುರು ಡಾ.ಶ್ರೀ ಶಿವರಾತ್ರಿರಾಜೇಂದ್ರ ಮಹಾಸ್ವಾಮಿಗಳ ಜಯಂತಿಯಂದು ಮಹತ್ತರವಾದ ಜವಾಬ್ದಾರಿಯೊಂದು ನನಗೆ ಸಿಕ್ಕಿರುವುದು ಅವಿಸ್ಮರಣೀಯವಾದದ್ದು.ಹಿಂದಿನ ಶ್ರೀಗಳು ಹುಟ್ಟು ಹಾಕಿದ್ದ ಶರಣ ಸಾಹಿತ್ಯ ಪರಿಷತ್ತು ಇಂದು ಉತ್ತಮವಾಗಿ ಬೆಳೆದಿದ್ದು ಶರಣರ ಸಾಹಿತ್ಯವನ್ನು ಸಂರಕ್ಷಿಸಿ ಅವನ್ನು ಇಂದಿನ ಪೀಳಿಗೆಗಳಿಗೆ ಪರಿಚಯಿಸಿ ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವ ಕೆಲಸವನ್ನು ಮಾಡುತ್ತಿದೆ.ನನ್ನ ಕೈಲಾದ ಮಟ್ಟಿಗೆ ಪ್ರಾಮಾಣಿಕವಾಗಿ ಶರಣ ಸಾಹಿತ್ಯ ಪರಿಷತ್ತಿನ ಏಳ್ಗೆಗಾಗಿ ಸೇವೆ ಮಾಡುತ್ತೇನೆಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾನಿಕೇತನ ವಿದ್ಯಾಸಂಸ್ಥೆ ಉಪಾಧ್ಯಕ್ಷ ಶಿವಶಂಕರ್,ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಕೇರಳಾಪುರ ಬಿ.ವಿ.ವಿನಯ್,ಯುವ ಘಟಕದ ಅಧ್ಯಕ್ಷ ಕೊಣನೂರು ಅಮೃತೇಶ್,ಕಾರ್ಯದರ್ಶಿ ಎಂ.ಜಿ.ಶ್ರೀನಿವಾಸ್, ಸದಸ್ಯರಾದ ಎಸ್. ರವೀಂದ್ರ ಶಾಲೆಯ ಮುಖ್ಯ ಶಿಕ್ಷಕರು ರಾಜಣ್ಣ ಮುಂತಾದವರು ಇದ್ದರು.
———–ಶಶಿಕುಮಾರ್ ಕೆಲ್ಲೂರು