ಸಕಲೇಶಪುರ:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಎಸ್.ಮಾನಸ ಅನುದಾನಿತ ಪ್ರೌಢಶಾಲೆ ಬಾಳೆಗದ್ದೆ ಇವರ ಸಂಯುಕ್ತ ಆಶ್ರಯದಲ್ಲಿ ಕಸಬಾ ಹೋಬಳಿ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟವನ್ನು ಇಂದು ಪಟ್ಟಣದ ಸುಭಾಷ್ ಮೈದಾನದಲ್ಲಿ ನಡೆಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ.ಎಸ್ ಧ್ವಜಾರೋಹಣ ಮಾಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ಕೊಟ್ಟರು.
ನಂತರ ಮಾತನಾಡಿದ ಅವರು ಸರ್ಕಾರಿ ಶಾಲೆಗಳಲ್ಲಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆ ಇದ್ದರು ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹಿಂದೆ ಬಿದ್ದಿಲ್ಲ.ವಸತಿ ಶಾಲೆಯಲ್ಲಿ ದೈಹಿಕ ಶಿಕ್ಷಕರ ಸಂಖ್ಯೆ ಹೆಚ್ಚಾಗಿದ್ದು ಆ ಶಾಲೆಯ ಮಕ್ಕಳು ಈ ಕ್ರೀಡಾಕೂಟಗಳಲ್ಲಿ ಪೈಪೋಟಿ ನಡೆಸುವುದಕ್ಕೆ ಸಹಕಾರಿಯಾಗಿದೆ.
ಕ್ರೀಡಾಕೂಟದಲ್ಲಿ ಯಾವುದೇ ಶಾಲೆಯ ಮಕ್ಕಳು ವಿಜೇತರಾದರು ನಮಗೆ ಸಂತಸವೇ.ಅವರು ಕೂಡ ಪ್ರಶಂಸೆಗೆ ಪಾತ್ರರಾಗುತ್ತಾರೆ.ಜೀವನದಲ್ಲಿ ಕ್ರೀಡೆಯನ್ನು ಅಳವಡಿಸಿಕೊಳ್ಳಬೇಕು.ಶಾಲೆಯಲ್ಲಿ ಮನೆಯಲ್ಲಿ ಕ್ರೀಡೆಯನ್ನು ಹಾಗೂ ಧ್ಯಾನವನ್ನು ಅಭ್ಯಾಸ ಮಾಡಿ್ದರೆ ಉತ್ತಮ ಜೀವನ ಶೈಲಿಯನ್ನು ರೂಪಿಸಿಕೊಳ್ಳಬಹುದು ಎಂದು ಹೇಳಿದರು.
ಕ್ರೀಡಾಕೂಟದಲ್ಲಿ ಕಸಬಾ ಹೋಬಳಿಯ 12 ಶಾಲೆಯ ಸುಮಾರು 600 ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಈ ಕ್ರೀಡಾಕೂಟದಲ್ಲಿ ಓಟದ ಸ್ವರ್ಧೆ,ಎತ್ತರ ಜಿಗಿತ,ಉದ್ದ ಜಿಗಿತ,ವಾಲಿಬಾಲ್,ಥ್ರೋ ಬಾಲ್,ಬಾಲ್ ಬ್ಯಾಡ್ಮಿಂಟನ್,ಕಬ್ಬಡಿ, ಖೋಖೋ ಪಂದ್ಯಗಳಿದ್ದು ವಿದ್ಯಾರ್ಥಿಗಳು ಅತ್ಯಂತ ಹುಮ್ಮಸ್ಸಿನಿಂದ ಪಾಲ್ಗೊಂಡು ಗೆಲುವಿಗಾಗಿ ಸೆಣಸಾಡಿದರು .
ಕಾರ್ಯಕ್ರಮದಲ್ಲಿ ಎಸ್.ಮಾನಸ ಪ್ರೌಢಶಾಲೆಯ ಸಂಸ್ಥಾಪಕ ಕಾರ್ಯದರ್ಶಿಯಾದ ಡಿ. ಸಿ. ಸಣ್ಣ ಸ್ವಾಮಿ, ತಾಲ್ಲೂಕು ದೈಹಿಕ ಶಿಕ್ಷಕ ಪರಿವೀಕ್ಷಕರಾದ ಕುಶವಂತ್,ಎಸ್. ಮಾನಸ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ದೇವರಾಜು, ದೈಹಿಕ ಶಿಕ್ಷಕರಾದ ಸುಧಾಕರ್ ಬಾಬು,ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಆನಂದ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ,ಪತ್ರಕರ್ತರಾದ ಧರ್ಮರಾಜ್,ರೇಣುಕಾರಾಧ್ಯ,ಸಂತ ಜೋಸೆಫ್ ಪ್ರೌಢಶಾಲೆಯ ದೈಹಿಕ ಶಿಕ್ಷಕಾರದ ವಲೇರಿಯನ್ ರೋನಾಲ್ಡ್ ಗೋವಿಯಸ್ ಮೊದಲಾದವರು ಉಪಸ್ಥಿತರಿದ್ದರು.
————————-ರಕ್ಷಿತ್ ಎಸ್ ಕೆ