ಸಕಲೇಶಪುರ-ಖಾಸಗಿ ವ್ಯಕ್ತಿಯೊಬ್ಬ ಹೇಮಾವತಿ ಸೇತುವೆಯಲ್ಲಿನ ಪಾದಚಾರಿ ಮಾರ್ಗಕ್ಕೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿದ್ದು ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ.ಕೂಡಲೇ ತಾಲೂಕು ಆಡಳಿತ ತೆರವಿಗೆ ಕ್ರಮ ಕೈಗೊಳ್ಳಬೇಕೆಂದು ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷರಾದ ಸಾಗರ್ ಜಾನೇಕೆರೆ ಆಗ್ರಹಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು ವ್ಯಕ್ತಿಯೊಬ್ಬ ಆಡಳಿತ ಯಂತ್ರದ ಭಯ ಇಲ್ಲದೆ ಸರಕಾರಿ ಸ್ವತ್ತಿಗೆ ಬ್ಯಾರಿಕೇಡ್ ಅಳವಡಿಸಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.ನಿಮ್ಮ ಮೂಲಕ ಆ ವ್ಯಕ್ತಿಗೂ ಬ್ಯಾರಿಕೇಡ್ ತೆರವುಗೊಳಿಸಲು ತಿಳುವಳಿಕೆ ನೀಡಲಾಗುತ್ತಿದೆ.ಜೊತೆಗೆ ತಾಲೂಕು ಆಡಳಿತಕ್ಕೂ ಸಹ ಆ ಬ್ಯಾರಿಕೇಡ್ ಗಳ ತೆರವುಗೊಳಿಸಲು ಹಾಗು ಅಲ್ಲಿ ಅಳವಡಿಸಲಾಗಿರುವ ಅನಧಿಕೃತ ಜಾಹೀರಾತು ಫಲಕಗಳ ವಿರುದ್ಧ ಕ್ರಮ ಕೈಗೊಳ್ಳಲು ಗಡುವು ನೀಡಲಾಗುತ್ತಿದೆ.
ಒಂದೆರಡು ದಿನಗಳಲ್ಲಿ ಕ್ರಮ ಕೈಗೊಳ್ಳದೇ ಹೋದಲ್ಲಿ ಪ್ರತಿಭಟನೆಗೆ ಮುಂದಾಗುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
———-ರಕ್ಷಿತ್