ಸಕಲೇಶಪುರ:ತಾಲೂಕಿಗೆ ಅನ್ಯಾಯ ಮಾಡಿ ಎತ್ತಿನಹೊಳೆ ಯೋಜನೆ ಮೂಲಕ ಇಲ್ಲಿನ ನೀರನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಸ್ಥಳೀಯರಿಗೆ ಮೂಲಭೂತ ಸೌಕರ್ಯ ಒದಗಿಸಿದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಸಿಮೆಂಟ್ ಮಂಜು ಎಚ್ಚರಿಸಿದಾರೆ.
ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು,ಅತಿವೃಷ್ಟಿ ಹಾನಿಯಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಆಲೂರು ಸಕಲೇಶಪುರ ಕಟ್ಟಾಯ ಭಾಗಕ್ಕೆ ಕಾಂಗ್ರೆಸ್ ಸರ್ಕಾರ ಒಂದು ಬಿಡಿಗಾಸು ನೀಡಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್,ಹಾಗೂ ಸಚಿವ ಸಂಪುಟದ ಕೆಲ ಮಂತ್ರಿಗಳು ಸಕಲೇಶಪುರ ಭಾಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಲೆನಾಡಿನಲ್ಲಿ ಸುರಿದ ಬಾರಿ ಮಳೆಗೆ ಸಂಪೂರ್ಣ ಹಾಳಾಗಿರುವ ಹಲವಾರು ರಸ್ತೆಗಳನ್ನು ತೋರಿಸಿ ಅನುದಾನಕ್ಕೆ ಮನವಿ ಮಾಡಲಾಗಿತ್ತು ಜೊತೆಗೆ ಬೆಳೆ ಹಾನಿ ಬಗ್ಗೆ ಕೂಡ ಸಿಎಂ ಅವರಿಗೆ ಮತ್ತು ಉಪ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಕೊಡಲಾಗಿತ್ತು.ಆ ಬಳಿಕ ಹಣ ಬಿಡುಗಡೆ ಮಾಡುವ ಸಲುವಾಗಿ ಹತ್ತಾರು ಬಾರಿ ಮನವಿಗಳನ್ನು ಮಾಡಿದರು ಕೂಡ ಸ್ಪಂದನೆ ಸಿಕ್ಕಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಒಂದೆಡೆ ಎತ್ತಿನಹೊಳೆ ಇನ್ನೊಂದಡೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಇಲ್ಲಿನ ಪ್ರಕೃತಿಗೆ ಅಪಾರ ಪ್ರಮಾಣದ ಹಾನಿಯಾಗಿದೆ.ಜೊತೆಗೆ ಗುಡ್ಡ ಕುಸಿತ ಉಂಟಾಗಿದೆ,ಇವೆಲ್ಲದಕ್ಕೂ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಕ್ಷೇತ್ರದ ಜನರಿಗೆ ಉಗ್ರ ಹೋರಾಟಕ್ಕೆ ಕರೆಕೊಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.