ಕೆ.ಆರ್.ಪೇಟೆ: ಪಟ್ಟಣದಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆ.ಪಿ.ಎಸ್) ಶಾಲೆಯ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾಗಿ ಚಿಕ್ಕೋನಹಳ್ಳಿ ಸಿ.ಬಿ ಚೇತನ್ ಕುಮಾರ್ ಆಯ್ಕೆಯಾಗಿದ್ದಾರೆ.
16 ಮಂದಿ ಎಸ್.ಡಿ.ಎಂ.ಸಿ ಸದಸ್ಯರ ಸಂಖ್ಯಾಬಲ ಹೊಂದಿರುವ ಶಾಲೆ ಇದಾಗಿದ್ದು,ಆಯ್ಕೆ ಪ್ರಕ್ರಿಯೆಯಲ್ಲಿ ಇಬ್ಬರು ಸದಸ್ಯರು ಗೈರಾಗಿದ್ದರು.
ಉಪಾಧ್ಯಕ್ಷ ಸ್ಥಾನ ಬಯಸಿ ಸ್ಪರ್ಧಿಸಿದ್ದ ಗಂಗಾಧರ್ 5 ಮತ ಪಡೆದುಕೊಂಡರೆ, ಚಿಕ್ಕೋನಹಳ್ಳಿ ಸಿ.ಬಿ ಚೇತನ್ ಕುಮಾರ್ 9 ಮತ ಪಡೆದು ಉಪಾಧ್ಯಕ್ಷರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಪ್ರಾಂಶುಪಾಲ ಸತ್ಯ ಪ್ರಕಟಿಸಿದರು.
ಅಭಿನಂದನೆ ಹಾಗೂ ಅಧಿಕಾರ ಸ್ವೀಕರಿಸಿ ಮಾತನಾಡಿದ ಚಿಕ್ಕೋನಹಳ್ಳಿ ಸಿ.ಬಿ ಚೇತನ್ ಕುಮಾರ್ ಸರ್ಕಾರಿ ಶಾಲೆಗಳೆಂದರೆ ದೇಶಕ್ಕೆ ಕೀರ್ತಿ ತರುವ ಅಮೂಲ್ಯ ರತ್ನಗಳ ರೂಪಿಸುವ ದೇವಸ್ಥಾನಗಳಿದ್ದಂತೆ,ಶಾಲೆಯ ಸರ್ವತೋಮುಖ ಪ್ರಗತಿಗಾಗಿ ನನಗೆ ತಾವೆಲ್ಲರೂ ಜವಾಬ್ದಾರಿ ನೀಡಿದ್ದೀರಿ.ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ನನ್ನ ಅಧಿಕಾರದ ಅವಧಿಯಲ್ಲಿ ಕೈಜೋಡಿಸಿ ಕೆಲಸ ಮಾಡುತ್ತೇನೆ. ಖಾಸಗಿ ಶಾಲೆಗಳು ನಾಚುವಂತೆ ಗುಣಮಟ್ಟದ ಶಿಕ್ಷಣ ಜೊತೆಗೆ ತಾಲೂಕಿನಲ್ಲಿ ಹೆಚ್ಚು ವಿದ್ಯಾರ್ಥಿಗಳ ಸಮೂಹ ಒಂದಿರುವ ಈ ಶಾಲೆಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಶಿಕ್ಷಣ ಇಲಾಖೆ, ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ಹಾಗು ದಾನಿಗಳ ಸಹಕಾರ ಪಡೆದು ಶಾಲಾ ಅಭಿವೃದ್ಧಿಗೆ ಶ್ರಮವಹಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲ ಸತ್ಯ, ಉಪ ಪ್ರಾಂಶುಪಾಲ ತಿಮ್ಮೇಗೌಡ,ನಾಮ ನಿರ್ದೇಶಕ ಪುಟ್ಟಸ್ವಾಮಿ, ಎಸ್. ಡಿ.ಎಂ.ಸಿ ಸದಸ್ಯರಾದ ಪಿ.ಎಸ್ ಲೋಕೇಶ್ ಪುರ, ಜಗದೀಶ್ ಪಟೇಲ್, ಲಕ್ಷ್ಮಿಪ್ರಸನ್ನ, ವೆಂಕಟೇಶ್,ಮಂಜುನಾಥ್,ಫಾಜಿಯಾ ಬಾನು, ಸವಿತಾ, ಉಮಾ, ಬೂಕನಕೆರೆ ಸ್ವಾಮಿ, ಸೇರಿದಂತೆ ಉಪಸ್ಥಿತರಿದ್ದರು.
-ಮನು ಮಾಕವಳ್ಳಿ ಕೆ ಆರ್ ಪೇಟೆ