ಕೆ.ಆರ್ ಪೇಟೆ-ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಕಳಪೆ ಆರೋಪ-ಕ್ರಮಕ್ಕೆ ಶಾಸಕ ಹೆಚ್ ಟಿ ಮಂಜು ಸೂಚನೆ

ಕೆ. ಆರ್ ಪೇಟೆ:ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ಮಾಕವಳ್ಳಿ ಗ್ರಾಮದಲ್ಲೆ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಕಳಪೆಯಿಂದ ಕೂಡಿದೆ ಎನ್ನುವ ದೂರುಗಳು ಕೇಳಿಬಂದಿದ್ದು ಅಧಿಕಾರಿಗಳು ಪರಿಶೀಲನೆ ನಡೆಸಿ ಸತ್ಯವೇ ಆಗಿದ್ದಲ್ಲಿ ಆ ಗುತ್ತಿಗೆದಾರನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಹೆಚ್ ಟಿ ಮಂಜು ಸೂಚಿಸಿದರು.

ತಾಲ್ಲೂಕಿನ ಕೊಡಗಹಳ್ಳಿ,ಲಿಂಗಾಪುರ,ವಡ್ಡರಹಳ್ಳಿ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನಡೆಸಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ತಾಲ್ಲೂಕಿನ ಪ್ರತಿ ಮನೆಗೆ ಅನುಷ್ಠಾನಗೊಳ್ಳುತ್ತಿರುವ ಜಲಜೀವನ್ ಮಿಷನ್ ಯೋಜನೆ ವರದಾನವಾಗಿದೆ.ಇಂತಹ ಅತ್ಯದ್ಭುತ ಯೋಜನೆಯ ಕಾಮಗಾರಿಯನ್ನು ಪೂರ್ಣ ಗುಣಮಟ್ಟದಲ್ಲಿ ನಡೆಸಬೇಕು.ಈಗಾಗಲೇ ಕೆಲ ಗ್ರಾಮೀಣ ಭಾಗದಲ್ಲಿ ರಸ್ತೆಗಳು ಹದೆಗೆಟ್ಟಿವೆ ಗುತ್ತಿಗೆದಾರರು ಈ ಕಾಮಗಾರಿಯ ಹೆಸರಿನಲ್ಲಿ ಗ್ರಾಮದ ರಸ್ತೆಗಳ ಎಲ್ಲೆಂದರಲ್ಲಿ ಗುಂಡಿ ತೆಗೆದು ಅದ್ವಾನಗೊಳಿಸಬೇಡಿ.ರಸ್ತೆ ತುಂಡುಮಾಡಿ ಪೈಪ್ ಅಳವಡಿಸಿದಾಗ ಮತ್ತೆ ರಸ್ತೆಯನ್ನು ಸರಿಪಡಿಸಬೇಕು.ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳೀಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸಮರ್ಪಕವಾಗಿ ಮೇಲ್ವಿಚಾರಣೆ ನಡೆಸಬೇಕು.ಅಧಿಕಾರಿಗಳು ಯೋಜನೆ ನೀಲನಕ್ಷೆ, ಕ್ರಿಯಾಯೋಜನೆ ತಯಾರಿಸುವಾಗ ನೀತಿ ನಿಯಮಗಳಿಗೆ ಜೋತು ಬೀಳದೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ವಲ್ಪಮಟ್ಟಿನ ಬದಲಾವಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಶ್ಮಿ,ಸಹಾಯಕ ಇಂಜಿನಿಯರ್ ಪ್ರವೀಣ್, ಸ್ವಾಮಿ,ತಾ.ಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್,ಗ್ರಾ.ಪಂ ಸದಸ್ಯರಾದ ಜ್ಯೋತಿ ಹರೀಶ್,ಮಾಕವಳ್ಳಿ ಎಂ.ಆರ್ ಮಂಜುಗೌಡ,ಮುಖಂಡರಾದ ಲಿಂಗಾಪುರ ಯಡಿಯೂರಪ್ಪ ಲಿಂಗರಾಜಪ್ಪ,ಪುಟ್ಟಬಸಪ್ಪ, ಚನ್ನಬಸಪ್ಪ , ಬಸವರಾಜು,ಹೆಗ್ಗಡಹಳ್ಳಿ ಅಲೋಕ್ ಕುಮಾರ್,ರಾಜು,ದಿನೇಶ್ ಡೇರಿ ಲೋಕೇಶ್, ವಡ್ಡರಹಳ್ಳಿ ಸೋಮೇಶ್, ಮಂಜುನಾಥ್,ಪಿಡಿಓ ಶೈಲಜಾ, ಸಾರಂಗಿ ಗ್ರಾ. ಪಂ ಅಧ್ಯಕ್ಷೆ ಹೇಮಾಕ್ಷಮ್ಮ ಹೊನ್ನೇಗೌಡ , ಉಪಾಧ್ಯಕ್ಷೆ ಸಿ.ಎಸ್ ರಾಜು,ಸದಸ್ಯ ಕೆ. ಮಂಜುನಾಥ್, ನಂಜಪ್ಪ, ರಮೇಶ್, ನವೀನ್,ಮಾಜಿ ಅಧ್ಯಕ್ಷೆ ಮಹದೇವಮ್ಮ, ಪಿಡಿಓ ದಿನೇಶ್, ಮುಖಂಡ ತಮ್ಮೆಗೌಡ ರಾಮಕೃಷ್ಣೇಗೌಡ, ಲಕ್ಕೆಗೌಡ, ನಾಗರಾಜು, ಪುನೀತ್, ಮನು, ಧರ್ಮರಾಜು, ರಘು, ರಮೇಶ್,ಮಾಕವಳ್ಳಿ ಡೇರಿ ರಾಮಚಂದ್ರು, ಯುವ ಮುಖಂಡ ಮಧು ಪಟೇಲ್,ರಾಜು,ಸುರೇಶ, ಯಶವಂತ, ಗುತ್ತಿಗೆದಾರರಾದ ಮೈಸೂರು ಮಹೇಶ, ಬ್ಯಾಲದಕೆರೆ ಮರಿಗೌಡ, ಕೃಷ್ಣೆಗೌಡ,ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್,ಸೇರಿದಂತೆ ಉಪಸ್ಥಿತರಿದ್ದರು

ವರದಿ- ಮನು ಮಾಕವಳ್ಳಿ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?