ಕೆ.ಆರ್.ಪೇಟೆ-ಪ್ರಸಿದ್ಧ ಕಾರ್ಯಸಿದ್ಧಿ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಕಡೆಯ ಶ್ರಾವಣ ಶನಿವಾರದ ಪ್ರಯುಕ್ತ ಪೂಜಾ ಸಮಾರಂಭ

ಕೆ.ಆರ್.ಪೇಟೆ:ಪಟ್ಟಣದ ಪ್ರಸಿದ್ಧ ಕಾರ್ಯಸಿದ್ಧಿ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಕಡೆಯ ಶ್ರಾವಣ ಶನಿವಾರದ ಪ್ರಯುಕ್ತ ಪೂಜಾ ಸಮಾರಂಭ ಹಾಗು ಪಲ್ಲಕಿ ಉತ್ಸವ ನೆರವೇರಿತು.

ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸುರೇಶ್ ಕುಮಾರ್‌ ನೇತೃತ್ವದಲ್ಲಿ ಮುಂಜಾನೆಯಿಂದ ಶ್ರೀ ಕಾರ್ಯಸಿದ್ಧಿ ಆಂಜನೇಯಸ್ವಾಮಿ ಮೂರ್ತಿಗೆ ಹಾಲು,ಮೊಸರು,ಕಲ್ಲುಸಕ್ಕರೆ ಗೊಡಂಬಿ, ದ್ರಾಕ್ಷಿ, ಅರಿಶಿನ- ಕುಂಕುಮದಿಂದ ಆಭಿಷೇಕವನ್ನು ನೆರವೇರಿಸಿ ದೇವರ ಮೂರ್ತಿಗೆ ವಿವಿಧ ಬಗೆಯ ಹೂವು ಹಾಗು ಆಭರಣಗಳಿಂದ ಆಲಂಕಾರವನ್ನು ಮಾಡಲಾಗಿತ್ತು.

ಮಧ್ಯಾಹ್ನದ ನಾಲ್ಕು ಗಂಟೆಯ ಸಮಯದ ನಂತರ ಉತ್ಸವ ಮೂರ್ತಿಗೆ ಹೂವಿನ ಆಲಂಕಾರವನ್ನು ಮಾಡಿ ವಿಶೇಷವಾದ ಪೂಜೆಯನ್ನು ನೇರವೇರಿಸಲಾಯಿತು.

ಈ ಸಂದರ್ಭದಲ್ಲಿ ವಿವಿಧ ಕಲಾವಿದರಿಂದ ವೀರಗಾಸೆ,ಮಂಗಳವಾದ್ಯ,ಡೊಳ್ಳು ಕುಣಿತ,ಆಂಜನೇಯ,ಈಶ್ವರ ಹುಲಿ ವೇಷ ಸೇರಿದಂತೆ ವಿವಿಧ ಭಕ್ತರ ಕಣ್ಮನ ಸೆಳೆಯುವ ಕಾರ್ಯಕ್ರಮಗಳು ನಡೆದವು.

ಪೂಜಾ ಸಮಾರಂಭ ಮತ್ತು ಪಲ್ಲಕಿ ಉತ್ಸವದ ನೇತೃತ್ವವನ್ನು ತೆಂಡೆಕೆರೆಯ ಬಾಳೆಹೊನ್ನೂರು ಶಾಖಾಮಠದ ಶ್ರೀ ಶ್ರೀ ಗಂಗಾಧರ್ ಶಿವಾಚಾರ್ಯಸ್ವಾಮಿಜೀ,ಸಮಾಜ ಸೇವಕರಾದ ಆರ್‌ಟಿಓ ಮಲ್ಲಿಕಾರ್ಜುನ್,ಟಿ.ಎ.ಪಿ.ಸಿ ಎಂ.ಎಸ್ ಮಾಜಿ ನಿರ್ದೇಶಕರಾದ ಹೆಚ್.ಟಿ ಲೋಕೇಶ್,ಶ್ರೀ ಕುವೆಂಪು ಕನ್ನಡ ಗೆಳೆಯರ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಕೆಬಿಸಿ ಮಂಜುನಾಥ್,ಶ್ರೀ ಕಾರ್ಯಸಿದ್ಧಿ ಆಂಜನೇಯಸ್ವಾಮಿ ಟ್ರಸ್ಟಿನ ಸದಸ್ಯರು ಹಾಗು ಯುವಕರು ವಹಿಸಿದ್ದರು.

ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.

—– ಮನು ಮಾಕವಳ್ಳಿ

Leave a Reply

Your email address will not be published. Required fields are marked *

× How can I help you?