ಕೆ.ಆರ್.ಪೇಟೆ-ಭೂ ವರಹನಾಥ ಕ್ಷೇತ್ರಕ್ಕೆ ಮೇಘಾಲಯ ರಾಜ್ಯಪಾಲ ಸಿ. ಹೆಚ್. ವಿಜಯಶಂಕರ್ ಭೇಟಿ

ಕೆ.ಆರ್.ಪೇಟೆ:ಭೂ ವರಹನಾಥ ಕ್ಷೇತ್ರವು ರಾಜ್ಯದ ಪ್ರಮುಖ ತೀರ್ಥ ಕ್ಷೇತ್ರವಾಗಿ ಅಭಿವೃದ್ಧಿ ಹೊಂದುತ್ತಿದೆ.ಭೂ ವೈಕುಂಠ ವೆಂದೇ ಪ್ರಖ್ಯಾತಿ ಗಳಿಸಿರುವ ಕ್ಷೇತ್ರದ ಮಣ್ಣಿಗೆ ವಿಶೇಷ ಶಕ್ತಿಯಿದೆ. ಕಳೆದ ಆರು ತಿಂಗಳ ಹಿಂದೆ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಕ್ಷೇತ್ರಕ್ಕೆ ಬಂದು ಸ್ವಾಮಿಯ ಶಿಲಾ ಮೂರ್ತಿಗೆ ಪೂಜೆ ಸಲ್ಲಿಸಿ ಹೋಗಿದ್ದೆ.ಭೂ ವರಹನಾಥ ಸ್ವಾಮಿಯ ಕೃಪೆ ರಾಷ್ಟ್ರ ಪತಿಗಳಾದ ದ್ರೌಪದಿ ಮುರ್ಮು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋಧಿ ಅವರ ಆಶೀರ್ವಾದದ ಬಲದಿಂದ ಇಂದು ರಾಜ್ಯಪಾಲ ಹುದ್ದೆಗೇರಿ ಇಲ್ಲಿಗೆ ಬಂದು ಭಗವಂತನಿಗೆ ನಮಿಸಿದ್ದೇನೆ ಎಂದು ಮೇಘಾಲಯ ರಾಜ್ಯಪಾಲ ಸಿ. ಹೆಚ್. ವಿಜಯಶಂಕರ್ ಹೇಳಿದರು.

ಕುಟುಂಬ ಸಮೇತರಾಗಿ ಕಲ್ಲಹಳ್ಳಿಯ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ಭೂವರಹನಾಥ ದೇವಾಲಯಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಇಂದು ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದು ಸಂತೋಷ ತಂದಿದೆಯಲ್ಲದೆ, ಸಂತೃಪಿಯ ಮನೋಭಾವನೆ ಮೂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.ದೇಶದ ರಾಜ್ಯದ ಜನರಿಗೆ ಒಳ್ಳೆಯದಾಗಲಿ ಎಂದು ಸ್ವಾಮಿಯವರಲ್ಲಿ ಪ್ರಾರ್ಥಿಸಿದ್ದಾಗಿಯೂ ಅವರು ತಿಳಿಸಿದರು.

ಮುಂದುವರೆದು ಮಾತನಾಡಿ ನಾನು ರಾಜ್ಯಪಾಲನಾಗಿ ಅಧಿಕಾರ ಸ್ವೀಕರಿಸಿದ ನಂತರ ರಾಜಭವನದಲ್ಲಿ ಮದ್ಯಪಾನ ಮಾಂಸ ಆಹಾರ ನಿಷೇಧಿಸಿದ್ದೇನೆ ಪ್ರಧಾನಿ ಮೋದಿಜಿ ಅವರ ಸೂಚನೆಯಂತೆ ಬುಡಕಟ್ಟು ಜನರ ಬಳಿಗೆ ಹೋಗಿ ಸಮಸ್ಯೆ ಆಲಿಸಿ,ರಾಜ ಭವನವನ್ನು ಶ್ರೀ ಸಾಮಾನ್ಯರ ಪ್ರವೇಶಕ್ಕೆ ಮುಕ್ತಗೊಳಿಸಿ ಸಂವಿಧಾನದ ಅಡಿಯಲ್ಲಿ ಬದ್ಧತೆಯಿಂದ ಕೆಲಸ ಮಾಡಿ ಮೈಸೂರಿನ ಕೀರ್ತಿಯನ್ನು ರಾಷ್ಟ್ರದ್ಯಂತ ಬೆಳಗಲು ಸಂಕಲ್ಪ ಮಾಡಿದ್ದೇನೆ ಎಂದು ವಿಜಯಶಂಕರ್ ಹೇಳಿದರು.

ಶ್ರೀ ಕ್ಷೇತ್ರಕ್ಕೆ ಆಗಮಿಸಿದ ರಾಜ್ಯಪಾಲ ವಿಜಯಶಂಕರ್ ಅವರನ್ನು ರಾಜ್ಯದ ಮಾಜಿ ಸಚಿವ ಡಾ. ನಾರಾಯಣಗೌಡ,ದೇವಾಲಯ ವ್ಯವಸ್ಥಾಪನ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸ ರಾಘವನ್,ತಹಸೀಲ್ದಾರ್ ಆದರ್ಶ ಹೃದಯಸ್ಪರ್ಶಿಯಾಗಿ ಸ್ವಾಗತಿಸಿ ಬರಮಾಡಿಕೊಂಡರು. ಪೂರ್ಣಕುಂಭ ಸ್ವಾಗತದೊಂದಿಗೆ ವೇದಮಂತ್ರಗಳನ್ನು ಪಠಿಸಿ ಶ್ರೀ ಕ್ಷೇತ್ರಕ್ಕೆ ಆಗಮಿಸಿದ ರಾಜ್ಯ ಪಾಲರನ್ನು ಬರಮಾಡಿಕೊಳ್ಳ ಲಾಯಿತು.

ಕೆ.ಆರ್.ಪೇಟೆ ತಾಲ್ಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಉಪಾಧ್ಯಕ್ಷ ಭಾರತೀಪುರ ಡಾ.ಪುಟ್ಟಣ್ಣ, ಮೂಡ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ಪುರಸಭೆ ಸದಸ್ಯ ಬಸ್ ಸಂತೋಷ್ ಕುಮಾರ್, ಬಿಜೆಪಿ ನಗರ ಮಹಿಳಾ ಘಟಕದ ಅಧ್ಯಕ್ಷೆ ಡಾ. ಚಂದ್ರಕಲಾ ರಮೇಶ್, ಚೋಕನಹಳ್ಳಿ ಪ್ರಕಾಶ್,ನಾಗಮಂಗಲ ಡಿವೈಎಸ್ ಪಿ ಡಾ. ಸುಮೀತ್, ಸರ್ಕಲ್ ಇನ್ಸ್ ಪೆಕ್ಟರ್ ಆನಂದೇಗೌಡ, ಟಿ.ಎಂ. ಪುನೀತ್ ಸೇರಿದಂತೆ ಬಿಜೆಪಿ ಮುಖಂಡರು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

———- ಮನು ಮಾಕವಳ್ಳಿ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?