ಮೈಸೂರು:ಚೆಸ್ ಭಾರತದ ಪುರಾತನ ಒಳಾಂಗಣ ಕ್ರೀಡೆಯಾಗಿದೆ.ರಾಜ ಮಹಾರಾಜರು ತಮ್ಮ ಬುದ್ದಿಗೆ ಚುರುಕು ನೀಡುವ ನಿಟ್ಟಿನಲ್ಲಿ ಈ ಆಟ ಆಡುತ್ತಿದ್ದರು.ಈ ಕ್ರೀಡೆಯನ್ನು ಭಾರತವು ಇಡೀ ಪ್ರಪಂಚಕ್ಕೆ ಕೊಡುಗೆಯಾಗಿ ನೀಡಿದೆ ಎಂದು ಲೈಫ್ ಸ್ಕಿಲ್ಸ್ ಫೌಂಡೇಷನ್ ಅಧ್ಯಕ್ಷರಾದ ಪಿ ಪುಷ್ಪಲತಾ ತಿಳಿಸಿದರು.
ಕುವೆಂಪು ನಗರದಲ್ಲಿ ತಮ್ಮ ಸಂಸ್ಥೆಯಿಂದ ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಚೆಸ್ ಸ್ಪರ್ಧೆಯಲ್ಲಿ ಜಯಶೀಲರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಸುಮಾರು ೬೦ ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವೈಷ್ಣವಿ ಎಲ್ ಪ್ರಥಮ, ದ್ವಿತೀಯ ಬಹುಮಾನವನ್ನು
ವೈಭವ ಎಚ್ ಆರ್, ತೃತೀಯ ಬಹುಮಾನವನ್ನು ಚಿರಾಗ್ ಹೆಗ್ಡೆ ಎಮ್ ಕ್ರಮವಾಗಿ ಪಡೆದುಕೊಂಡರು.
ಉತ್ತಮ ಸ್ಪರ್ಧೆ ನೀಡಿದ ಅರ್ಪನ್ ಅರುಣ್,ಕಿಶಾನ್ ಭಾರದ್ವಾಜ್ ಸಿ,ಚಿರಂತ್ ಬಿ,ಹಿಮಗ್ನ ಆರ್, ದರ್ಶಿಲ್ ಆರ್,ಹೃತ್ವಿಕ್ ಆರ್,ನವನೀತ್ ಎಂ ಕೆ,ಆರ್ಯನ್ ಜಿ ಕೆ,ನಕುಲ್,ಶ್ರಿಯನ್ ಗೌಡ ಎನ್ ಎಸ್,ನೆಚ್ಚಿನ್ ಆರ್,ಕನಿಷ್ಕ್ ,ಪ್ರಭವ್ ಭಟ್, ನೈನಿಕ ರವರುಗಳಿಗೆ ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಚದುರಂಗ ತರಬೇತುದಾರ ಸನ್ನತ್,ಕರುಣೆ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ರುಕ್ಮಿಣಿ ಎಚ್,
ಆರ್ ಆರ್ ಆರ್ ಎಸ್ಟೇಟಿನ ನಿರ್ದೇಶಕರಾದ ಲಾವಣ್ಯ ಮಹೇಶ್ ಎಲ್,ಚಾರುಲತಾ,ಅನುಷ,ಪ್ರಿಯಾಂಕಾ,ಆಕಾಶ್, ಹಾಗೂ ಇನ್ನಿತರರು ಹಾಜರಿದ್ದರು.