ತುಮಕೂರು-ಕೈಗಾರಿಕಾ-ನೀತಿ-2025-30-ಕೈಗಾರಿಕಾ-ಬೆಳವಣಿಗೆ-ಮತ್ತು-ಉದ್ಯೋಗ-ಸೃಷ್ಠಿಗೆ-ಪ್ರಗತಿಪರ-ಮಾರ್ಗಸೂಚಿ-ಜಿಲ್ಲಾ-ವಾಣಿಜ್ಯ-ಮತ್ತು- ಕೈಗಾರಿಕಾ-ಸಂಸ್ಥೆಯ-ಅಧ್ಯಕ್ಷ-ಪಿ.ಆರ್.-ಕುರಂದವಾಡ

ತುಮಕೂರು: ಕೈಗಾರಿಕಾ ನೀತಿ 2025-30 ಅನ್ನು ಸ್ವಾಗತಿಸಿರುವ ಜಿಲ್ಲಾ ವಾಣಿಜ್ಯ ಮತ್ತು  ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಪಿ.ಆರ್. ಕುರಂದವಾಡ ಅವರು, ಈ ನೀತಿಯು ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಠಿಗೆ ಪ್ರಗತಿಪರ ಮಾರ್ಗಸೂಚಿಯನ್ನು ಪ್ರಸ್ತುತಪಡಿಸುತ್ತದೆ.

20 ಲಕ್ಷ ಉದ್ಯೋಗಗಳನ್ನು ಸೃಷ್ಠಿಸುವ ಮತ್ತು 7.5 ಲಕ್ಷ ಕೋಟಿ ರೂ. ಮೌಲ್ಯದ ಹೂಡಿಕೆಗಳನ್ನು ಆಕರ್ಷಿಸುವ ಮಹತ್ವಾಕಾಂಕ್ಷೆಯ ಗುರಿಯೊಂದಿಗೆ ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿಗೆ ಭದ್ರ ಬುನಾದಿಯನ್ನು ಹಾಕುತ್ತದೆ ಎಂದು ಹೇಳಿದ್ದಾರೆ.


ಸಮಾನವಾದ ಪ್ರಾದೇಶಿಕ ಬೆಳವಣಿಗೆಯನ್ನು ಉತ್ತೇಜಿಸಲು, ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಸುಲಲಿತ ವ್ಯಾಪಾರ ವಹಿವಾಟನ್ನು ಹೆಚ್ಚಿಸಲು ಹಾಗೂ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಎಂ.ಎಸ್.ಎಂ.ಇ.ಗಳಿಗೆ ವಿಶೇಷ ಪ್ರೋತ್ಸಾಹದ ಜತೆಗೆ ಲಾಜಿಸ್ಟಿಕ್ ಮತ್ತು ದಾಸ್ತಾನು ಮಳಿಗೆ ಉದ್ಯಮವನ್ನು ಒಂದು ಪ್ರಮುಖ ಉದ್ಯಮವಾಗಿ ಪರಿಗಣಿಸಿರುವುದು ಸಮಾನ ಕೈಗಾರಿಕೀಕರಣದತ್ತ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಯಶಸ್ವಿ ಅನುಷ್ಠಾನವು ದೃಢವಾದ ಆಯವ್ಯಯದ ಬೆಂಬಲ ಮತ್ತು ಸ್ಪಷ್ಟ ಅನುಷ್ಠಾನ ಕಾರ್ಯ ವಿಧಾನಗಳನ್ನು ಅವಲಂಭಿಸಿರುತ್ತದೆ. ಕರ್ನಾಟಕ ಸರ್ಕಾರವು ಎಂ.ಎಸ್.ಎಂ.ಇ.ಗಳಿಗೆ ಘೋಷಿಸಲಾದ ಪ್ರೋತ್ಸಾಹ ಧನವನ್ನು ಆಯಾ ಹಣಕಾಸು ವರ್ಷಗಳ ಆಯವ್ಯಯ ಹಂಚಿಕೆಯಲ್ಲಿ ಸಮರ್ಪಕವಾಗಿ ಸೇರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.  


ವಿತರಣೆಯಲ್ಲಿನ ವಿಳಂಬವನ್ನು ತಪ್ಪಿಸಲು ಮತ್ತು ಹಣಕಾಸಿನ ಅನಿಶ್ಚಿತತೆಗಳಿಲ್ಲದೆ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಇದು ನಿರ್ಣಾಯಕವಾಗಿದೆ ಎಂದಿದ್ದಾರೆ.


ಹೆಚ್ಚುವರಿಯಾಗಿ ವಲಯ 3 ರ ಅಡಿಯಲ್ಲಿ ಸೂಕ್ಷ್ಮ ಕೈಗಾರಿಕೆಗಳಿಗೆ ಬಂಡವಾಳ ಹೂಡಿಕೆ ಉತ್ತೇಜನಾ ಸಹಾಯ ಧನವನ್ನು ವಲಯ -1 ಮತ್ತು 2 ಕ್ಕೆ ಮಾತ್ರ ಸೀಮಿತಗೊಳಿಸಲಾಗಿದ್ದರೂ, ದೊಡ್ಡ ಕೈಗಾರಿಕೆಗಳನ್ನು ಬೆಂಬಲಿಸುವ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳನ್ನು ವಲಯ -3 ರ ಅಡಿಯಲ್ಲಿ ಬಂಡವಾಳ ಹೂಡಿಕೆ ಉತ್ತೇಜನ ಸಹಾಯ ಧನವನ್ನು ಪರಿಗಣಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

× How can I help you?