ಬಣಕಲ್-ಬರೋಬ್ಬರಿ 75 ವಿದ್ಯಾರ್ಥಿಗಳು-7 ತರಗತಿಗಳು ಅಷ್ಟೂ ಜನ ವಿದ್ಯಾರ್ಥಿಗಳು ಹಾಗು ತರಗತಿಗಳ ನೋಡಿಕೊಳ್ಳಲು,ಅಲ್ಲದೆ ಎಲ್ಲಾ ಪಠ್ಯಗಳನ್ನು ಬೋಧಿಸಲು ಇರುವ ಶಿಕ್ಷಕರ ಸಂಖ್ಯೆ ಮಾತ್ರ ಎರಡೇ ಎರಡು…!!
ಈ ವಿಸ್ಮಯವನ್ನು ನೀವು ಕಾಣಲು ಮೂಡಿಗೆರೆ ತಾಲೂಕಿನ ಬಗ್ಗಸಗೋಡು ಸರಕಾರಿ ಪ್ರಾರ್ಥಮಿಕ ಶಾಲೆಗೆ ಬರಬೇಕಾಗುತ್ತದೆ.
ಸಹಜವಾಗಿ ಅದ್ಯಾವ ಹಾಳುಬಿದ್ದ ಶಾಸಕರು ಇದ್ದಾರ್ರೀ ಅಂತ ನೀವು ಕೇಳಬಹುದು..!!
ಕ್ಷಮಿಸಿ,ಅಲ್ಲಿ ಹಾಳುಬಿದ್ದ ಶಾಸಕರಿಲ್ಲ ಮಾಜಿ ಸಚಿವೆ ಮೋಟಮ್ಮನವರ ಮಗಳು ನಯನ ಮೋಟಮ್ಮರೆಂಬ ಪ್ರಬುದ್ಧ ವಕೀಲರೊಬ್ಬರು ಪ್ರಸ್ತುತ ಶಾಸಕಿಯಾಗಿ ಚುನಾಯಿತರಾಗಿದ್ದಾರೆ.
ಓ ಆಡಳಿತ ಪಕ್ಷದವರಲ್ಲವೇ ಮನಸ್ಸು ಮಾಡಿದರೆ ಚಿಟಿಕೆಹೊಡೆಯುವುದರಲ್ಲಿ ಈ ಸಮಸ್ಯೆ ಬಗೆಹರಿಸಬಹುದು ಎಂದು ನೀವು ಹೇಳಬಹುದು,..!!
ಹೌದು,ನಮಗೂ ಅದೇ ವಿಶ್ವಾಸ ಸದ್ಯಕ್ಕಂತೂ ಇದೆ..!!
ಈ ವರದಿ ಅವರಿಗೆ ತಲುಪುತ್ತಿದ್ದಂತೆ ಬಹುತೇಕ ಬಡವರ ಮಕ್ಕಳೇ ಓದುವ ಶಾಲೆಗೆ ಬಡವರದ್ದೇ ಪಕ್ಷ ಎಂದು ಗುರುತಿಸಿಕೊಂಡಿರುವ ಪಕ್ಷದ ಶಾಸಕಿಯೊಬ್ಬರು ಕಾಯಕಲ್ಪ ನೀಡಲು ಮುಂದಾಗುತ್ತಾರೆಂಬ ಭರವಸೆಯೊಂದಿಗೆ…..
ಶಾಲೆಗೆ ಶಿಕ್ಷಕರ ನೇಮಕ ಮಾಡಿಕೊಡಿ ನಮ್ಮ ಮಕ್ಕಳು ಮುಂದುವರೆಯಲಿ ಎಂದು ಆಗ್ರಹಿಸಿ ಪೋಷಕರು ಪ್ರತಿಭಟನೆ ಮಾಡಿದ್ದಾರೆ.ಮತ್ತೆ ಪ್ರತಿಭಟಿಸಲು ಅವರಲ್ಲಿ ಚೈತನ್ಯವಿಲ್ಲ ಯಾಕೆಂದರೆ ಮಗದೊಮ್ಮೆ ರಜೆ ಮಾಡಿದರೆ ಕೂಲಿ ಸಿಗುವುದಿಲ್ಲ….!!!
ಆದರೆ ಓಟು ಕೇಳಲು ನೀವು ಮತ್ತೊಮ್ಮೆ ಹೋದಾಗ,ಕಷ್ಟ ಅಂತ ಬರುತ್ತೆ….!!
——————–ಸೂರಿ ಬಣಕಲ್