ನಾಗಮಂಗಲ;ಮದ್ದೂರು ತಾಲ್ಲೂಕಿನ ಕೌಡ್ಲೆ ಗ್ರಾಮದಿಂದ ನಾಗಮಂಗಲ ತಾಲ್ಲೂಕಿನ ಗಡಿಭಾಗದ ಕುಡುಗುಬಾಳು ಗ್ರಾಮಕ್ಕೆ ಆಗಮಿಸಿದ್ದ “ಕರ್ನಾಟಕ ಸಂಭ್ರಮ 50 ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡದ” ಅಭಿಯಾನದ ಕರ್ನಾಟಕ ಜ್ಯೋತಿ ರಥಯಾತ್ರೆಯ ರಥವನ್ನು ತಹಶೀಲ್ದಾರ್ ಜಿ. ಎಂ.ಸೋಮಶೇಖರ್,ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್. ಸಿ.ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಯೋಗೇಶ್ ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಪೂರ್ಣ ಕುಂಭವನ್ನು ಹೊತ್ತು ಮತ್ತು ಜಾನಪದ ಕಲಾ ತಂಡ ಹಾಗೂ ಶಾಲಾ ವಿಧ್ಯಾರ್ಥಿಗಳು ರಸ್ತೆಯ ಉದ್ದಕ್ಕೂ ಮೆರವಣಿಗೆ ಹೋಗುತ್ತಿದ್ದು ನಾಗಮಂಗಲ ತಾಲ್ಲೂಕಿನ ಜನರಲ್ಲಿ ಕನ್ನಡಾಂಬೆಯ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ನಾಗಮಂಗಲ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರ್ನಾಟಕ ಜ್ಯೋತಿ ರಥಯಾತ್ರೆ ಸಂಚರಿಸಿ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ಶಾಲಾ ಮಕ್ಕಳು ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಯೋಗೇಶ್ ಅವರು ಕರ್ನಾಟಕ ಸಂಭ್ರಮ 50 ರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಕರ್ನಾಟಕ ಜ್ಯೋತಿ ರಥಯಾತ್ರೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ತಿಳಿಸಿದರು.
ಈ ಸಮಾರಂಭದಲ್ಲಿ ತಹಶೀಲ್ದಾರ್ ಜಿ.ಎಂ.ಸೋಮಶೇಖರ್,ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾಕ್ಟರ್ ರಮೇಶ್,ತಾಲ್ಲೂಕು ಪಂಚಾಯಿತಿ ಇ.ಓ ಸತೀಶ್,ಪುರಸಭೆ ಮುಖ್ಯಾಧಿಕಾರಿ ಸಿ.ಶ್ರೀನಿವಾಸ,ಬಿ.ಆರ್. ಸಿ.ರವೀಶ್,ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಣೆಚೆನ್ನಾಪುರ ಮಂಜೇಶ್,ಕನ್ನಡ ಸಂಘದ ಸಂಸ್ಥಾಪಕ ಅಧ್ಯಕ್ಷ ನಾ.ಸು. ನಾಗೇಶ್,ಕನ್ನಡ ಸಂಘದ ಅಧ್ಯಕ್ಷ ನಟರಾಜ್,ನಾಗಮಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಾಮಲಾಪುರ ಚಂದ್ರಶೇಖರ್,ದೇವಲಾಪುರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಡಿ.ಪಿ.ಗಿರೀಶ್,ಶಿಕ್ಷಣ ಸಂಯೋಜಕರಾದ ಮಂಜುನಾಥ್. ಪ್ರೀಯದರ್ಶಿನಿ. ಸಿ.ಆರ್. ಪಿ. ಪುಟ್ಟರಾಜ್ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಪಟ್ಣಣದ ಎಲ್ಲಾ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು