ನಾಗಮಂಗಲ-ತಾಯಂದಿರ ಹೆಸರಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಅತ್ಯಂತ ಉತ್ತಮವಾದದ್ದು-ನ್ಯಾ ಶಿವರಾಜ್

ನಾಗಮಂಗಲ-ತಾಯಂದಿರ ಹೆಸರಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಅತ್ಯಂತ ಉತ್ತಮವಾದದ್ದು,ಪರಿಸರ ನಶಿಸಿಹೋಗುತ್ತಿರುವ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂದು ಮಾನ್ಯ ಜೆ.ಎಂ.ಎಫ್. ಸಿ. ಸಿವಿಲ್ ನ್ಯಾಯಾಧೀಶರಾದ ಹೆಚ್.ಎಸ್. ಶಿವರಾಜುರವರುಹೇಳಿದರು.

ಅವರು ಪಾಲಗ್ರಹಾರ ಅಂಗನವಾಡಿ ಕೇಂದ್ರದ ಆವರಣದಲ್ಲಿ ಜಿಲ್ಲಾ ಪಂಚಾಯತ್ ಮಂಡ್ಯ,ತಾಲ್ಲೂಕು ಪಂಚಾಯತ್ ನಾಗಮಂಗಲ,ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಛೇರಿಗಳ ವತಿಯಿಂದ ಪೋಷಣ್ ಅಭಿಯಾನ ಮಾಸಾಚರಣೆ ಅಂಗವಾಗಿ ಆಯೋಜಿಸಿದ್ದ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಿಡವೊಂದನ್ನು ನೆಟ್ಟು ನಂತರ ಮಾತನಾಡಿದರು.

ಮನುಷ್ಯನಿಗೆ ಆಹಾರ ಎಷ್ಟು ಮುಖ್ಯವೋ ಸ್ವಚ್ಛವಾದ ಗಾಳಿಯು ಅಷ್ಟೇ ಮುಖ್ಯವಾಗಿರುತ್ತದೆ.ತಾಯಿಯ ಹೆಸರಿನಲ್ಲಿ ಒಂದು ಗಿಡಗಳನ್ನು ನೆಡುವುದರಿಂದ ಪರಿಸರವನ್ನು ಉಳಿಸಿದಂತೆ ಆಗುತ್ತದೆ.ಇದರ ಜೊತೆಗೆ ಸ್ವಚ್ಛವಾದ ಗಾಳಿಯ ಉಸಿರಾಟದಿಂದ ಮನುಷ್ಯನ ಆರೋಗ್ಯ ಚೆನ್ನಾಗಿ ಇರುತ್ತದೆ ಎಂದರು.

ಕೇವಲ ಪೋಷಣ್ ಅಭಿಯಾನದ ಮಾಸಾಚರಣೆಗೆ ಮಾತ್ರ ಗಿಡವನ್ನು ನೆಡುವುದಲ್ಲ.ನೆಟ್ಟ ಈ ಗಿಡವನ್ನು ಚೆನ್ನಾಗಿ ಬೆಳೆಸಿ ಅದರಿಂದ ಬರುವ ಪೌಷ್ಠಿಕವಾದ ಫಲವನ್ನು ಸೇವನೆ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳಿದರು.

ಅಂಗನವಾಡಿ ಕೇಂದ್ರ ವೀಕ್ಷಣೆ

ನ್ಯಾಯಾಧೀಶ ಹೆಚ್.ಎಸ್‌. ಶಿವರಾಜು ಅವರು ಗಿಡವನ್ನು ನೆಟ್ಟು ನಂತರ ಅಂಗನವಾಡಿ ಕೇಂದ್ರದ ಒಳಗೆ ಪ್ರವೇಶ ಮಾಡುತ್ತಿದ್ದಂತೆ ಪುಟಾಣಿ ಮಕ್ಕಳು ನಗು ಮುಖದಿಂದ ನ್ಯಾಯಾಧೀಶರನ್ನು ಸ್ವಾಗತಿಸಿದರು.

ಮಕ್ಕಳು ಸಾಮೂಹಿಕವಾಗಿ ಭಕ್ತಿ ಗೀತೆ ಹಾಡುವುದನ್ನು ಕೇಳಿ ನ್ಯಾಯಾಧೀಶರು ಸಂತಸ ವ್ಯಕ್ತಪಡಿಸಿದರು.

ಅಂಗನವಾಡಿ ಕೇಂದ್ರದ ಆವರಣದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ನ್ಯಾಯಾಧೀಶ ಹೆಚ್.ಎಸ್ ಶಿವರಾಜು ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಪಾಲಗ್ರಹಾರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾಂಜಲಿ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಕೆ. ಎನ್. ದಿವ್ಯಾ, ವಕೀಲರ ಸಂಘದ ಅಧ್ಯಕ್ಷ ಬ್ರಹ್ಮದೇವರಹಳ್ಳಿ ಮಹದೇವ, ಅಪರ ಸರ್ಕಾರಿ ವಕೀಲ ಪಿ‌.ಸಿ.ಮಂಜುನಾಥ್. ಎ. ಎಸ್ ಐ ಚನ್ನಬಸಪ್ಪ. ಗ್ರಾಮ ಪಂಚಾಯಿತಿ ಸದಸ್ಯ ವಿನಯಕುಮಾರ್ (ಪಾಪ), ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರೇಶ್, ಸಿ.ಆರ್. ಪಿ.ವೆಂಕಟೇಶ್, ಪಿ.ಟಿ.ತಿಮ್ಮಯ್ಯ ಸೇರಿದಂತೆ ಪಾಲಗ್ರಹಾರ ಪಂಚಾಯಿತಿ ಎಲ್ಲಾ ಸದಸ್ಯರುಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಪಾಲಗ್ರಹಾರ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.

————–ಬಿ ಹೆಚ್ ರವಿ

Leave a Reply

Your email address will not be published. Required fields are marked *

× How can I help you?