ಬಣಕಲ್:ಸಮಾಜದಲ್ಲಿ ದೈಹಿಕವಾಗಿ ಸದೃಢವಾಗಿರುವವರು ಮಾಡುವ ಸಾಧನೆಗಿಂತ ಅಂಗವೈಕಲ್ಯವಿರುವ ವಿಶೇಷ ಚೇತನರು ಸ್ವಾಭಿಮಾನದಿಂದ ಸ್ವಾವಲಂಬಿಗಳಾಗಿ ಬದುಕುವುದೇ ಒಂದು ಸಾಧನೆಯಾಗಿದೆ.ಆದ್ದರಿಂದ ಮಕ್ಕಳು ಅವರನ್ನು ಗೌರವದಿಂದ ಕಾಣುವುದರ ಜೊತೆಗೆ ಅವಶ್ಯಕ ಸಂದರ್ಭದಲ್ಲಿ ಅವರಿಗೆ ನೆರವಾಗುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಬಿ ಶಿವರಾಂ ಶೆಟ್ಟಿ ಕರೆ ನೀಡಿದರು.
ಶ್ರೀ ವಿದ್ಯಾ ಭಾರತಿ ವಿದ್ಯಾ ಸಂಸ್ಥೆ ಯಲ್ಲಿ ಹಮ್ಮಿಕೊಳ್ಳಲಾಗಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿ ಬಣಕಲ್ ಭಾಗದ ಒಟ್ಟು 8 ವಿಶೇಷ ಚೇತನ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ನಿಜಕ್ಕೂ ಮೆಚ್ಚುವ ಕೆಲಸ.ಇಂತಹ ಕಾರ್ಯಕ್ರಮಗಳನ್ನು ಬೇರೆ ಸಂಸ್ಥೆಯವರು ನಡೆಸಿ ವಿಶೇಷ ಚೇತನ ರಲ್ಲಿ ಹೊಸ ಭರವಸೆಯನ್ನು ಮೂಡಿಸುವಂತಹ ಕೆಲಸಗಳಿಗೆ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.
ಗೌರವವನ್ನು ಸ್ವೀಕರಿಸಿ ಮಾತನಾಡಿದ ವಿಶೇಷ ಚೇತನರಾದ ಶಶಿಕಲಾ ಪ್ರಮೋದ್ ಮತ್ತು ಗಿರೀಶ್ ಭಂಡಾರಿ ಮಾತನಾಡಿ ತಮ್ಮ ವಿದ್ಯಾಭ್ಯಾಸ ಮತ್ತು ಜೀವನ ಅದರಲ್ಲೂ ಸಮಾಜದಲ್ಲಿ ವಿಶೇಷ ಚೇತನರು ಎದುರಿಸುತ್ತಿರುವ ಸವಾಲುಗಳನ್ನು ತಿಳಿಸಿದರು.ವಿದ್ಯಾರ್ಥಿಗಳು ಯಾವುದೇ ರೀತಿಯ ಮಾನಸಿಕ ಒತ್ತಡಗಳಿಗೆ ಒಳಗಾಗದೆ ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಕಿವಿ ಮಾತುಗಳನ್ನು ಹೇಳಿದರು.
ಮತ್ತೊಬ್ಬ ವಿಶೇಷ ಚೇತನರಾದ ಮರ್ಕಲ್ ಸತೀಶ್ ಮಾತನಾಡಿ ನಮ್ಮಂತಹ ವಿಶೇಷ ಚೇತನರನ್ನು ಗುರುತಿಸಿ ಗೌರವಿಸಿದ ಸಂಸ್ಥೆಗೆ ಧನ್ಯವಾದಗಳನ್ನು ಸಮರ್ಪಿಸಿ ಪ್ರತಿಯೊಬ್ಬರೂ ಜೀವನದಲ್ಲಿ ಯಾವುದೇ ಕೀಳರಿಮೆಯಿಲ್ಲದೆ ಛಲದಿಂದ ಬದುಕುನಡೆಸಿದರೆ ಸಾಧನೆ ಹಾದಿಯಲ್ಲಿ ನಡೆಯಬಹುದಾಗಿದೆ ಎಂದರು
ಕಾರ್ಯಕ್ರಮವು ಬಹಳ ವಿಜೃಂಭಣೆ ಹಾಗೂ ಅರ್ಥಪೂರ್ಣವಾಗಿ ನೆರವೇರಿತು.
ಸಂಸ್ಥೆಯ ಪೂರ್ವಾಧ್ಯಕ್ಷರಾದ ಬಿ . ರಮೇಶ್ ಧ್ವಜಾರೋಹಣ ಮಾಡಿದರು.ಧ್ವಜವಂದನೆಯ ನಂತರ ವಿದ್ಯಾರ್ಥಿಗಳು ಘೋಷಣೆಯನ್ನು ಕೂಗುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಪಥಸಂಚಲನ ನಡೆಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಚೇತನ ವ್ಯಕ್ತಿಗಳಾದ ರೀನಾ ರೋಡ್ರಿಗಸ್,ಇಂತ್ರು ಕರ್ನಲಿಯೋ,ಸ್ವಾಮಿ. ಹಮ್ಜದ್ ಖಾನ್, ಪೂರ್ಣೇಶ್ ಮೂರ್ತಿ ಇವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಶಾಲಾ ಸಿಬ್ಬಂದಿಗಳಿಗೆ ಸಿಹಿ ವಿತರಿಸಿದ ಉಧ್ಯಮಿ ದಿನೇಶ್ ಶೆಟ್ಟಿ ಬಣಕಲ್ಇ ವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಶಾಲಾ ಸಮಿತಿಯ ಉಪಾಧ್ಯಕ್ಷರಾದ ಬಿ.ಇ.ಸುಬ್ರಾಯಗೌಡ,ಕಾರ್ಯದರ್ಶಿ, ಬಿ.ಪಿಲಿಂಗಪ್ಪ, ಕೋಶಾಧ್ಯಕ್ಷರಾದ ಯು.ಪಿ. ರಾಮಚಂದ್ರಹೊಳ್ಳ,ನಿರ್ದೇಶಕರಾದ ಬಿ.ಬಿ.ಮಂಜುನಾಥ್,ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಮಾಲತಿ.ಟಿ.ಆರ್, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ನಾಗರಾಜು.ಸಿ,ಉಪಮುಖ್ಯಶಿಕ್ಷಕರಾದ ವಸಂತ್ ಹಾರ್ಗೋಡು,ಶಿಕ್ಷಕರುಗಳಾದ ಶೇಖರಪ್ಪ,ಭಕ್ತೇಶ್,ವಿಜಯೇಂದ್ರ,ಲೀಲಾಮಣಿ. ಕುಸುಮ ಎಸ್ ಶೆಟ್ಟಿ ,ಗೀತಾ,ಕಮಲಮ್ಮ,ಶ್ವೇತ,ಪದ್ಮಶ್ರೀ,ಆಶಾ,ಅಶ್ವಿತಾ,ಲೋಕೇಶ್, ಲಿಂಗರಾಜು,ಪ್ರತಾಪ್,ಪೂಜಾ,ಅನುಪ,ಅನುಷಾ,ಆರೋಗ್ಯ ವಾಣಿ,ಶಾಲಾ ಅಡುಗೆ ಸಿಬ್ಬಂದಿ,ಪೋಷಕರು ಶಾಲಾ ವಾಹನ ಚಾಲಕರು ಭಾಗವಹಿಸಿದ್ದರು.
———————ಸುರೇಶ ಬಣಕಲ್