ಬಾಳ್ಳುಪೇಟೆಯ ಪ್ರದೀಪ್ ರಿಂದ ರಕ್ಷಿತ್ ಕೆ ಎಸ್ ರವರೆಗೆ…….!?

ಥಾಂಕ್ ಯು ರಕ್ಷಿತ್ ಎಸ್ ಕೆ ..!!

ಇದೇನಿದು ಅವರ ಪತ್ರಿಕೆಯ ವರದಿಗಾರಿಗೆ ಥ್ಯಾಂಕ್ಸ್ ಹೇಳುತ್ತಿದ್ದಾರಲ್ಲ ಎಂದು ನಿಮಗೆ ಆಶ್ಚರ್ಯವಾಗಬಹುದು.ಅದಕ್ಕೆ ಕಾರಣವಿದೆ.

ರಕ್ಷಿತ್ ಎಸ್.ಕೆ ನಮ್ಮ ತಂಡವನ್ನು ಸೇರಿ ಎರಡು ದಿನಗಳಾಗಿವೆಯಷ್ಟೇ.ಈ ಎರಡು ದಿನಗಳಲ್ಲಿಯೇ ಅತೀಮುಖ್ಯ ಎರಡು ವರದಿಗಳನ್ನು ಮಾಡಿ ಪತ್ರಕರ್ತರಿಗೆ ಇರಬೇಕಾದ ಸಾಮಾಜಿಕ ಬದ್ಧತೆಯನ್ನ ತೋರಿಸಿಕೊಟ್ಟಿದ್ದಾರೆ.

ನಿನ್ನೆ ಪ್ರಕಟಗೊಂಡಿದ್ದ ಅವರ ಮೊದಲ ವರದಿ ‘ಸಕಲೇಶಪುರ-ಪಾದಚಾರಿ ಮಾರ್ಗಕ್ಕೆ ಬ್ಯಾರಿಕೇಡ್-ತೆರವಿಗೆ ಸಾಗರ್ ಜಾನಕೆರೆ ಗಡುವು …!!’ ಗೆ ಉತ್ತಮ ಸ್ಪಂದನೆ ದೊರೆತು ಇಂದು ತಾಲೂಕು ಆಡಳಿತ ಖಾಸಗಿ ವ್ಯಕ್ತಿ(?)ಹಾಕಿದ್ದ ಬ್ಯಾರಿಕೇಡ್ ಗಳನ್ನುತೆರವುಗೊಳಿಸಿ ರಸ್ತೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತ ಗೊಳಿಸಿದೆ.

ಒಬ್ಬ ವರದಿಗಾರನಿಗೆ ಇದಕ್ಕಿಂತಲೂ ‘ಹಿರಿಮೆ’ಮತ್ತೇನಿರಲು ಸಾಧ್ಯ .? ಹಾಗೆಯೆ ಪತ್ರಿಕೆಗೂ.

ಜೊತೆಗೆ ಇಂದು ಮತ್ತೊಂದು ಸಾಮಾಜಿಕ ಕಳಕಳಿಯ ‘ಹಾಸನ’ದಲ್ಲಿ ಗಾಂ,ಜಾ ಭೂತಕ್ಕೆ ವಿದ್ಯಾರ್ಥಿಗಳು ಬಲಿ?ಸಕಲೇಶಪುರದಲ್ಲಿ ರಾಜಕಾರಣಿಗಳೇ ಗಾಂ,ಜಾ ವ್ಯಾಪಾರಿಗಳು…..!? ಎಂಬ ವರದಿ ಮಾಡಿ ದೊಡ್ಡ ಮಟ್ಟದ ಶಹಬ್ಬಾಶ್ ‘ಗಿರಿ’ ಪಡೆದುಕೊಂಡಿದ್ದಾರೆ.

ಹುಡುಗ ಚೆನ್ನಾಗಿ ಬರೆಯುತ್ತಾರೆ.ವಯಸ್ಸಿದೆ,ಅತ್ಯಂತ ಉತ್ಸಾಹವಿದೆ.ಯಾವ ಮೊಸಳೆಗಳ ಬಾಯಿಗೂ ಸಿಗದೇ ಮುಂದುವರೆಯಿರಿ ಎಂದು ಹಾರೈಸುತ್ತ…..

ಬಿ ಎನ್ ಪ್ರದೀಪ್ ಕುಮಾರ್ …..

ಇಂದು ರಾಜ್ಯದ ದೊಡ್ಡ ಪತ್ರಿಕೆಯೊಂದರಲ್ಲಿ ವರದಿಗಾರರಾಗಿರುವ ಪ್ರದೀಪ್ ಕುಮಾರ್ ಬಿ ಎನ್ ಮೂಲತಃ ಬಾಳ್ಳುಪೇಟೆಯವರು.ಬಾಳ್ಳುಪೇಟೆ ಪ್ರದೀಪ್ ಎಂದೇ ಪರಿಚಿತರು.ಇದಕ್ಕೂ ಹಿಂದೆ ನಮ್ಮ ಪತ್ರಿಕೆಯ
ಸಕಲೇಶಪುರ ತಾಲೂಕು ವರದಿಗಾರರಾಗಿದ್ದರು.ತದನಂತರ ಹಾಸನ ಜಿಲ್ಲಾ ವರದಿಗಾರರಾಗಿ,ಸ್ಥಾನಿಕ ಸಂಪಾದರಾಗಿಯೂ ಕಾರ್ಯನಿರ್ವಹಿಸಿದ್ದರು.

ಪತ್ರಿಕೋದ್ಯಮದೆಡೆಗಿನ ಅವರ ತುಡಿತ ಅನನ್ಯವಾದದ್ದು.ಇವತ್ತು ಸಕಲೇಶಪುರದಲ್ಲಿ ಪತ್ರಿಕೆ ಸಾಕಷ್ಟು ಜನರ ಮನದಲ್ಲಿದೆ ಎಂದರೆ ಅದಕ್ಕೆ ಕಾರಣ ಈ ಪ್ರದೀಪ್ ಬಾಳ್ಳುಪೇಟೆ.

ಪತ್ರಕರ್ತರಿಗೆ ಬಹುಮುಖ್ಯವಾಗಿ ಇರಲೇಬೇಕಾದ ಶುದ್ಧ ಹಸ್ತ ಹಾಗು ಅಕ್ಷರಗಳೆಡೆಗಿನ ಜ್ಞಾನ ಪ್ರದೀಪ್ ಗಿದೆ. ಹೊಟ್ಟೆಪಾಡಿಗೆ ಸಣ್ಣದೊಂದು ಹೋಟೆಲ್ ನಡೆಸುತ್ತಿದ್ದು ಅದರಲ್ಲಿ ಬರುವ ಬಹುತೇಕ ಲಾಭಾಂಶದ ಪಾಲನ್ನು ಸುದ್ದಿಗಳಿಗಾಗಿನ ತನ್ನ ಓಡಾಟಕ್ಕೆ ಬಳಸುತ್ತಾರೆ.ಒಂದು ದಿನವೂ ಒಬ್ಬರ ಪರವಾಗಿ ಮತ್ತೊಬ್ಬರ ವಿರುದ್ಧವಾಗಿ ನಿಂತು ವರದಿ ಮಾಡಿದ ವ್ಯಕ್ತಿಯಲ್ಲ.ಯಾವುದೇ ವಿಷಯದಲ್ಲಿ ಪತ್ರಿಕಾ ಧರ್ಮವನ್ನು ಬಿಟ್ಟು ಹೋದವರಲ್ಲ.

ಪತ್ರಿಕೆಗಾಗಿ ಅವರ ತ್ಯಾಗಗಳು ಸಾಕಷ್ಟಿವೆ ,,,

ದನ್ಯವಾದಗಳನ್ನಷ್ಟೇ ಹೇಳಬಹುದು.ಭವಿಷ್ಯ ಉಜ್ವಲವಾಗಲಿ…

—————————————————————-ಶ್ರೀನಿವಾಸ್ ಎನ್ ಪ್ರಧಾನ ಸಂಪಾದಕರು

Leave a Reply

Your email address will not be published. Required fields are marked *

× How can I help you?