ಬೇಲೂರು;ಸ್ವಾತಂತ್ರ್ಯ ಯೋಧರಾಗಿದ್ದ ಡಾ ಎನ್ ಎಸ್ ಹರ್ಡಿಕರ್ ರವರು ಬೇಲೂರಿಗೂ ಭೇಟಿ ನೀಡಿದ್ದರು.ಆ ನೆನಪಿಗೋಸ್ಕರ ಅವರ ಪ್ರತಿಮೆಯನ್ನು ಸ್ಥಾಪಿಸಿ ಗೌರವ ಅರ್ಪಿಸಲಾಗಿದೆ.ಇಂತಹ ಒಬ್ಬ ಅಪ್ರತಿಮ ದೇಶಭಕ್ತರಿಗೆ ಇಷ್ಟು ಗೌರವ ಸಾಲದು ಎನಿಸುತ್ತೆ ಎಂದು ಬೇಲೂರು ಹಳೆಬೀಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್ ತೌಫಿಕ್ ರವರು ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿರುವ ಡಾ ಎನ್ ಎಸ್ ಹರ್ಡಿಕರ್ ಪ್ರತಿಮೆಗೆ ಅವರ 48 ನೇ ಪುಣ್ಯಸ್ಮರಣೆಯ ಪ್ರಯುಕ್ತ ಮಾಲಾರ್ಪಣೆ ಮಾಡಿ ನೆರೆದಿದ್ದವರ ಉದ್ದೇಶಿಸಿ ಅವರು ಮಾತನಾಡಿದರು.
ಬೇಲೂರು ಪುರಸಭೆಯವರು ಈ ಸ್ಥಳವನ್ನು ಅಭಿವೃದ್ಧಿ ಮಾಡಿ ಮಹಾನ್ ಚೇತನದ ಆದರ್ಶಗಳನ್ನು ಜನರಿಗೆ ತಲುಪಿಸು ವಂತಹ ಕಾರ್ಯಕ್ಕೆ ಮುಂದಾಗಬೇಕು.ಸರಕಾರದಿಂದ ಅನುದಾನ ತಂದು ಈ ಕಾರ್ಯವನ್ನು ನಡೆಸಲಿ ನಮ್ಮ ಸಹಕಾರವು ಅವರೊಂದಿಗೆ ಇರುತ್ತದೆ ಎಂದು ಭರವಸೆಯನ್ನು ನೀಡಿದರು.
ಭಾರತ ಸೇವಾದಳದ ತಾಲೂಕು ಅಧ್ಯಕ್ಷರಾದ ಯುವರಾಜ್ ಮಾತನಾಡಿ ಯುವ ಸಮುದಾಯ ಡಾ ಎನ್ ಎಸ್ ಹರ್ಡಿಕರ್ ರವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಅವರ ಹಾದಿಯಲ್ಲಿಯೇ ನಡೆದರೆ ಯಶಸ್ಸು ದೊರೆಯುವುದರಲ್ಲಿ ಸಂಶಯವೇ ಇಲ್ಲ ಎಂದು ಹೇಳಿದರು.
ಭಾರತ ಸೇವಾದಳದ ಹಾಸನ ವಲಯ ಸಂಘಟಕರಾದ ರಾಣಿ ವಿ ಎಸ್ ರವರ ನೇತೃತ್ವದಲ್ಲಿ ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಚನ್ನಕೇಶವ ದೇವಸ್ಥಾನದ ಸುತ್ತ-ಮುತ್ತ ಹಾಗು ಸನಿಹದಲ್ಲೇ ಇರುವ ಕಲ್ಯಾಣಿಯ ಬಳಿ ಸ್ವಚ್ಛತಾ ಕಾರ್ಯವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕ ರಮೇಶ್,ವಿದ್ಯಾ ವಿಕಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ರಂಗನಾಥ್, ಪುರಸಭೆ ಸದಸ್ಯ ಭರತ್, ಬೇಲೂರು ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷೆ ಭಾರತೀ ಗೌಡ, ಗ್ರೀನರಿ ಟ್ರಸ್ಟ್ ಅಧ್ಯಕ್ಷರಾದ ರಿಜ್ವಾನ್ ಪಾಷಾ,ರಕ್ಷಿತ್ ಪ್ರಸಾದ್, ಸೋಮಶೇಖರ್ ಇದ್ದರು.
——————ನೂರ್ ಅಹಮ್ಮದ್