ಮೂಡಿಗೆರೆ-ನಯನ ಮೋಟಮ್ಮ ಮ್ಯಾಜಿಕ್-ಬಹುಮತವಿದ್ದರೂ ಬಿಜೆಪಿಗೆ ಸೋಲು;ಪ.ಪಂ.ಆಡಳಿತ ಕಾಂಗ್ರೆಸ್ ತೆಕ್ಕೆಗೆ

ಮೂಡಿಗೆರೆ:ಬಾರಿ ಕುತೂಹಲ ಮೂಡಿಸಿದ್ದ ಮೂಡಿಗೆರೆ ಪಟ್ಟಣ ಪಂಚಾಯಿತಿ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು.

ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದ್ದು, ಪ.ಪಂ.ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳನ್ನು ಕಾಂಗ್ರೆಸ್ ಪಡೆದುಕೊಂಡಿದೆ.

ಬಿಜೆಪಿಯಿಂದ ೧೧ನೇ ವಾರ್ಡ್ ಸದಸ್ಯೆ ಆಶಾ ಮೋಹನ್ ಅಧ್ಯಕ್ಷ,ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.ಪ.ರಿಶಿಷ್ಟ ಜಾತಿ ಸದಸ್ಯರಿಗೆ ಉಪಾಧ್ಯಕ್ಷ ಸ್ಥಾನ ಮೀಸಲಿದ್ದು ಬಿಜೆಪಿಯಲ್ಲಿ ಆ ವರ್ಗದ ಅಭ್ಯರ್ಥಿಗಳಿಲ್ಲದ ಕಾರಣ ಆ ಸ್ಥಾನಕ್ಕೆ ಸ್ಫಧಿಸಲು ಸಾಧ್ಯವಾಗಲಿಲ್ಲ.

ಪ.ಜಾತಿಯ ಕಾಂಗ್ರೆಸ್ ಸದಸ್ಯ ಹೆಚ್.ಪಿ.ರಮೇಶ್ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ನೀಡಿದ್ದರು.ಮತದಾನದಲ್ಲಿ ಅಧ್ಯಕ್ಷ ಸಾನದ ಆಕಾಂಕ್ಷಿ ಬಿಜೆಪಿ ಅಭ್ಯರ್ಥಿ ೫ ಮತ ಮಾತ್ರ ಪಡೆದು ಪರಾಭವಗೊಂಡರು.ಸದಸ್ಯರು ಕೈ ಎತ್ತುವ ಮೂಲಕ
ಮತದಾನ ನಡೆಸಲಾಯಿತು.

ಪ.ಪಂ.ನಲ್ಲಿ ಬಿಜೆಪಿ ೬ ಸದಸ್ಯರನ್ನು ಹೊಂದಿದ್ದು ಕಾಂಗ್ರೆಸ್ ೪ ಸದಸ್ಯರನ್ನು ಮಾತ್ರ ಹೊಂದಿದ್ದರು,ಹಿoದೆ ಜೆಡಿಎಸ್ ನಲ್ಲಿದ್ದ ಏಕೈಕ ಸದಸ್ಯೆ ಗೀತಾ ಅಜಿತ್ ರಂಜನ್ ಕುಮಾರ್,ಅವರು ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದು ಅವರ ಮತ ಮತ್ತು ಬಿಜೆಪಿ ಸದಸ್ಯ ಮಾಜಿ ಪ.ಪಂ.ಅಧ್ಯಕ್ಷ ಧರ್ಮಪಾಲ್,ಕಾಂಗ್ರೆಸ್ ಪರ ಮತ ಚಲಾಯಿಸಿದ ಪರಿಣಾಮ ಶಾಸಕಿ ನಯನಾ ಮೋಟಮ್ಮ ಅವರ ಮತ ಸೇರಿ ಕಾಂಗ್ರೆಸ್‌ಗೆ ೭ ಮತ ಲಭಿಸಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತದಾನಕ್ಕೆ ಗೈರಾದರು.೧೧ ಸದಸ್ಯರ ಪ.ಪಂ.ನಲ್ಲಿ ಬಿಜೆಪಿ ೬, ಕಾಂಗ್ರೆಸ್ ೪ ಸದಸ್ಯರನ್ನು ಹೊಂದಿದ್ದರೂ ಆಡಳಿತತ ಚುಕ್ಕಾಣಿ ಹಿಡಿಯಲು ಬಿಜೆಪಿಗೆ ಸಾಧ್ಯವಾಗಿಲ್ಲ.

ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ ಕಾಂಗ್ರೆಸ್ ಕೇವಲ ೪ ಸದಸ್ಯರನ್ನಿಟ್ಟುಕೊಂಡು ರಾಜಕೀಯ ತಂತ್ರಗಾರಿಕೆ ನಡೆಸುವ
ಮೂಲಕ ಬಿಜೆಪಿಗೆ ದಕ್ಕುವ ಅಧಿಕಾರವನ್ನು ಕಿತ್ತುಕೊಂಡು ಪ.ಪo. ಅಧಿಕಾರವನ್ನು ಪಡೆದುಕೊಳ್ಳುವಲ್ಲಿ
ಯಶಸ್ಸು ಕಂಡಿದೆ.

ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್,ಸದಸ್ಯರಾದ ಎಸ್.ಎಲ್.ಭೋಜೇಗೌಡ, ಸಿ.ಟಿ.ರವಿ ಅವರು
ಚಿಕ್ಕಮಗಳೂರು ನಗರಸಭೆಗೆ ಮತ ಚಲಾಯಿಸಿದ ಕಾರಣ ಮೂಡಿಗೆರೆ ಪಟ್ಟಣ ಪಂಚಾಯಿತಿಯಲ್ಲಿ ಅವರ ಮತವಿರಲಿಲ್ಲ.

ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಶಾಸಕಿ ನಯನಾ ಮೋಟಮ್ಮ ಮಾತನಾಡಿ ಆಡಳಿತ ಹಿಡಿಯಲು ಆರಂಭದಲ್ಲಿ ನಮಗೆ ಮನಸ್ಸಿರಲಿಲ್ಲ. ಜೆಡಿಎಸ್ ಸದಸ್ಯೆ ಗೀತಾ ಅಜಿತ್ ರಂಜನ್ ಕುಮಾರ್ ಅವರು ಕಾಂಗ್ರೆಸ್‌ಗೆ ಬಂದ ನಂತರ ನಾವು ಉತ್ಸಾಹ ತೋರಿದೆವು. ಬಿಜೆಪಿ ಸದಸ್ಯ ಜೆ.ಬಿ.ಧರ್ಮಪಾಲ್ ಬೆಂಬಲ ನೀಡಿದ್ದರಿoದ ಪ.ಪಂ. ಆಡಳಿತ ನಮ್ಮ ಪಾಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪಟ್ಟಣ ಅಭಿವೃದ್ದಿಯಲ್ಲಿ ಹಿಂದುಳಿದಿದೆ.ರಸ್ತೆ, ಚರಂಡಿ, ಶೌಚಗೃಹ ಯಾವುದೂ ಸರಿಯಿಲ್ಲ.ಪ.ಪಂ.ಪಟ್ಟಣದ ಅಭಿವೃದ್ದಿಗೆ ಈಗಾಗಲೇ ೨೨ ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ.ಪಟ್ಟಣದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಲಾಗುವುದು.ಪ.ಪಂ.ಅಧ್ಯಕ್ಷ ಉಪಾಧ್ಯಕ್ಷರ ಅವಧಿ ೧೫ತಿಂಗಳು ಮಾತ್ರ ಇದ್ದರೂ ನನ್ನ ಶಾಸಕ ಅವಧಿ ಇನ್ನೂ ೪ವರ್ಷವಿದೆ. ತನ್ನ ಅವಧಿಯಲ್ಲಿ ಪಟ್ಟಣದ ಎಲ್ಲ ಅಭಿವೃದ್ದಿ ಕೆಲಸವನ್ನು ನೆರವೇರಿಸುವುದಾಗಿ ತಿಳಿಸಿದರು.

ಶಾಸಕಿ ನಯನಾ ಮೋಟಮ್ಮ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ,ಮಾಜಿ ಸಚಿವೆ ಮೋಟಮ್ಮ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಜಿ.ಸುರೇಂದ,ಪ.ಪo.ಸದಸ್ಯರುಗಳಾದ ಕೆ.ವೆಂಕಟೇಶ್,ಹಂಝಾ, ಖುರ್ಷಿದ್‌ಬಾನು,ಧರ್ಮಪಾಲ್,ಅಣಜೂರು ಸುಬ್ರಾಯ ಗೌಡ ಸೇರಿದಂತೆ ಕಾಂಗ್ರೆಸ್
ಮುಖAoಡರು ಹಾಗೂ ಕಾರ್ಯಕರ್ತರು ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು.

ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ರಾಜಶೇಖರ್‌ಮೂರ್ತಿ ಕರ್ತವ್ಯ ನಿರ್ವಹಿಸಿದರು.

ವರದಿ:ವಿಜಯಕುಮಾರ್, ಮೂಡಿಗೆರೆ.

Leave a Reply

Your email address will not be published. Required fields are marked *

× How can I help you?