ಮೂಡಿಗೆರೆ:ಅಧಿಕಾರದಲ್ಲಿದ್ದಾಗ ಪ.ಜಾತಿ.ಪ.ಪಂಗಡಗಳಿಗೆ ಮೀಸಲಿರಿಸಿದ್ದ ೪೫ ಸಾವಿರ ಕೋಟಿ ರೂ ಅನುದಾನವನ್ನು ಬಿಜೆಪಿ-ಜೆಡಿಎಸ್ ಪಕ್ಷಗಳು ದುರುಪಯೋಗಪಡಿಸಿಕೊಂಡಿದ್ದು ಈಗ ಕಾಂಗ್ರೆಸ್ ಮೇಲೆ ಗೂಬೆಕೂರಿಸುವ ಕೆಲಸಮಾಡಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿವೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಎಸ್.ಅನoತ್ ಆರೋಪಿಸಿದರು.
ಅವರು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ೨೦೧೩ರಲ್ಲಿ ಕಾಂಗ್ರೆಸ್ಸರ್ಕಾರ ಅಧಿಕಾರಕ್ಕೆ ಬಂದಾಗ ಪ.ಜಾತಿ.ಪ.ಪಂಗಡ ಅಭಿವೃದ್ದಿಗೆoದು ಪ್ರತ್ಯೇಕ ಯೋಜನೆ ಜಾರಿಗೊಳಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಎಸ್ಸಿ ಎಸ್ಟಿ ಕಾಯ್ದೆ ಜಾರಿಗೊಳಿಸಲಾಯಿತು.ಕಾಯ್ದೆ ಪ್ರಕಾರ ವಾರ್ಷಿಕ ಸರಾಸರಿ ಟಿಎಸ್ಪಿ ಅನುದಾನವನ್ನು ಬಜೆಟ್ನಲ್ಲಿ
ಮೀಸಲಿರಿಸಿಬೇಕು.ಆ ಅನುದಾನವನ್ನು ಇತರೆ ಉದ್ದೇಶಗಳಿಗೆ ಬಳಸಬಾರದು ಎಂದು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮಾಹಿತಿ ನೀಡಿದರು.
೨೦೧೮ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಎಸ್ಸಿ, ಎಸ್ಟಿ ಕಾಯ್ದೆ ಪ್ರಕಾರ ಬಜೆಟ್ ನಲ್ಲಿ ಮೀಸಲಿರಿಸಿದ ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲು ಕಾಯ್ದೆಗೆ ತಿದ್ದುಪಡಿ ತಂದು ಎಸ್ಸಿ ಎಸ್ಟಿ ಯೋಜನೆಯ ೧೫ಸಾವಿರ ಕೋಟಿ ರೂ. ಮತ್ತು ಅನಂತರ ಅಧಿಕಾರಕ್ಕೆ ಬಂದ ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಅವರ ಸರ್ಕಾರ ೩೦ ಸಾವಿರ ಕೋಟಿ ರೂ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದೆ. ಈಗ ಆ ಪಕ್ಷಗಳು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗೆ ೨೪ ಸಾವಿರಕೋಟಿ ರೂ ಅನುದಾನ ಬಳಸಿಕೊಂಡಿದೆ ಎಂದು ಆರೋಪಿಸುತ್ತಾ ಜನರ ದಿಕ್ಕು ತಪ್ಪಿಸುತ್ತಿದೆ.ಇಂತಹ ಸುಳ್ಳು ಅಪಪ್ರಚಾರವನ್ನು ಬಂಡವಾಳ ಮಾಡಿಕೊoಡಿರುವುದು ಅವರ ಘನತೆಗೆ ಶೋಭೆ ತರುವುದಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.
ರಾಜ್ಯಪಾಲರ ನಿಯಮಬಾಹಿರ ನಡೆಯನ್ನು ವಿರೋಧಿಸಿದ ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜ ಅವರ ಮನೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ ಚುನಾಯಿತ ಸರ್ಕಾರವನ್ನು ಅಸ್ತಿರಗೊಳಿಸಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.ಇದರಲ್ಲಿ ಆ ಪಕ್ಷಗಳು ಯಶಸ್ವಿಯಾಗುವುದಿಲ್ಲ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಗುರುತರವಾದ ಆರೋಪಗಳಿಲ್ಲ.ತನಿಖಾ ಸಂಸ್ಥೆಗಳು ತನಿಖೆ ನಡೆಸಿದ ಮೇಲೆ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಬೇಕು.ಆದರೆ ರಾಜ್ಯಪಾಲರು ನಿಯಮ ಉಲ್ಲಂಘಿಸಿದ್ದಾರೆ.
ಯಾರೋ ತಲೆತಿರುಕನೊಬ್ಬ ನೀಡಿದ ತಪ್ಪು ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಏಕಾಏಕಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ.೨೦೨೧ರಲ್ಲಿ ಬಿಜೆಪಿಯ ಶಶಿಕಲಾ ಜೊಲ್ಲೆ, ೨೦೨೩ರಲ್ಲಿ ಹೆಚ್.ಡಿ.ಕುಮಾರಸ್ವಾಮಿ,೨೦೨೪ರಲ್ಲಿ ಮುರುಗೇಶ್ ನಿರಾಣಿ ವಿರುದ್ದ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲು ರಾಜ್ಯಪಾಲರಿಗೆ ಅರ್ಜಿ ನೀಡಲಾಗಿದೆ.ಇದೇ ಆಗಸ್ಟ್ ೮ರಂದು ಎಸ್ಐಟಿ ಬಳಿ ರಾಜ್ಯಪಾಲರು ಸೃಷ್ಟೀಕರಣ ಕೇಳಿದ್ದರು.ಎಸ್ಐಟಿ ೮ ದಿನದಲ್ಲಿ ರಾಜ್ಯಪಾಲರಿಗೆ
ಸೃಷ್ಟೀಕರಣ ನೀಡಿದ್ದರೂ ಅವರ ವಿರುದ್ದದ ಪ್ರಾಸಿಕ್ಯೂಷನ್ಅ ರ್ಜಿಯನ್ನು ರಾಜ್ಯಪಾಲರ ಕಛೇರಿ ಇದುವರೆಗೆ ಇತ್ಯರ್ಥಗೊಳಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ನೀಡಿದ್ದ ಸುಳ್ಳು ಅರ್ಜಿಗೆ
ರಾಜ್ಯಪಾಲರ ಕಛೇರಿ ಸ್ಪಂದಿಸಿದೆ.ಇದು ಪಕ್ಷಪಾತವಲ್ಲದೆ ಮತ್ತಿನ್ನೇನು ಎಂದು ಪ್ರಶ್ನಿಸಿದರು.
----ವಿಜಯಕುಮಾರ್.ಟಿ.
ಸ.ಸo:೯೪೪೯೨೮೨೪೮೦