ಮೂಡಿಗೆರೆ:ನಾನು ಬಿಜೆಪಿಯಿಂದ ಹೊರಬಂದು ಕಾಂಗ್ರೆಸ್ ಪಕ್ಷ ಸೇರಿರುವುದು ಬಿಜೆಪಿಗರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ.ಮುಖಂಡರಿಗೆ ನನ್ನ ಬಗ್ಗೆ ಏನಾದರೂ ಹೇಳದಿದ್ದರೆ ನಿದ್ದೆ ಬರುವುದಿಲ್ಲ. ನಾನು ಬಿಜೆಪಿ ತ್ಯಜಿಸಿದ ಮೇಲೆ ಎಲ್ಲ ಕಡೆಯೂ ಆ ಪಕ್ಷ ಸೋಲು ಅನುಭವಿಸುತ್ತಿರುವುದರಿಂದ ಆ ಪಕ್ಷದ ಮುಖಂಡರು ಹತಾಶರಾಗಿ ಮೈ ಪರಚಿಕೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು,ಪ.ಪಂ.ನಲ್ಲಿ ೨ನೇ ಅವಧಿಯಲ್ಲಿ ಅಧಿಕಾರ ಹಿಡಿಯಲು ಮಾಜಿ ಪ.ಪಂ.ಅಧ್ಯಕ್ಷ ಜೆ.ಬಿ.ಧರ್ಮಪಾಲ್ ಮತ್ತು ಇತ್ತೀಚೆಗೆ ಪಕ್ಷ ಸೇರಿದ ಜೆಡಿಎಸ್ ಸದಸ್ಯೆ ಗೀತಾ ರಂಜನ್ ಅಜಿತ್,ಕುಮಾರ್ ಪಾತ್ರವಿದೆ.ಧರ್ಮಪಾಲ್ ಅವರು ಹಿಂದಿನ ಬಾರಿ ಅಧ್ಯಕ್ಷರಾಗಿ ಉತ್ತಮ ಕೆಲಸಮಾಡಿದ್ದಾರೆ.3 ಬಾರಿ ಶಾಸಕನಾಗಿದ್ದ ಅವಧಿಯಲ್ಲಿ ಪಟ್ಟಣದ ಅಭಿವೃದ್ದಿ ನಡೆಸಿದ್ದೇನೆ.ಈ ಬಾರಿ ಕಾಂಗ್ರೆಸ್,ಸರ್ಕಾರ ಮತ್ತು ಅದೇ ಪಕ್ಷದ ಶಾಸಕರು ಇರುವ ಕಾರಣ ಅಭಿವೃದ್ದಿ ಮತ್ತಷ್ಟು ಉತ್ತಮವಾಗಲಿದೆ.
ಬೇರೆ ಪಕ್ಷವನ್ನ ಟೀಕಿಸುವ ಅಗತ್ಯ ನನಗಿಲ್ಲ.ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಮುoದಿನ ಎಲ್ಲಾ ಚುನಾವಣೆಯಲ್ಲೂ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿಯಾಗಿದೆ.ಪ.ಪಂ.ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಬಳಿಕ ಅಭಿನಂದನಾ ಕಾರ್ಯಕ್ರಮದಲ್ಲಿ ನಾನು ಮಾತನಾಡಿದ ವಿಚಾರಕ್ಕೂ ಪತ್ರಿಕೆಯಲ್ಲಿ ಪ್ರಕಟಣೆಗೊಂಡಿರುವುದಕ್ಕೂ ಸ್ವಲ್ಪ ವ್ಯತ್ಯಾಸವಿದೆ. ಪ.ಪಂ.ನ ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡಿದಲ್ಲಿ ಪಟ್ಟಣ ಮತ್ತಷ್ಟು ಅಭಿವೃದ್ದಿ ಪಡಿಸಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ.
——————ವರದಿ: ವಿಜಯಕುಮಾರ್