ಮೂಡಿಗೆರೆ-ಹಳೆಯ-ಸಣ್ಣ ಮೊತ್ತದ ವಾಹನ ಹೊಂದಿದವರ ಬಿಪಿಎಲ್ ಕಾರ್ಡ್ಗಳ ರದ್ದತಿ ಬೇಡ -ಜಾಕೀರ್ ಹುಸೇನ್ ಒತ್ತಾಯ

ಮೂಡಿಗೆರೆ:ಸಣ್ಣಮೊತ್ತದ ಹಳೆಯ ಕಾರುಗಳನ್ನು ಹೊಂದಿರುವ ಬಿಪಿಎಲ್ ಪಡಿತರ ಚೀಟಿಯನ್ನು ಸರ್ಕಾರ ವಜಾಗೊಳಿಸಲು ಮುಂದಾಗಿರುವುದು ಸರಿಯಲ್ಲ.ಈ ನಿರ್ಧಾರದಿಮದ ಸರ್ಕಾರ ಹಿಂದೆ
ಸರಿಯಬೇಕು ಎಂದು ಬೆಟ್ಟಗೆರೆ ಗ್ರಾ.ಪಂ.ಮಾಜಿ ಅಧ್ಯಕ್ಷ ಜಾಕೀರ್ ಹುಸೇನ್ ಒತ್ತಾಯಿಸಿದರು.

ಅವರು ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ,ಬಡತನ ರೇಖೆಗಿಂತ ಕೆಳಗಿನ ಕುಟುಂಬದವರು ಕಟ್ಟಡ ನಿರ್ಮಾಣ ಮತ್ತಿತರೆ ಕೂಲಿ ಕೆಲಸಗಳಿಗೆ ಹೋಗಲು ವಾಹನ ಸೌಲಭ್ಯ ಇರುವುದಿಲ್ಲ.ಒಂದೊಮ್ಮೆ ಅಲ್ಲಿಗೆ ತೆರಳಲು ಸರ್ಕಾರಿ ಬಸ್ಇದ್ದರೂ ದಿನಕ್ಕೊಂದೋ ಎರಡೋ ಬಾರಿ ಮಾತ್ರ ಇರುತ್ತದೆ.ಅಲ್ಲದೆ ದುಬಾರಿ ಬಾಡಿಗೆ ಕೊಟ್ಟು ಖಾಸಗಿ ವಾಹನಗಳಲ್ಲಿ ಹೋಗಲು ಸಾಧ್ಯವಾಗುವುದಿಲ್ಲ.ಹಾಗಾಗಿ ೩೦ರಿಂದ ೪೦ಸಾವಿರ ರೂಗಳಿಗೆ ಸಿಗುವ ಹಳೆಯ ಕಾರುಗಳನ್ನು ಖರೀದಿಸಿ ತಮ್ಮ ಕೆಲಸದ ಸ್ಥಳಕ್ಕೆ ಹೋಗುತ್ತಾರೆ.

ಕಡಿಮೆ ಬೆಲೆಯ ವಾಹನ ಹೊಂದಿದವರೆಲ್ಲ ಶ್ರೀಮಂತರಲ್ಲ.ಕೂಲಿ ಕಾರ್ಮಿಕರಿಗೆ ತಮ್ಮ ಕೆಲಸಕಾರ್ಯಕ್ಕೆ ಸಮಯಕ್ಕೆ ಸರಿಯಾಗಿ ತಲುಪಲು ತಮ್ಮ ಹಳೆಯ ವಾಹನ ಅಗತ್ಯವಾಗಿದೆಯೇ ಹೊರತು ಶೋಕಿ ಮಾಡುವುದಕ್ಕಲ್ಲ.ಈ ಕಾರುಗಳನ್ನು ಹೊಂದಿದ ಬಿಪಿಎಲ್ ಕಾರ್ಡುದಾರರನ್ನು ಶ್ರೀಮಂತರೆoದು ಪರಿಗಣಿಸಿ ಅವರ ಬಿಪಿಎಲ್ ಕಾರ್ಡು ರದ್ದುಪಡಿಸುವುದು ಸರಿಯಲ್ಲ. ಅನ್ನ ಭಾಗ್ಯ ಯೋಜನೆಯ ಅಕ್ಕಿ ಸಿಗದಿದ್ದರೆ ಬಡವರ ಮಕ್ಕಳು ಉಪವಾಸ ಬೀಳಬೇಕಾಗುತ್ತದೆ. ಆದ್ದರಿಂದ ಸರ್ಕಾರ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರದ ಕಾನೂನಿನಂತೆ ಜಮೀನು,ಬಂಗಲೆ ಮತ್ತು ದುಬಾರಿ ವಾಹನಗಳನ್ನು ಹೊಂದಿದವರು ಬಿಪಿಎಲ್ ಕಾರ್ಡು ಪಡೆದುಕೊಂಡಿದ್ದರೆ ಸರ್ವೆ ನಡೆಸಿ ಅನಧಿಕೃತ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಪಡಿಸಲಿ.ಶ್ರೀಮಂತರ ಹೆಸರಿನಲ್ಲಿ ಸರ್ಕಾರ ಬಡವರ ಹೊಟ್ಟೆಮೇಲೆ
ಹೊಡೆಯುವುದು ಸರಿಯಲ್ಲ.ಕೂಲಿ ಕೆಲಸದಿಂದ ಜೀವನಡೆಸುತ್ತಿರುವ ಶೇ.೫೦ ಕುಟುಂಬಗಳು ಸ್ವಂತ ಮನೆ ಹೊಂದಿರುವುದಿಲ್ಲ.ಅವರು ನಿವೇಶನ ಮತ್ತು ವಸತಿಗಾಗಿ ೨೦ ವರ್ಷದ
ಹಿಂದೆಯೇ ಅರ್ಜಿ ನೀಡಿದ್ದರೂ ಇದುವರೆಗೂ ಪ್ರಯೋಜನವಾಗಿಲ್ಲ.ಪಡಿತರ ಚೀಟಿ ರದ್ದುಗೊಳಿಸುತ್ತಾರೆಂಬ ಭಯದಲ್ಲಿ ಬಡ ಕೂಲಿಕಾರ್ಮಿಕರು ತಾವು ಹೊಂದಿರುವ ಹಳೆಯ
ಕಡಿಮೆ ಮೊತ್ತದ ವಾಹನಗಳನ್ನು ಮಾರಾಟಮಾಡಲು ಹೊರಟಿದ್ದಾರೆ.ಅದನ್ನು ಯಾರೂ ಖರೀದಿಸುತ್ತಿಲ್ಲ.ಅದನ್ನು ಮಾರಾಟಮಾಡಿದರೆ ಅವರಿಗೆ ಕೂಲಿ ಕೆಲಸಕ್ಕೆ ಹೋಗಲು
ಕಷ್ಟವಾಗುತ್ತದೆ.ಸರ್ಕಾರ ಇವೆಲ್ಲವನ್ನು ಪರಿಗಣಿಸಿ ಬಿಪಿಎಲ್ ಚೀಟಿ ರದ್ದು ಪ್ರಕ್ರಿಯೆಯನ್ನು ಕೈಬಿಡಬೇಕು.

ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ, ಮುಖ್ಯಮಂತ್ರಿ ಗಳಾಗಿದ್ದಾಗ ನಾಲ್ಕು ಚಕ್ರದ ವಾಹನ ಹೊಂದಿದವರ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಲು ಮುಂದಾಗಿದ್ದರು.ನoತರ ಆ ಪ್ರಕ್ರಿಯೆಯನ್ನು ಕೈಬಿಟ್ಟಿದ್ದರು.ಈಗ ಸಿದ್ದರಾಮಯ್ಯ ಅವರು ಕೂಡಾ ಬಿಪಿಎಲ್ ಕಾರ್ಡು ರದ್ದುಗೊಳಿಸಲುವುದನ್ನು ಕೈಬಿಡಬೇಕು ಎಂದು ಮನವಿ ಮಾಡಿಕೊಂಡರು.

————————–ವರದಿ: ವಿಜಯಕುಮಾರ್, ಮೂಡಿಗೆರೆ

Leave a Reply

Your email address will not be published. Required fields are marked *

× How can I help you?