ಮೈಸೂರು;ಮಕ್ಕಳಿಗೆ ಸಂಪ್ರದಾಯ,ಸಂಸ್ಕೃತಿ ಕಲಿಸುವ ಕೆಲಸ ಶಾಲಾ- ಕಾಲೇಜು ಗಳಿಗಷ್ಟೇ ಸೀಮಿತವಾಗದೆ ಮನೆ-ಮನೆಗಳಲ್ಲಿಯೂ ಆಗಬೇಕಿದೆ.ಆಗ ಮಾತ್ರ ಆರೋಗ್ಯವಂತ ದೇಶವನ್ನು ಕಟ್ಟಲು ಸಾಧ್ಯ ಎಂದು ವಾಸವಿ ಕಾನ್ವೆಂಟ್ ಶಾಲೆಯ ಕಾರ್ಯದರ್ಶಿ ವಿ ಅನಂತ್ ರಾಮ್ ಹೇಳಿದರು.
ಕೂರ್ಗಳ್ಳಿಯ ವಾಸವಿ ಕಾನ್ವೆಂಟ್ ಶಾಲೆಯಲ್ಲಿ ಸಮೃದ್ಧಿ ವಾರ್ತಾ ಪತ್ರಿಕೆ ಹಾಗೂ ಕೆ ಎಂ ಪಿ ಕೆ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಏರ್ಪಡಿಸಲಾಗಿದ್ದ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಪುಟ್ಟ ಮಕ್ಕಳು ಕೃಷ್ಣ ರಾಧೇಯರ ವೇಷಗಳಲ್ಲಿ ಕಂಗೊಳಿಸಿದ್ದಲ್ಲದೆ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿ ನೆರೆದಿದ್ದವರ ಮನ ರಂಜಿಸುವಲ್ಲಿ ಯಶಸ್ವಿಯಾದವು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಜಯರಾಮೇಗೌಡ,ಸಮೃದ್ಧಿ ವಾರ್ತಾಪತ್ರಿಕೆ ಸಂಪಾದಕರಾದ ಸಹನಾ,ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್,ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್,ಧನಲಕ್ಷ್ಮಿ ರಾಮು,ಮುರಳಿಧರ್ ಹಾಗೂ ಶಿಕ್ಷಕ ವೃಂದ ಹಾಜರಿದ್ದರು.
——————-ಮಧು ಮೈಸೂರು