ಮೈಸೂರು-ಭಾರತ ವಿದ್ಯಾರ್ಥಿ ಫೆಡರೇಷನ್,[ಎಸ್ ಎಫ್ ಐ]ನ 12ನೆ ಜಿಲ್ಲಾ ಸಮ್ಮೇಳನವು ನಗರದ ಬುದ್ಧ ವಿಹಾರದಲ್ಲಿ ನಡೆಯಿತು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ವಿದ್ಯಾರ್ಥಿಗಳು ರಾಮಸ್ವಾಮಿ ವೃತ್ತದಿಂದ ಬುದ್ಧ ವಿಹಾರದ ವರೆಗೆ ಮೆರವಣಿಗೆ ನಡೆಸಿದರು.
ಬುದ್ಧ ವಿಹಾರದಲ್ಲಿ ಜಿಲ್ಲಾ ಅಧ್ಯಕ್ಷರಾದ ಟಿ ವಿಜಯ್ ಕುಮಾರ್ ಧ್ವಜಾರೋಹಣೆ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಂಗಕರ್ಮಿ ಸಿ ಬಸವಲಿಂಗಯ್ಯ, ಡಾ. ಬಿ ಆರ್ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರುಗಳ ಭಾವಚಿತ್ರಕ್ಕೆ ಪುಷ್ಮ ನಮನ ಮಾಡುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಿದರು.
ಇದೆ ಸಂದರ್ಭದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ ನ ನೂತನ ಜಿಲ್ಲಾ ಕಮಿಟಿಯನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾಕ್ಷರಾಗಿ ವಿಜಯ್ ಕುಮಾರ್ ಟಿ ಎಸ್, ಕಾರ್ಯದರ್ಶಿಯಾಗಿ ಪ್ರಜ್ವಲ್ ಟಿ,ಉಪಾಧ್ಯಕ್ಷರುಗಳಾಗಿ ದೀಕ್ಷಿತಾ,ರಜಿಯಾ ಯಾಸ್ಮಿನ್,ಸಂಜು,ಜಂಟಿ ಕಾರ್ಯದರ್ಶಿಗಳಾಗಿ ಚಿರಾಗ್,ಸಂತೋಷ್,ಮಂಜುನಾಥ್ ಅವರು ಆಯ್ಕೆಯಾದರು.
ಮೈಸೂರು ತಾಲೂಕು ಅಧ್ಯಕ್ಷರಾದ ಅಭಿ ಡಿ, ಮೈಸೂರು ವಿ ವಿ ಅಧ್ಯಕ್ಷರಾದ ಚಿರಾಗ್ ಎಸ್ ಕೆ, ಮೈಸೂರು ತಾಲೂಕು ಕಾರ್ಯದರ್ಶಿ ವಿನಾಯಕ್, ಹುಣಸೂರು ತಾಲೂಕು ಕಾರ್ಯದರ್ಶಿ ಜೀವನ್ ಮತ್ತು ಜಿಲ್ಲಾ ಮುಖಂಡರಾದ ದೀಕ್ಷಿತಾ, ಸಂತೋಷ್ ಇತರರು ಭಾಗವಹಿಸಿದ್ದರು.
—————ಮಧುಕುಮಾರ್