ಮೈಸೂರು-ಸಂಸ್ಕೃತ ಭಾಷೆಯು ಒಂದು ದೇವ ಭಾಷೆಯಾಗಿದೆ ಇದನ್ನು ಮನೋಹರವಾದ ಭಾಷೆ,ಪಾಂಡಿತ್ಯವುಳ್ಳ ಭಾಷೆ, ಸೊಗಸಾದ ಭಾಷೆ ಎಂಬುದಾಗಿ ಕರೆಯಬಹುದಾಗಿದೆ.ಸಂಸ್ಕೃತವು ನಮ್ಮ ದೇಶದ ಪ್ರಾಚೀನ ಭಾಷೆಗಳಲ್ಲಿ ಬಹು ಮುಖ್ಯವಾದ ಭಾಷೆಯಾಗಿದ್ದು,ತಾವೆಲ್ಲರೂ ಅದನ್ನು ಕಲಿಯಲು ಪ್ರಯತ್ನಿಸಬೇಕು ಅಂತಹ ಒಂದು ಸೌಲಭ್ಯವನ್ನು ನಿಮ್ಮ ಶ್ರೀ ವಿವೇಕ ಬಾಲೋದ್ಯಾನ ಪಬ್ಲಿಕ್ ಶಾಲೆ ಒದಗಿಸಿ ಕೊಟ್ಟಿರುವುದು ತುಂಬಾ ಶ್ಲಾಘನೀಯ ವಿಚಾರವಾಗಿದೆ ಸಂಸ್ಕೃತ ಮತ್ತು ಕನ್ನಡ ಅಧ್ಯಾಪಕರಾದ ವಿದ್ವಾನ್ ಲಕ್ಷ್ಮೀನಾರಾಯಣ ಭಟ್ ಹೇಳಿದರು.
ಶ್ರೀ ವಿವೇಕ ಬಾಲೋದ್ಯಾನ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಶಾಲೆಯಲ್ಲಿ ಇಂಗ್ಲಿಷ್, ಕನ್ನಡ, ಹಿಂದಿ ಭಾಷೆಯ ಜೊತೆಗೆ ಸಂಸ್ಕೃತ ಭಾಷೆಯನ್ನು ಸಹ ಅಧ್ಯಯನದಲ್ಲಿ ಅಳವಡಿಸಿಕೊಂಡಿರುವುದು ನನಗೆ ತುಂಬಾ ಸಂತೋಷವನ್ನು ಉಂಟು ಮಾಡಿದೆ.ನೀವೆಲ್ಲರೂ ಸಂಸ್ಕೃತವನ್ನು ಕಲಿಯಲು ಪ್ರಯತ್ನಿಸಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಎಂ.ಎಸ್ ನಾಗೇಶ್ ರವರು ಮಾತನಾಡಿ, ಸಂಸ್ಕೃತ ಭಾಷೆಯ ಮೇಲೆ ಯಾವುದೇ ಭಾಷೆಗಳು ಪ್ರಭಾವವನ್ನು ಬೀರಿಲ್ಲ.ಆದರೆ ಸಂಸ್ಕೃತ ಭಾಷೆಯು ಇಂಗ್ಲಿಷ್ ಭಾಷೆಯನ್ನು ಒಳಗೊಂಡಂತೆ ವಿಶ್ವದ ಹಾಗೂ ಭಾರತದ ಅನೇಕ ಭಾಷೆಗಳ ಮೇಲು ಸಹ ತನ್ನ ಪ್ರಭಾವವನ್ನು ಬೀರಿದೆ.ಸಂಸ್ಕೃತಕ್ಕೆ ತುಂಬಾ ಹತ್ತಿರವಾದ ಭಾಷೆ ನಮ್ಮ ಕನ್ನಡ ಭಾಷೆಯಾಗಿದೆ.ಹಾಗಾಗಿ ಸಂಸ್ಕೃತವನ್ನು ಕಲಿಯುವುದು ನಮ್ಮ ಆದ್ಯ ಕರ್ತವ್ಯವಾಗಬೇಕು.ವಿಶ್ವದ ಮೊದಲ ಪುಸ್ತಕ ಋಗ್ವೇದವು ರಚನೆ ಯಾದದ್ದು ಸಂಸ್ಕೃತ ಭಾಷೆಯಲ್ಲಿ ಎಂಬುದನ್ನು ನಾವು ಮರೆಯಬಾರದು ಎಂದು ಸಂಸ್ಕೃತ ಭಾಷೆಯ ಪ್ರಾಚೀನತೆಯ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದ ವೇದಿಕೆ ಮೇಲೆ ಉಪಸ್ಥಿತರಿದ್ದ ಶಾಲೆಯ ಮುಖ್ಯ ಆಡಳಿತ ಅಧಿಕಾರಿಗಳಾದ ಶ್ರೀಮತಿ ಎಂ. ಎಸ್ ಭವಾನಿ ನಾಗೇಶ್ ರವರು ಮಾತನಾಡಿ ನಮ್ಮ ಶಾಲೆಯಲ್ಲಿ ಪ್ರತಿ ವರ್ಷವೂ ಸಂಸ್ಕೃತೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದು ಇದು ನಮ್ಮ ದೇಶೀಯ ಭಾಷೆಗಳನ್ನು ಗೌರವಿಸುವುದರ ಜೊತೆಗೆ ಉಳಿಸಿ ಬೆಳೆಸಿಕೊಂಡು ಹೋಗುವ ಕಾಯಕದ ಒಂದು ಹೆಗ್ಗುರುತಾಗಿದೆ. ಇಂತಹ ಒಂದು ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಇನ್ನು ಉತ್ತಮ ರೀತಿಯಲ್ಲಿ ನಡೆಸಲು ಸಂಸ್ಥೆಯು ನಿಮಗೆ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲೆಯ ಪ್ರಾಂಶುಪಾಲರಾದ ಡಾ. ಎನ್. ಭಾರತೀ ಶಂಕರ್ ರವರು ಮಾತನಾಡಿ ನಮ್ಮ ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳು ಹಬ್ಬದ ಸಂಭ್ರಮದಿಂದಲೇ ಕೂಡಿರುತ್ತವೆ.ಆ ಮೂಲಕ ನಮ್ಮ ಸಂಸ್ಕೃತಿ ಪರಂಪರೆಗಳ ಬಗ್ಗೆ ಜ್ಞಾನವನ್ನು ಮಕ್ಕಳಿಗೆ ಬಹಳ ಸುಲಭವಾಗಿ ತಿಳಿಸಿಕೊಡಬಹುದೆಂಬುದನ್ನು ನಾವು ಇಲ್ಲಿ ಕಾಣಬಹುದಾಗಿದೆ. ಇಲ್ಲಿ ನಿಮಗೆ ಹೆಚ್ಚು ಭಾಷೆಗಳನ್ನು ಕಲಿಯಲು ಅದರಲ್ಲೂ ಸಂಸ್ಕೃತವನ್ನು ಎಂಟನೆಯ ತರಗತಿಯವರೆಗೂ ಕಲಿಸಲು ಆಡಳಿತ ಮಂಡಳಿಯವರು ಅವಕಾಶವನ್ನು ಒದಗಿಸಿ ಕೊಟ್ಟಿರುವುದು ತುಂಬಾ ಗಮನಾರ್ಹವಾದ ವಿಚಾರವಾಗಿದೆ.ಇದನ್ನು ನೀವು ಸದುಪಯೋಗ ಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಂಸ್ಕೃತ ಶ್ಲೋಕಗಳು,ಸಂಸ್ಕೃತದ ಭಾಷೆಯಲ್ಲಿ ಕಿರು ನಾಟಕಗಳು,ಸಮೂಹ ಗಾಯನ, ನೃತ್ಯ ಹಾಗೂ ಅಮರಕೋಶದ ಪಠಣ, ಅತಿಥಿಗಳಿಗೆ ಸ್ವಾಗತ ಕಾರ್ಯಕ್ರಮ,ವಂದನಾರ್ಪಣೆ ಹಾಗೂ ಸಂಸ್ಕೃತ ದಿನದ ಮಹತ್ವ ಕುರಿತು ಭಾಷಣ ಮುಂತಾದ ಕಾರ್ಯಕ್ರಮಗಳು ಸಂಸ್ಕೃತ ಶಿಕ್ಷಕಿಯರಾದ ಶ್ರೀಮತಿ ಶ್ವೇತಾರಾಣಿ ಹಾಗೂ ಶ್ರೀಮತಿ ಸವಿತಾ ಹೆಬ್ಬಾರ್ ರವರ ಮಾರ್ಗದರ್ಶನದಲ್ಲಿ ಮೂಡಿ ಬಂದವು.
ಶಾಲೆಯ ಎಲ್ಲಾ ಬೋಧಕ ಭೋದಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬರಲು ಸಹಕರಿಸಿದರು.

——————-ಮಧುಕುಮಾರ್