ಮೈಸೂರು-ಶಾಸಕ ಟಿ ಎಸ್ ಶ್ರೀವತ್ಸರವರು ಪಾಲಿಕೆಯ 50 ನೇ ವಾರ್ಡ್ ವ್ಯಾಪ್ತಿಯ ಸುಣ್ಣದಕೇರಿ ಹಾಗೂ ಬೆಸ್ರರಗೇರಿಯ ಭಾಗದಲ್ಲಿ ಪಾದಯಾತ್ರೆ ನಡೆಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.
ಈ ವೇಳೆ ಕಳೆದ ಒಂದೆರಡು ದಿನಗಳಿಂದ ಸುಣ್ಣದಕೇರಿಗೆ ನೀರು ಸರಬರಾಜಿನಲ್ಲಿ ತೊಂದರೆಯಾಗಿದ್ದು,ನೀರಿಲ್ಲದೆ ಪರಾಡುವಂತಾಗಿದೆ.ಒಳಚರಂಡಿ ವ್ಯವಸ್ಥೆ ಸರಿಯಿಲ್ಲ.ಕೆಲ ರಸ್ತೆಗಳು ಹಾಳಾಗಿವೆ.ಪಾಲಿಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಹಲವಾರು ಸಮಸ್ಯೆಗಳನ್ನು ಸಾರ್ವಜನಿಕರು ಶಾಸಕರ ಮುಂದಿಟ್ಟರು.
ನಿವಾಸಿಗಳಿಗೆ ಮನವಿಗೆ ಸ್ಪಂದಿಸಿದ ಶಾಸಕರು,ನೀರು ಸರಬರಾಜಿನ ಪೈಪ್‌ಲೈನ್ ವಾಲ್ವ್ ಬ್ಲಾಕ್ ಆಗಿರುವುದರಿಂದ ಸರಬರಾಜಿನಲ್ಲಿ ತೊಂದರೆಯಾಗಿದೆ.ಕೂಡಲೇ ದುರಸ್ಥಿ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.ಸುಣ್ಣದಕೇರಿ ೯ನೇ ಕ್ರಾಸ್ ಸಮೀಪದ ರಸ್ತೆಬದಿಯಲ್ಲಿ ಸಾರ್ವಜನಿಕರು ಮೂತ್ರ ವಿರ್ಸಜನೆ ಮಾಡುತ್ತಿದ್ದಾರೆಂಬ ನಿವಾಸಿಗಳ ದೂರಿನ ಮೇರೆಗೆ ತಡೆಗೋಡೆ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಹಾಗೆಯೇ ಸುಣ್ಣದಕೇರಿ ೭ ಮತ್ತು ೯ ಕ್ರಾಸ್ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿ, ಕಾಂಕ್ರೀಟ್ ರಸ್ತೆ ಅಭಿವೃದ್ಧಿಯಲ್ಲಿ ಯಾವುದೇ ಲೋಪವಾಗಬಾರದು ಎಂದು ಗುತ್ತಿಗೆದಾರರಿಗೆ ಎಚ್ಚರಿಸಿದರು.
ಪಾಲಿಕೆ ಎಇಇ ಧನುಷ್, ಎಇ ಪ್ರಶಾಂತ್, ವಾಟರ್ ಇನ್ಸ್‌ಫೆಕ್ಟರ್ ಮಧು, ಬಿಜೆಪಿ ಮುಖಂಡರಾದ ಜೋಗಿ ಮಂಜು, ಕೃಷ್ಣನಾಯಕ, ಜೋಗಪ್ಪ, ರಾಕೇಶ್‌ಗೌಡ, ಲೋಕೇಶ್, ಜಯಸಿಂಹ, ಜಗದೀಶ್, ರಾಜೇಶ್, ಪ್ರದೀಪ್, ಕಿಶೋರ್,ಕೀರ್ತಿ, ಸ್ಥಳೀಯ ನಿವಾಸಿಗಳಾದ ದಾಸಪ್ಪ, ಅಶ್ವಥ್, ಮಹೇಶ್ ನಾಯಕ್ ಮತ್ತಿತರರಿದ್ದರು.
—————–ಮಧು ಮೈಸೂರು