ರಾಮನಾಥಪುರ-ಕೆಲವು ಪ್ರಕಾರಗಳ ಸಂಗೀತ,ಸಾಹಿತ್ಯ,ಭರತನಾಟ್ಯ ಮುಂತಾದವುಗಳು ಸನಾತನ ಸಂಸ್ಕೃತಿಯ ಅವಿಭಾಜ್ಯ ಅಂಗಗಳಾಗಿವೆ.ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಈ ಕಲೆಗಳಿಗೆ ವಿಶೇಷ ಸ್ಥಾನಮಾನಗಳನ್ನು ನೀಡಲಾಗಿದೆ.ಸಂಗೀತವನ್ನು ಕೇವಲ ಮನರಂಜನೆಗಾಗಿ ಎಂದು ಭಾವಿಸದೆ ದೈವ ಆರಾಧನೆಗೂ ಬಳಸಬೇಕು ಎಂದು ವೆ.ಪುರುಷೋತ್ತಮ ತಿಳಿಸಿದರು.
ನಗರದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾಧನಾ,ಕು,ಸಂಪದಾ ಮತ್ತು ಕು,ಸಮರ್ಥ ಅವರುಗಳು ಭರತನಾಟ್ಯ ಪ್ರದರ್ಶನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂಗೀತ,ನಾಟ್ಯ ವಿದ್ಯೆಗಳು ಯಾವುದೇ ಒಂದು ಜಾತಿ ಹಾಗು ಧರ್ಮಕ್ಕೆ ಸೀಮಿತವಾದವುಗಳಲ್ಲ.ಈ ಕಲೆಗಳು ಎಲ್ಲರ ಆಸ್ತಿ.ಯಾರು ಶ್ರದ್ಧಾ ಭಕ್ತಿಯಿಂದ ಅಭ್ಯಸಿಸುತ್ತಾರೆಯೋ ಅವರಿಗೆ ಒಲಿಯುತ್ತವೆ.ಇಂದಿನ ಪೀಳಿಗೆಯಲ್ಲಿ ಮೊಬೈಲ್ ನ ಹೊರತು ಪಡಿಸಿ ಕಲಿಯಲು ವಿವಿಧ ಆಸಕ್ತಿದಾಯಕ ಪ್ರಖಾರಗಳಿವೆ ಎಂಬ ಅರಿವು ಇಲ್ಲವಾಗಿದೆ.ಅವರನ್ನು ಆ ಗೀಳಿನಿಂದ ಹೊರತಂದು ಸಂಗೀತ,ನಾಟ್ಯ ಕಲೆಗಳತ್ತ ನೋಡುವಂತೆ ಮಾಡುವುದು ಪೋಷಕರ ಕರ್ತವ್ಯಗಳಾಗಿವೆ ಎಂದರು.
ಶ್ರೀ ರಾಘವೇಂದ್ರ ಮಠದ ಕನಕಚಾರ್ಯರು ಕಲಾವಿದರನ್ನು ಗೌರವಿಸಿದರು.
—————–ಶಶಿಕುಮಾರ್ ಕೆಲ್ಲೂರು