ಸಕಲೇಶಪುರ-ವಳಲಹಳ್ಳಿ,ಹಿರಿಯೂರು,ಹರಗರಹಳ್ಳಿ ಮಾರ್ಗವಾಗಿ ಬಸ್ ವ್ಯವಸ್ಥೆಗೆ ಶಾಸಕರ ಪತ್ರದೊಂದಿಗೆ ಮನವಿ

ಸಕಲೇಶಪುರ;ತಾಲ್ಲೂಕಿನ ವಳಲಹಳ್ಳಿ,ಹಿರಿಯೂರು,ಕರಡಿಗಾಲ,ಬೊಮ್ಮನಕೆರೆ,ಹರಗರಹಳ್ಳಿ ಮಾರ್ಗವಾಗಿ ಸಕಲೇಶಪುರಕ್ಕೆ ಬಸ್ ವ್ಯವಸ್ಥೆಯನ್ನು ಕಲ್ಪಿಸಿ ಕೊಡುವಂತೆ ಆಗ್ರಹಿಸಿ ಶಾಸಕ ಸಿಮೆಂಟ್ ಮಂಜುರವರ ಶಿಫಾರಸ್ಸು ಪತ್ರದೊಂದಿಗೆ ಗ್ರಾಮಸ್ಥರುಗಳು ಸಕಲೇಶಪುರ ಕೆ ಎಸ್ ಆರ್ ಟಿ,ಸಿ ವ್ಯವಸ್ಥಾಪಕರಿಗೆ ರವರಿಗೆ ಮನವಿಯನ್ನು ಸಲ್ಲಿಸಿದರು.

ಬೊಮ್ಮನಕೆರೆ,ವಡ್ರಹಳ್ಳಿ,ಕರಡಿಗಾಲ,ಹರಗರಹಳ್ಳಿ,ನಡನಹಳ್ಳಿ,ನೂದರಹಳ್ಳಿ,ಚೀರಿ,ಚಿನ್ನಹಳ್ಳಿ,ಜಾತಹಳ್ಳಿ, ಬೊಬ್ಬ ನಹಳ್ಳಿ,ವಳಲಹಳ್ಳಿ ಗ್ರಾಮದ ಜನರಿಗೆ ಕಾರ್ಯನಿಮಿತ್ತ ತೆರಳಲು ಬೆಳಗ್ಗಿನ 8 .30ರ ಬಸ್ಸನ್ನು ಹೊರತುಪಡಿಸಿದರೆ ಮದ್ಯಾನ್ನ 3.30 ರವರೆಗೆ ಬೇರೆ ಬಸ್ಸಿನ ವ್ಯವಸ್ಥೆಯಿಲ್ಲ.

ಒಂದು ವೇಳೆ ಆ ಮದ್ಯದಲ್ಲಿ ಸಕಲೇಶಪುರದ ಕಡೆ ಹೋಗಲೇಬೇಕಾದ ಅನಿವಾರ್ಯತೆ ಬಂದರೆ ಸುಮಾರು ನಾಲ್ಕು ಕಿಲೋಮೀಟರುಗಳಷ್ಟು ದೂರ ನಡೆದು ಬಸ್ಸನ್ನು ಹಿಡಿಯಬೇಕಾದ ಪರಿಸ್ಥಿತಿಯಿದೆ.

ಜೊತೆಗೆ ಈ ಭಾಗದಲ್ಲಿ ಕಾಡುಪ್ರಾಣಿಗಳ ಅದರಲ್ಲೂ ಕಾಡಾನೆಗಳ ಹಾವಳಿ ತೀವ್ರವಾಗಿದ್ದು ಜನ ಜೀವ ಕೈಯ್ಯಲ್ಲೇ ಹಿಡಿದು ನಡೆದುಹೋಗಬೇಕಾಗುತ್ತದೆ.ವಯೋವೃದ್ಧರು,ಮಹಿಳೆಯರು ಹಾಗು ವಿದ್ಯಾರ್ಥಿಗಳ ಪರಿಸ್ಥಿತಿಯಂತೂ ಶೋಚನೀಯವಾಗಿದೆ.

ಸಕಲೇಶಪುರದಿಂದ ಬೆಳಗ್ಗೆ 10-30ಕ್ಕೆ ಹೊರಡುವ ರೂಟ್ ನಂಬರ್ 67 ಎ ಬಿ ಬಸ್ಸು ಶುಕ್ರವಾರಸಂತೆಗೆ ತೆರಳಿ ನಂತರ ಅದೇ ಮಾರ್ಗದಲ್ಲಿ ಸಕಲೇಶಪುರಕ್ಕೆ ತೆರಳುತ್ತಿದ್ದು ಆ ಬಸ್ ಅನ್ನು ದೊಡ್ಡನಹಳ್ಳಿ,ಆದರಿಗೆರೆ,ಹಡ್ಲಹಳ್ಳಿ ವಳಲಹಳ್ಳಿ,ಹಿರಿಯೂರು,ಕರಡಿಗಾಲ,ಬೊಮ್ಮನಕೆರೆ,ಹರಗರಹಳ್ಳಿ ಮಾರ್ಗವಾಗಿ ಸಕಲೇಶಪುರ ತಲುಪುವಂತೆ ಬದಲಾಯಿಸಿದರೆ ನಮ್ಮ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆಯುತ್ತದೆ,ಎಂದು ಕರಡಿ ಹರೀಶ್,ಚಿದಾನಂದ,ಅರುಣ್ ಗೌಡ,ಬೊಬ್ಬನಹಳ್ಳಿ ಸುಬ್ಬಣ್ಣ ವ್ಯವಸ್ಥಾಪಕ ವಿಪಿನ್ ರವರಿಗೆ ಮನವರಿಕೆ ಮಾಡಿಕೊಟ್ಟರು.

ಗ್ರಾಮಸ್ಥರು ನೀಡಿದ ಮನವಿ ಪತ್ರವನ್ನು ಮೇಲಾಧಿಕಾರಿಗಳಿಗೆ ತಲುಪಿಸಿ ಸಮಸ್ಯೆ ಸರಿಪಡಿಸಲು ಮುಂದಾಗುವುದಾಗಿ ವ್ಯವಸ್ಥಾಪಕ ವಿಪಿನ್ ತಿಳಿಸಿದರು.

—————–ಎಸ್ ಕೆ ರಕ್ಷಿತ್

Leave a Reply

Your email address will not be published. Required fields are marked *

× How can I help you?