‘ಹೆಚ್ ಎಂ ವಿಶ್ವನಾಥ್’ರವರೆ ತಮ್ಮ ಅಭಿಯಾನವ ಜಿಲ್ಲೆಗೆ ವಿಸ್ತರಿಸಿ-ಪತ್ರಿಕೆಯ ಮನವಿ
ಹಾಸನ:ನಶೆ-ಗಾಂ,ಜಾ ಮುಕ್ತ ಅಭಿಯಾನವೊಂದನ್ನ ಸಕಲೇಶಪುರಕ್ಕೆ ಸೀಮಿತವಾದಂತೆ ಮಾಜಿ ಶಾಸಕರಾದ ಹೆಚ್ ಎಂ ವಿಶ್ವನಾಥ್ ರವರ ನೇತೃತ್ವದಲ್ಲಿ ಪತ್ರಕರ್ತ ಮಲ್ನಾಡ್ ಮೆಹಬೂಬ್ ಹಾಗು ಇನ್ನಷ್ಟು ಪ್ರಜ್ಞಾವಂತರು ಒಟ್ಟುಗೂಡಿ ನಡೆಸುತ್ತಿದ್ದಾರೆ.ಅದಕ್ಕೆ ಸಂಬಂದಿಸಿದ ಪೋಸ್ಟ್ ಗಳು ಹಾಗು ಸುದ್ದಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಕಾಣಸಿಕ್ಕಾಗ ನನ್ನನ್ನು ಸೇರಿದಂತೆ ಬಹುತೇಕರು ಅದೊಂದು ವ್ಯರ್ತ ಹೋರಾಟವೆಂಬಂತೆ ನೋಡಿದ್ದರು.ಅದಕ್ಕೆ ಕಾರಣಗಳು ಇದ್ದವು.ಗಾಂ,ಜಾ ನಮ್ಮ ಸಮುದಾಯವನ್ನು ಕಾಡುತ್ತಿರುವ ಪಿಡುಗು ಎಂಬುದನ್ನು ನಾವುಗಳು ಒಪ್ಪಲು ಸಾದ್ಯವಿರಲಿಲ್ಲ.
ಗಾಂ,ಜಾದ ಅಮಲಿನ ಬೇರುಗಳು ಅಭಿಯಾನ ನಡೆಸುವಷ್ಟರ ಮಟ್ಟಿಗೆ ಆಳವಾಗಿವೆ ಎಂಬ ಕಲ್ಪನೆಯನ್ನು ಮಾಡಿಕೊಳ್ಳಲು ಸಭ್ಯ ಸಮಾಜ ಸಿದ್ದವಿರಲಿಲ್ಲ.
ಇದೊಂದು ಘಟನೆ ….
ಬುಧವಾರ ರಾತ್ರಿ ಒಂದುಗಂಟೆಯ ಸಮಯ.ಗಸ್ತಿನಲ್ಲಿದ್ದ ಪೆನ್ಶನ್ ಮೊಹಲ್ಲಾ ಠಾಣೆಯ ಪಿ ಎಸ್ ಐ ರವಿಶಂಕರ್ ರವರ ಕಣ್ಣಿಗೆ ಮೂರು ಜನ ಯುವಕರು ಬಿದ್ದಿದ್ದಾರೆ.ಸಹಜವಾಗಿ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ನಾವುಗಳು ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳೆಂದು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗುತ್ತಿದೆ.ಅವರ ಹಾವಭಾವ ವರ್ತನೆಗಳ ಬಗ್ಗೆ ಅನುಮಾನಗೊಂಡ ಪಿ ಎಸ್ ಐ ರವಿಶಂಕರ್ ವಿದ್ಯಾರ್ಥಿಗಳ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.
ಆಗ ಬಯಲಾಗಿದೆ ಗಾಂ,ಜಾ ಘಮಲು….
ವಿಷಯವನ್ನು ಧ್ರಡೀಕರಿಸಿಕೊಳ್ಳಲು ವಿದ್ಯಾರ್ಥಿಗಳ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದು ತಪಾಸಣೆಗೆ ಒಳಪಡಿಸಿದಾಗ ಗಾಂ,ಜಾ ಅಥವಾ ತೀವ್ರ ಅಮಲು ಬರುವ ವಸ್ತುವೊಂದನ್ನು ಸೇವನೆ ಮಾಡಿರುವುದು ದೃಢಪಟ್ಟಿದೆ.ವಿಧಿಯಿಲ್ಲದೆ ವಿದ್ಯಾರ್ಥಿಗಳು ಗಾಂ,ಜಾ ವನ್ನೇ ಸೇವನೆ ಮಾಡಿದ್ದಾಗಿ ಸತ್ಯ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದ್ದು ಅವರ ವಿರುದ್ಧ ಕೇಸು ದಾಖಲಿಸಿ ಗಾಂ,ಜಾ ದ ಆಳ ಅಗಲವನ್ನು ಪಿ ಎಸ್ ಐ ರವಿಶಂಕರ್ ಕೆದಕುತ್ತಿದ್ದಾರೆ.
(ವಿದ್ಯಾಥಿಗಳ ಹೆಸರುಗಳನ್ನ ಅವರ ಭವಿಷ್ಯದ ಹಿತ ದೃಷ್ಟಿಯಿಂದ ಬಳಸಿಲ್ಲ)
ವಿಷಯ ಇದಲ್ಲ ..
ಅಲ್ಲಿಗೆ ನಶೆ ಮುಕ್ತ ಅಭಿಯಾನದ ಪ್ರಾಮುಖ್ಯತೆ ಎಂತದ್ದು ಎಂಬುದು ಇದೊಂದು ಘಟನೆಯಿಂದ ಸಾಬೀತಾಗುತ್ತೆ.ಹಾಸನ ಜಿಲ್ಲೆಯಾದ್ಯಂತ ಗಾಂ,ಜಾ ಮಾರಾಟಮಾಡುವವರ ದೊಡ್ಡ ಜಾಲವೇ ಇದೆ ಎಂಬ ಮಾತುಗಳು ಸದ್ಯ ಕೇಳಿಬರುತ್ತಿವೆ. ಅತ್ಯಂತ ಸೂಕ್ಷ್ಮವಾಗಿ ಪೋಲೀಸರ ಮೂಗಿಗೆ ವಾಸನೆ ಸಿಗದ ಹಾಗೆ ಗಾಂ,ಜಾ ಮಾರಾಟಮಾಡುವ ವ್ಯಕ್ತಿಗಳು ವಿದ್ಯಾರ್ಥಿಗಳು,ಕೆಲಸವಿಲ್ಲದೇ ಅಂಡಲೆಯುವ ಯುವಕರನ್ನೇ ತಮ್ಮ ಹಣದಾಹಕ್ಕೆ ಬಲಿಪಶುಗಳನ್ನಾಗಿ ಮಾಡುತ್ತಿದ್ದಾರೆ.
ಈ ಮೂವರು ವಿದ್ಯಾರ್ಥಿಗಳನ್ನೇ ತೆಗೆದುಕೊಳ್ಳಿ ಅವರ ತಂದೆತಾಯಂದಿರು ಹೊಟ್ಟೆ ಬಟ್ಟೆ ಕಟ್ಟಿ ಲಕ್ಷಾಂತರ ರೂಪಾಯಿಗಳಷ್ಟು ಹಣ ವ್ಯಯ ಮಾಡಿ ತಮ್ಮ ಮಕ್ಕಳು ಉನ್ನತ ಸ್ಥಾನಕ್ಕೇರಲಿ ಎಂದು ಅದೆಷ್ಟು ಕನಸ್ಸುಗಳನ್ನು ಕಟ್ಟಿಕೊಂಡಿದ್ದರೋ?
ಆದರೆ ಆದದ್ದೇ ಬೇರೆ.ಎಳೆಯ ವಯಸ್ಸಿನ ಮಕ್ಕಳು ಕೆಟ್ಟ ಗಳಿಗೆಯೊಂದರಲ್ಲಿ ಗಾಂ,ಜಾದ ಶಿಕಾರಿಗಳಾಗಿದ್ದರೆ.ಈಗ ಕೇಸು ಸಹ ಬಿದ್ದಿದೆ.ಈಗವರ ಭವಿಷ್ಯ…?
ಶಾಲಾ ಹಂತದಲ್ಲಿಯೇ ಸರಕಾರೀ ಹಾಗು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾದಕ ವಸ್ತುಗಳಿಂದ ಆಗಬಹುದಾದ ಅಪಾಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಎಚ್ಚರಿಕೆಯನ್ನು ಹುಟ್ಟು ಹಾಕುವ ಕೆಲಸ ಮಾಡುವ ಅಗತ್ಯವಿದೆ.ಆಗಷ್ಟೇ ನಮ್ಮ ಮುಂದಿನ ಪೀಳಿಗೆಯ ಕೈ,ತಪ್ಪದ ಹಾಗೆ ರಕ್ಷಿಸಿಕೊಳ್ಳಲು ಸಾಧ್ಯ.
ನಶೆ-ಗಾಂ,ಜಾ ಮುಕ್ತ ಅಭಿಯಾನವನ್ನು ಜಿಲ್ಲೆಯಾದ್ಯಂತ ವಿಸ್ತರಿಸಿ ಮುಂದುವರಿಯಬೇಕಾಗಿ ಹೆಚ್ ಎಂ ವಿಶ್ವನಾಥ್ ಹಾಗು ತಂಡದ ಸದಸ್ಯರಿಗೆ ಪತ್ರಿಕೆಯ ಕಳಕಳಿಯ ಮನವಿ.
ಸದ್ಯ,ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನುಮಾನಸ್ಪದ ವ್ಯಕ್ತಿಗಳು ಹಾಗೂ ಮಾದಕ ವಸ್ತು ಮಾರಾಟ /ಸೇವನೆ ಕಂಡುಬಂದಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ೧೧೨ ಗೆ ಕರೆಮಾಡುವಂತೆ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಖಂಡಿತವಾಗಿಯೂ ಸಾರ್ವಜನಿಕರು ಈ ವಿಷಯದಲ್ಲಿ ಪೊಲೀಸ್ ಇಲಾಖೆಯ ಜೊತೆ ಕೈಜೋಡಿಸಲೇಬೇಕಿದೆ.ತಮ್ಮ ಮನೆಯಲ್ಲೋ?ಸಾರ್ವಜನಿಕ ಸ್ಥಳಗಳಲ್ಲೋ?ವಿವಿಧ ರೀತಿಯ ನಶೆಕೋರರು ಕಂಡುಬಂದರೆ ಮುಲಾಜಿಲ್ಲದೆ ಪೋಲೀಸರ ಗಮನಕ್ಕೆ ತರಬೇಕು.ಆಗ ಆ ನಶೆಯ ವಸ್ತುಗಳ ಮಾರಾಟ ಮಾಡುವ ಬೇರುಗಳನ್ನು ಜಾಲಾಡಿ ಪಾಪಿಗಳ ಮಟ್ಟಹಾಕಲು ಪೊಲೀಸರು ಮುಂದಾಗುತ್ತಾರೆ.
ರಾಜಕಾರಣಿಗಳೇ ಗಾಂ,ಜಾ ವ್ಯಾಪಾರಿಗಳು…..!!!
ಸಕಲೇಶಪುರ ನಶೆ ಮುಕ್ತ ಅಭಿಯಾನದ ರೂವಾರಿಗಳಲ್ಲಿ ಒಬ್ಬರಾದ ಮಲ್ನಾಡ್ ಮೆಹಬೂಬ್ ಪತ್ರಿಕೆಯೊಂದಿಗೆ ಮಾತನಾಡಿ ಸ್ಪೋಟಕ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ.
ಜಿಲ್ಲೆಯಲ್ಲಿ ಸಕಲೇಶಪುರದಲ್ಲೇ 12 ಕ್ಕೂ ಹೆಚ್ಚು ಗಾಂ,ಜಾ ಮಾರಾಟಗಾರರ ಪಟ್ಟಿಯನ್ನು ಅವರು ಸಿದ್ಧಪಡಿಸಿಟ್ಟುಕೊಂಡಿದ್ದಾರಂತೆ.ಅವರಲ್ಲಿ ಬಹುತೇಕರು ಒಂದುಕೋಮಿನ ಜನರಾಗಿದ್ದು,ಹಾಗು ಒಂದು ಪ್ರಮುಖ ಪಕ್ಷದ ಮುಖಂಡರುಗಳು ಹಾಗು ಅವರ ಹಿಂಬಾಲಕರುಗಳಂತೆ…!!
ಯಾವ ಪಕ್ಷ ಹೇಳಬಹುದಾ ಸಾರ್ ಪತ್ರಿಕೆ ಪ್ರಶ್ನಿಸಿತು,ಬೇಡ ಬಿಡಿ ಅವರನ್ನು ಸಮಾಜದ ಮುಂದೆ ಬೆತ್ತಲಾಗಿಸಲು ಹೊರಟಿದ್ದೇವೆ ಆಗ ಅದೆಲ್ಲ ಬಹಿರಂಗವಾಗುತ್ತೆ ಎಂದರು.
ಗಾಂ,ಜಾವನ್ನು ಹೇಗೆಲ್ಲ ಮಾರಾಟ ಮಾಡುತ್ತಾರೆ ಎಂಬ ಬಗ್ಗೆ ಮಾತನಾಡಿದ ಅವರು ‘ಕಾರಿನಲ್ಲೋ-ಬೈಕಿನಲ್ಲೋ ಗಾಂ,ಜಾ ಮಾರಾಟಗಾರ ಕುಳಿತಿರುತ್ತಾನೆ.ಪಡೆಯುವವ ಅವನಿಗೆ ಹಣ ನೀಡಿದರೆ ಒಂದು ನಿರ್ದಿಷ್ಟ ಜಾಗದ ಗುರುತನ್ನು ತಿಳಿಸಿ (ಗಲ್ಲಿಯ ಯಾವುದೋ ಕಲ್ಲಿನ ಕೆಳಗೆ ಕಸ ತುಂಬಿದ ಪ್ಲಾಸ್ಟಿಕ್ ಕವರಿನ ಒಳಗೆ ಹೀಗೆ )ತೆಗೆದುಕೊಳ್ಳಲು ಸೂಚಿಸುತ್ತಾನೆ.
ಇದು ಪೊಲೀಸರಿಗೆ ತಲೆನೋವಾಗಿದೆ.ವ್ಯಾಪಾರಿಯ ಮಾಲಿನ/ಸಾಕ್ಷಿಯ ಸಮೇತ ಬಂಧಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಬೆಚ್ಚಿ ಬೀಳಿಸುವ ಮಾಹಿತಿ ತೆರೆದಿಟ್ಟರು.
ನಮ್ಮ ಹೋರಾಟದ ಬಗೆಗಿನ ಸಭೆಗಳು ನಡೆದ ಬಗ್ಗೆ ಕ್ರಿಮಿಗಳಿಗೆ ಮಾಹಿತಿ ಪಡೆದು ನಮ್ಮನ್ನೇ ತಗಲು ಹಾಕಿಸುತ್ತೇವೆ ಎಂಬ ಮಾತುಗಳನ್ನು ಆಡಿದ್ದಾರೆ.ನಮ್ಮ ವಾಹನಗಳಲ್ಲಿ,ಕಚೇರಿಗಳಲ್ಲಿ ಗಾಂ,ಜಾವನ್ನು ಇಟ್ಟು ಸಿಕ್ಕಿಸುತ್ತೇವೆಂದು ಹ್ಞೂoಕರಿಸಿದ್ದಾರೆ.ನಮ್ಮ ದ್ಯೇಯ ಸ್ಪಷ್ಟವಿದೆ ಎಂತದ್ದೇ ಸಮಸ್ಯೆ ಬಂದರು ನಶೆ ಮುಕ್ತ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎನ್ನುತ್ತಾ ಜಿಲ್ಲೆಗೆ ಹೋರಾಟವನ್ನು ಹಿಗ್ಗಿಸುವ ಭರವಸೆಯನ್ನು ಪತ್ರಿಕೆಗೆ ನೀಡಿದ್ದಾರೆ.
—————————-ವಿಶೇಷ ಸಾಮಾಜಿಕ ಕಳಕಳಿಯ ವರದಿ-ರಕ್ಷಿತ್ ಎಸ್ ಕೆ