ಹುಣಸೂರು;ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಸಭೆ ಹಾಗು ವಾಣಿಜ್ಯ ಮಳಿಗೆಗಳ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು

ಹುಣಸೂರು;ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ೨೦೨೩-೨೪ ನೇ ಶಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆ ಹಾಗು ನೂತನ ವಾಣಿಜ್ಯ ಮಳಿಗೆಗಳ ಉದ್ಘಾಟನೆಯು ಅಧ್ಯಕ್ಷರಾದ ಬಸವಲಿಂಗಯ್ಯನವರ ನೇತೃತ್ವದಲ್ಲಿ ನಡೆಯಿತು.

ಸಂಘದ ವಾರ್ಷಿಕ ಲಾಭನಷ್ಟ ಹಾಗು ಖರ್ಚುವೆಚ್ಚಗಳನ್ನು ಸಭೆಯಲ್ಲಿ ಓದಿ ತಿಳಿಸಲಾಯಿತು.ಬಸವಲಿಂಗಯ್ಯನವರು ಸದಸ್ಯರುಗಳಿಗೆ ಹಾಗು ಸಂಘದ ಅಧಿಕಾರಿ ವರ್ಗಕ್ಕೆ ಹಲವು ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಪ್ರಭಾರ ಕಾರ್ಯದರ್ಶಿಗಳಾದ ಎ.ಎಸ್. ಹೇಮಲತ, ಉಪಾಧ್ಯಕ್ಷರಾದ ರೇವಣ್ಣ ಗೆರಸನಹಳ್ಳಿ, ನಿರ್ದೇಶಕರುಗಳಾದ ಎ.ಸಿ.ಕೆಂಪೇಗೌಡ, ಬಿ.ನಾಗರಾಜು,ಜಿ.ಎನ್.ವೆಂಕಟೇಶ್,ಎಚ್. ಟಿ ಬಾಬು, ರಮೇಶ್, ಎಚ್.ಎನ್ ಚಂದ್ರಶೇಖರ್,ಎಚ್ ಪ್ರೇಮಕುಮಾರ್,ಎಚ್.ಆರ್ ಸುಜಾತ,ಇಂದುಕಲಾ,ಮಂಗಳಗೌರಿ,ನಿಬಂಧಕರಾದ ಅನಸೂಯ, ಪ್ರಭಾರ ಕಾರ್ಯದರ್ಶಿ ಎ. ಎಸ್ ಹೇಮಲತಾ ಹಾಗೂ ಸಂಘದ ಸಿಬ್ಬಂದಿ ವರ್ಗ,ಸದಸ್ಯರುಗಳು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?