ಹೊಸಕೋಟೆ-ಗ್ರಾಮದಲ್ಲಿ-134ನೇ-ಡಾ.ಬಿ.ಆರ್.ಅಂಬೇಡ್ಕರ್-ಅವರ- ಜನ್ಮದಿನ-ಆಚರಣೆ

ಕೋಳಾಲ– ಹೋಬಳಿಯ ನೀಲಗೋಂಡನಹಳ್ಳಿ ಹಳ್ಳಿ ಗ್ರಾಮ ಪಂಚಾಯತಿ ವಾಪ್ತಿಯ ಹೊಸಕೋಟೆ ಗ್ರಾಮದಲ್ಲಿ 134ನೇ ಜನುಮದಿನದ ಆಚರಣೆಯನ್ನು ಇಬ್ರೂಮನೆಯಿಂದ ಮಾಡಲಾಗಿತ್ತು.

ಹೆಚ್ ಎನ್ ರಾಜಣ್ಣ ಮಾತನಾಡಿದ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಾನು ಬೆಳೆದ ಹಳ್ಳಿ ಹಾಗೂ ಓದಿದ ಶಾಲೆಯಲ್ಲಿ ಡಾ: ಬಿ. ಆರ್. ಅಂಬೇಡ್ಕರ್ ಅವರ ಜನುಮದಿನವನ್ನು ಆಚರಣೆ ಮಾಡುತ್ತಿದ್ದು. ಭಾರತರತ್ನ, ಸಂವಿಧಾನಶಿಲ್ಪಿ, ಆಧುನಿಕ ಭಾರತದ ನಿರ್ಮಾತೃ, ಮಹಾ ಮಾನವತಾವಾದಿ ಡಾ. ಬಿ.ಆರ್.ಅಂಬೇಡ್ಕರ್ ರವರ 134ನೇ ಜನ್ಮದಿನದಂದು ಶತಶತ ನಮನಗಳನ್ನು ಸಲ್ಲಿಸುತ್ತೇನೆ.

ದೇಶದಲ್ಲಿ ಬೇರೂರಿದ್ದ ಜಾತಿತಾರತಮ್ಯ, ಅಸಮಾನತೆ, ದೀನದಲಿತರ ಮೇಲಿನ ಶೋಷಣೆ ವಿರುದ್ಧದ ಹೋರಾಟಕ್ಕೆ ತಮ್ಮ ಜೀವನವನ್ನೇ ಸವೆಸಿದ ಮಹಾನಾಯಕ‌‌. ಶೋಷಿತರು, ಹಿಂದುಳಿದವರು ಹಾಗೂ ಮಹಿಳೆಯರಿಗೆ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಶಿಕ್ಷಣವನ್ನು ಪ್ರತಿಪಾದಿಸಿದ ದಮನಿತರ ದನಿ. ಶ್ರೇಷ್ಟ ಸಂವಿಧಾನವನ್ನು ಅರ್ಪಿಸುವ ಮೂಲಕ ನವ ಭಾರತದ ನಿರ್ಮಾಣಕ್ಕೆ ಅಡಿಪಾಯ ಹಾಕಿದರು. ಎಂದು ಹೇಳುತ್ತಾ ಭಾರತವನ್ನು ಬೆಳಗಿಸಿದ ಬಾಬಾ ಸಾಹೇಬ್‌ರ ಅಮೂಲ್ಯವಾದ ಜೀವನ ಆದರ್ಶಗಳು ಮತ್ತು ತತ್ವಗಳನ್ನು ಅನುಕರಿಸುವ ಮೂಲಕ ನಾಗರಿಕರ ಹಕ್ಕುಗಳ ರಕ್ಷಣೆಗೆ ಮತ್ತು ಸಂವಿಧಾನದ ಉಳಿವಿಗಾಗಿ ಬದ್ಧರಾಗೋಣ. ಎಂದು ಹೇಳಿದರು.

ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯೆ ಲಕ್ಷ್ಮಿದೇವಮ್ಮ. ಮಾಜಿ ಸದಸ್ಯ ಕೆಂಪನರಸಿಂಹಯ್ಯ ಮಾಜಿ ಉಪಾಧ್ಯಕ್ಷ ನಾಗರಾಜಯ್ಯ ಹನುಮಂತ್ ರಾಯಪ್ಪ ನಾಗಭೂಷಣ ಹಾಗೂ ಊರಿನ ಜನರು ಹಾಜರಿದ್ದರು.

ವರದಿ- ನರಸಿಂಹಯ್ಯ ಕೋಳಾಲ

Leave a Reply

Your email address will not be published. Required fields are marked *

× How can I help you?