ಅರಕಲಗೂಡು- ತಾಲೂಕಿನ ರುದ್ರಪಟ್ಟಣದಲ್ಲಿ 22ನೇ ವಾರ್ಷಿಕ ಸಂಗೀತೋತ್ಸವ- ಮೇ 21ರಿಂದ 25ರವರೆಗೆ ಭವ್ಯ ಕಾರ್ಯಕ್ರಮ


ಅರಕಲಗೂಡು- ತಾಲ್ಲೂಕಿನ ಸಂಗೀತ ಗ್ರಾಮ ರುದ್ರಪಟ್ಟಣದ ಶ್ರೀ ರಾಮಮಂದಿರದಲ್ಲಿ, ರಾಮನಾಥಪುರ-ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್ ವತಿಯಿಂದ ಏರ್ಪಡಿಸಲಾದ 22ನೇ ವಾರ್ಷಿಕ ಸಂಗೀತೋತ್ಸವವು ಮೇ 21ರಿಂದ 25ರ ವರೆಗೆ ಐದು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ.

ಈ ಸಂಗೀತೋತ್ಸವವು ಗಾನ ಕಲಾಭೂಷಣ ವಿದ್ವಾನ್ ಅರ್.ಕೆ. ಪದ್ಮನಾಭ ಅವರ ನೇತೃತ್ವದಲ್ಲಿ ಹಾಗೂ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು, ಶ್ರೋತೃಮನೆಗೆ ಸಂಸ್ಕೃತಿಯ ಸಂಭ್ರಮವನ್ನು ಉಣಬಡಿಸಲಿದ್ದಾರೆ.

ಉದ್ಘಾಟನೆ ಹಾಗೂ ಮೊದಲ ದಿನದ ಕಾರ್ಯಕ್ರಮಗಳು – ಮೇ 21, ಬುಧವಾರ:

ಮೊದಲ ದಿನ ಬೆಳಿಗ್ಗೆ 10:15ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬಳಿಕ ವಿವಿಧ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ:

  • 10:30 – ಶ್ರೀಮತಿ ಮಧುರಾ ಪ್ರಸಾದ್ – ಗಾಯನ
  • 11:10 – ಕು. ಎ.ಆರ್. ಕೀರ್ತನ – ಭರತನಾಟ್ಯ
  • 11:50 – ಕು. ಕೆ.ಕೆ. ವೈಭವಿ – ಗಾಯನ
  • 12:20 – ಮಾ. ಅತ್ರಿ ಕೌಶಿಕ್ – ಸಂಗೀತ ಸಂಪ್ರದಾಯ ಪ್ರವಚನ
  • 12:40 – ಕು. ಅನನ್ಯ ಪಿ.ರಾವ್ ಮತ್ತು ಕು. ಅಭಿಜ್ಲ ಪಿ.ರಾವ್ – ಭರತನಾಟ್ಯ
  • 1:00 – ಕು. ಶರಣ್ಯಾ ಎಸ್.ಆಚಾರ್ – ಗಾಯನ

ಸಂಜೆ 4:00ರಿಂದ ಸಂಗೀತ ಮತ್ತು ಯಂತ್ರವಾದ್ಯ ಕಾರ್ಯಕ್ರಮಗಳು ಆರಂಭವಾಗಲಿದ್ದು, ಗಣ್ಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ:

  • 4:00 – ಗೋಷ್ಠಿ ಗಾಯನ – ಲಕ್ಷೀರಾಮ್ ಕಲಾಶಾಲಾ
  • 5:00 – ಕೊಳಲು: ವಿ. ಪ್ರಮುಖ್ ಎಂ.ಎಸ್., ಪಿಟೀಲು: ವಿ. ಕೃತಿಕ್ ಕೌಶಿಕ್, ಮೃದಂಗ: ವಿ. ವಿನಯ್ ನಾಗರಾಜನ್, ಮೋರ್ಚಿಂಗ್: ವಿ. ಡಿ.ವಿ. ಪ್ರಸನ್ನಕುಮಾರ್
  • 6:15 – ಗಾಯನ: ವಿ. ವೈಷ್ಣವಿ ದತ್ತ, ಪಿಟೀಲು: ವಿ. ಕಾರ್ತಿಕೇಯ ರಾಮಚಂದ್ರ, ಮೃದಂಗ: ವಿ. ಬಿ.ಜೆ. ಶ್ರೀನಿವಾಸ್
  • 7:30 – ಗಾಯನ: ವಿ. ಕೃತಿಕಾ ಶ್ರೀನಿವಾಸ್, ಪಿಟೀಲು: ವಿ. ಸಿ.ವಿ. ಶೃತಿ, ಮೃದಂಗ: ವಿ. ದೀಪಿಕಾ ಶ್ರೀನಿವಾಸನ್

ಮೇ 22, ಗುರುವಾರ:

  • ಬೆಳಿಗ್ಗೆ 10:30 – ಗಾಯನ: ವಿ. ಎಂ.ಎಸ್.ದೀಪಕ್, ಪಿಟೀಲು: ವಿ. ನಳಿನಾ ಮೋಹನ್, ಮೃದಂಗ: ವಿ. ಪುತ್ತೂರು ನಿಕ್ಷಿತ್, ಮೋರ್ಚಿಂಗ್: ವಿ. ಕೆ.ಎಂ. ಲಿಖಿತ್
  • ಸಂಜೆ 4:15 – ಯುಗಳ ವೀಣೆ: ವಿ. ಪ್ರಶಾಂತ್ ಮತ್ತು ವಿ. ಪ್ರಮೋದ್ ರುದ್ರಪಟ್ಟಣ, ಮೃದಂಗ: ವಿ. ಏ. ರೇಣುಕಾ ಪ್ರಸಾದ್, ಘಟ: ವಿ. ಅರ್. ರಮೇಶ್
  • 6:45 – ಗಾಯನ: ವಿ. ಧನ್ಯ ದಿನೇಶ್ ರುದ್ರಪಟ್ಟಣ, ಪಿಟೀಲು: ವಿ. ಜನಾರ್ಧನ ಶ್ರೀನಾಥ್, ಮೃದಂಗ: ವಿ. ಜಿ.ಎಸ್. ನಾಗರಾಜು, ಖಂಜರ: ವಿ. ಹರೀಶ್ ಚಂದ್ರ

ಮೇ 23, ಶುಕ್ರವಾರ:

  • ಬೆಳಿಗ್ಗೆ – ಕೊಳಲು: ವಿ. ಚಂದನ್ ಕುಮಾರ್, ಪಿಟೀಲು: ವಿ. ಸಿಂಧು ಸುಚೇತನ್, ಮೃದಂಗ: ವಿ. ಸಿ. ಚೆಲವರಾಜ್, ಘಟ: ವಿ. ಜಿ.ಎಸ್. ರಾಮಾನುಜನ್
  • ಸಂಜೆ 4:15 – ಗಾಯನ: ವಿ. ಕಾರ್ತಿಕ್ ಮತ್ತೂರು, ಪಿಟೀಲು: ವಿ. ವಿಶ್ವಜಿತ್ ಮತ್ತೂರು, ಮೃದಂಗ: ವಿ. ಫಣೀಂದ್ರ ಭಾಸ್ಕರ್, ಘಟ: ವಿ. ಶ್ರೀನಿಧಿ ಕೌಂಡಿನ್ಯ
  • 6:45 – ಗಾಯನ: ವಿ. ವಿಷ್ಣುದೇವ್ ನಂಬೂದಿರಿ, ಪಿಟೀಲು: ವಿ. ನಿತೀಶ್ ಚಂದ್ರ, ಮೃದಂಗ: ವಿ.ಕೆ.ಯು. ಜಯಚಂದ್ರರಾವ್, ಘಟ: ವಿ. ಶಮಿತ್ ಎಸ್.ಗೌಡ

ಮೇ 24, ಶನಿವಾರ:

  • ಬೆಳಿಗ್ಗೆ 6:45 – ಕಾವೇರಿ ಪೂಜೆ
  • ಬೆಳಿಗ್ಗೆ 10:30 – ಗಾಯನ: ವಿ. ಅಕ್ಷತಾ ರುದ್ರಪಟ್ಟಣ, ಪಿಟೀಲು: ವಿ. ಆರ್.ಅಚ್ಯುತ್ ರಾವ್, ಮೃದಂಗ: ವಿ. ಅನಿರುದ್ದ ಭಟ್, ಘಟ: ವಿ. ಶರತ್ ಕೌಶಿಕ್
  • ಮಧ್ಯಾಹ್ನ 3:30 – ಪರಂಪರೆಯ ಹಿರಿಯ ವಿದ್ವಾಂಸರು ಮತ್ತು ಪ್ರತಿಭಾನ್ವಿತ ಕಲಾವಿದರಿಗೆ ಗೌರವ ಸಮರ್ಪಣೆ
  • ಸಂಜೆ 7:30 – ಮೆರವಣಿಗೆ ಹಾಗೂ ನಾಚಾರಮ್ಮ ಪ್ರಶಸ್ತಿ ಪ್ರದಾನ: ಶ್ರೀನಿವಾಸ ಪ್ರಭುರವರಿಗೆ (ನಟ ಹಾಗೂ ಸಾಹಿತಿ), ಮುಖ್ಯ ಅತಿಥಿ: ಶ್ರೀ ಕೃಷ್ಣನ್

ಮೇ 25, ಭಾನುವಾರ:

  • ಬೆಳಿಗ್ಗೆ 7:45 – ತ್ಯಾಗರಾಜರ ಪಂಚಕೃತಿಗಳ ಗೋಷ್ಠಿ ಗಾಯನ
  • 9:00 – ರಥೋತ್ಸವ ನಾಮ ಸಂಕೀರ್ತನೆ
  • 10:30 – ಯುಗಳ ಪಿಟೀಲು: ಡಾ. ಮೈಸೂರು ಎಂ. ಮಂಜುನಾಥ್ ಮತ್ತು ಮೈಸೂರು ಎಂ. ಸುಮಂತ್, ಮೃದಂಗ: ವಿ. ಕೆ. ಸಾಯಿ ಗಿರಿಧರ್, ಖಂಜರ: ವಿ. ಜಿ. ಗುರುಪ್ರಸನ್ನ

ಈ ಭವ್ಯ ಸಂಗೀತೋತ್ಸವವು ಸಂಗೀತ ಪ್ರೇಮಿಗಳಿಗೆ ವೈಭವಪೂರ್ಣ ಸಾಂಸ್ಕೃತಿಕ ಸಪ್ತಾಹವೊಂದಾಗಿ ರೂಪುಗೊಳ್ಳಲಿದೆ. ಪ್ರತಿ ಕಲಾವಿದನಿಗೂ ವೇದಿಕೆ ನೀಡುವ, ಪರಂಪರೆ ಮತ್ತು ನವೀನತೆಯ ಸಮನ್ವಯದ ಈ ಉತ್ಸವವು ರುದ್ರಪಟ್ಟಣದ ಶ್ರೇಷ್ಟತೆಯನ್ನು ಮತ್ತಷ್ಟು ಬೆಳಗಿಸಲು ಅನುವು ಮಾಡಿಕೊಡಲಿದೆ ಎಂದು ಸಂಗೀತೋತ್ಸವ ಸಮಿತಿ ಟ್ರಸ್ಟ್‌ನ ಪದಾಧಿಕಾರಿಗಳು ತಿಳಿಸಿದ್ದಾರೆ.

ವರದಿ: ಕೆಲ್ಲೂರು ಶಶಿಕುಮಾರ್

0 thoughts on “ಅರಕಲಗೂಡು- ತಾಲೂಕಿನ ರುದ್ರಪಟ್ಟಣದಲ್ಲಿ 22ನೇ ವಾರ್ಷಿಕ ಸಂಗೀತೋತ್ಸವ- ಮೇ 21ರಿಂದ 25ರವರೆಗೆ ಭವ್ಯ ಕಾರ್ಯಕ್ರಮ

Leave a Reply

Your email address will not be published. Required fields are marked *