ಕೊರಟಗೆರೆ:- ಕೊರಟಗೆರೆ ತಾಲೂಕಿನಲ್ಲಿ ಏಪ್ರಿಲ್ 19 ರಂದು 453 ಕೋಟಿ ರೂಗಳ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಾಗುವುದು ಹಾಗೂ ತಾಲೂಕಿನ 62 ಕೆರೆಗಳಿಗೆ ಎತ್ತಿನ ಹೊಳೆ ಯೋಜನೆಯಲ್ಲಿ ನೀರನ್ನು ಹರಿಸುವ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅವರು ತಾಲ್ಲೂಕಿನ ಗೊರವನಹಳ್ಳಿಯ ಕಮಲ ಪ್ರಿಯ ಕಲ್ಯಾಣ ಮಂಟಪದಲ್ಲಿ ತುಮಕೂರು ಜಿಲ್ಲಾ ಪಂಚಾಯತ್ ವತಿಯಿದ ಏರ್ಪಡಿಸಿದ್ದ ಏಪ್ರಿಲ್ 19ನೇ ತಾರೀಕಿನ ಶಂಕುಸ್ಥಾಪನಾ ಕಾರ್ಯಕ್ರಮಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಏಪ್ರಿಲ್ 19 ರ ಶನಿವಾರದಂದು ತಾಲೂಕಿನ 62 ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಲ್ಲಿ ನೀರು ಹರಿಸುವ ಕಾರ್ಯ ಕೈಗೊಳ್ಳಲ್ಲಾಗುವುದು ಎಂದರು.
ಕೊರಟಗೆರೆ ತಾಲ್ಲೂಕಿನಲ್ಲಿ 453 ಕೋಟಿ ರೊ ಅನುದಾನ ಬಿಡುಗೊಳಿಸುತಿದ್ದು ಇದರಲ್ಲಿ 285 ಕೋಟಿ ರೂ ಲೋಕೋಪಯೋಗಿ ಇಲಾಖೆಯ 35 ಕೋಟಿರೂ, ಜಿಲ್ಲಾ ಪಂಚಾಯತ್‍ನ 46 ಕೋಟಿರೂ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯದ 34 ಕೋಟಿ ಪಂಚಾಯತ್‍ರಾಜ್ 20ಕೋಟಿ ರೂ, ಬೆಸ್ಕಾಂ 19 ಕೋಟಿರೂ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ 5.87 ಕೋಟಿ ರೂಗಳ ವಿವಿಧ ಇಲಾಖೆಗಳ ಸವಲತ್ತು ವಿತರಣೆ ಸೇರಿದಂತೆ ಒಟ್ಟು 453 ಕೋಟಿ ರೂಗಳ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ನಮ್ಮ ರಾಜ್ಯದಲ್ಲಿ 1.28 ಹೆಕ್ಟೇರ್ ಭೂಮಿಯು ಉಳುಮೆಗೆ ಯೋಗ್ಯವಿದ್ದು ಇದರಲ್ಲಿ 42.32 ಹೆಕ್ಟೇರ್ ಭೂಮಿ ನೀರಾವರಿಯಾಗಿದೆ, ಈ ಹಿಂದೆ ನಾನು ಕೆ.ಪಿ.ಸಿ.ಸಿ. ಅದ್ಯಕ್ಷನಾಗಿದ್ದಾಗ ಸಿದ್ದರಾಮಯ್ಯನವರು ಸಿ.ಎಲ್.ಪಿ ನಾಯಕರಾಗಿದ್ದಾಗ ಹೊಸಪೇಟೆಯಿಂದ ಕೊಡಲಸಂಗಮಕ್ಕೆ ಪಾದಯಾತ್ರೆ ಮಾಡಿ ಕೂಡಲಸಂಗಮದಲ್ಲಿ ನಮ್ಮ ಸರ್ಕಾರ ಬಂದಲ್ಲಿ ನೀರಾವರಿ ಯೋಜನೆಗೆ ಪ್ರತಿ ವರ್ಷ 10.000 ಕೋಟಿ ರೂಗಳನ್ನು ನೀಡಲಾಗುವುದು ಎಂದು ಪ್ರಮಾಣ ಮಾಡಿದ್ದೇವು, 2013 ರಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರ ಬಂದಾಗ ಅಂದು ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು 2013 ರಿಂದ 2018 ರವರೆಗೆ 58.000 ಕೋಟಿ ರೂಗಳನ್ನು ನೀರಾವರಿ ಯೋಜನೆಗೆ ನೀಡಿ ಸುಮಾರು 9 ಲಕ್ಷಕ್ಕೂ ಹೆಚ್ಚು ಭೂಮಿಯನ್ನು ನೀರಾವರಿ ಪ್ರದೇಶವನ್ನಾಗಿ ಮಾಡಿದರು. 2013 ರಲ್ಲಿ ನಮ್ಮ ಸರ್ಕಾರದಲ್ಲಿ 24 ಟಿ.ಎಂ.ಸಿ.ತಜ್ಞರ ಸಲಹೆಯ, 13500 ಸಾವಿರಕೋಟಿ ರೂ ಗಳ ಅಂದಾಜಿನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಕುಡಿಯುವ ನೀರನ ಎತ್ತಿನಹೊಳೆ ಯೋಜನೆಗೆ 6500 ಸಾವಿರಕೋಟಿ ಮಂಜೂರು ಮಾಡಿತ್ತು ಈಗ ಆ ಯೋಜನೆ 25.000 ಕೋಟಿ ರೂಗಳ ವೆಚ್ಚಕ್ಕೆ ತಲುಪಿದೆ, ಈಗ ಪ್ರಸ್ಥುತ ನಮ್ಮ ಸರ್ಕಾರದ ಪೂರ್ಣಾವಧಿಯಲ್ಲಿ ಈ ಯೋಜನೆಯನ್ನು ಮುಗಿಸಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೂ ಸಹ ನೀರು ಹರಿಸಲಾಗುವುದು ಈಗಾಗಲೇ ಅರಸೀಕೆರೆಗೆ ನೀರು ಹರಿದಿದ್ದು ತುಮಕೂರು ಜಿಲ್ಲೆಗೆ ಜೂನ್ 2026ರ ಹೊತ್ತಿಗೆ ಈ ಯೋಜನೆಯ ನೀರು ಹರಿಸಲಾಗುವುದು ಈ ಯೋಜನೆಯ ಕಾಮಗಾರಿಯಲ್ಲಿ ಅರಣ್ಯ ಪ್ರದೇಶಗಳು ಬರುವುದರಿಂದ ಅಲ್ಲಿ ಕಾಮಗಾರಿ ಅನುಮತಿಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ಬೈರಗೊಂಡ್ಲು ಬಫರ್‍ಡ್ಯಾಂ ಪ್ರಸ್ಥಾವನೆ ಸದ್ಯಕ್ಕಿಲ್ಲ– ಎತ್ತಿನಹೊಳೆ ಯೋಜನೆ ಪ್ರಾರಂಭದಲ್ಲಿ ಕೊರಟಗೆರೆ ತಾಲೋಕಿನಲ್ಲಿ ಬೈರಗೊಂಡ್ಲು ಬಳಿ ಬಫರ್ ಡ್ಯಾಂನ್ನು ನಿರ್ಮಿಸಲು ಯೋಜನೆರೂಪಿಸಲಾಯಿತು ಅದರೆ ಕಳೆದ ವರ್ಷದ ಬಿ.ಜೆ.ಪಿ ಸರ್ಕಾರ ಕೊರಟಗೆರೆ ತಾಲೂಕಿನಲ್ಲಿ ನಿರ್ಮಾಣವಾಗಬೇಕಿದ್ದ ಬೈರಗೊಂಡ್ಲು ಬಫರ್ ಡ್ಯಾಂಅನ್ನು ದೊಡ್ಡಬಳ್ಳಾಪುರ ತಾಲೂಕಿಗೆ ಸ್ಥಳಾಂತರಿಸಿದ್ದಾರೆ, ತಾಲ್ಲೂಕಿನಲ್ಲಿ ಬೈರಗೊಂಡ್ಲು ಬಫರ್ ಡ್ಯಾಂ ನಿರ್ಮಾಣಕ್ಕೆ ಪರವಿರೋಧಗಳು ಇರಬಹುದು ಅದರೆ ಸದ್ಯಕ್ಕೆ ಸರ್ಕಾರದ ಮುಂದೆ ಈ ಡ್ಯಾಂ ನಿರ್ಮಾಣದ ಪ್ರಸ್ಥಾವನೆ ಇಲ್ಲ ಎಂದು ಗೃಹ ಮಂತ್ರಿಗಳು ತಿಳಿಸಿದರು.
ಏಪ್ರಿಲ್ 19 ಕ್ಕೆ ರೈತರು, ಸಾರ್ವಜನಿಕರು ಬನ್ನಿ-ತಾಲೂಕಿನಲ್ಲಿ 62 ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗಳ ಉದ್ಘಾಟನೆಗೆ ರೈತರು, ಸಾರ್ವಜನಿಕರು, ಮಹಿಳೆಯರು, ಸಾವಿರಾರು ಸಂಖ್ಯೆಯಲ್ಲಿ ಬರುವಂತೆ ಕ್ಷೇತ್ರದ ಶಾಸಕರಾದ ಡಾ.ಜಿ.ಪರಮೇಶ್ವರ್ ಕೋರಿದರು.
ಪೂರ್ವಭಾವಿ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ. ಪ್ರಭು, ಜಿಲ್ಲಾಧಿಕಾರಿ ಶುಭಕಲ್ಯಾಣ್ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಅಶೋಕ್, ಜಿ.ಪಂ. ಅಭಿವೃದ್ದಿ ಅಧಿಕಾರಿ ಸಂಜೀವರಾಯಪ್ಪ, ತಹಶೀಲ್ದಾರ್ ಮಂಜುನಾಥ್ , ಇ.ಓ. ಅಪೂರ್ವ, ವಿಶೇಷ ಅಧಿಕಾರಿ ನಾಗಣ್ಣ, ಎಂ.ಐ.ಇಲಾಖೆಯ ಮೂಡ್ಲಗಿರಯಪ್ಪ, ತಿಪ್ಪೆಸ್ವಾಮಿ, ರಮೇಶ್, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳಾದ ಅರಕೆರೆ ಶಂಕರ್, ಅಶ್ವಥ್ಥನಾರಾಯಣ ಮುಖಂಡರಾದ ಮಾಹಲಿಂಗಪ್ಪ, ಬಲರಾಮಯ್ಯ, ಹುಲಿಕುಂಟೆ ಪ್ರಸಾದ್, ಕೆ.ಬಿ.ಲೋಕೇಶ್, ಮಂಜುನಾಥ್, ಸೇರಿದಂತೆಇತರರು ಹಾಜರಿದ್ದರು.
– ಶ್ರೀನಿವಾಸ್ , ಕೊರಟಗೆರೆ