ಮೈಸೂರು-ವಿಷಕಾರಿ ರಾಸಾಯನಿಕ ವಸ್ತುಗಳಿಂದ ತಯಾರಿಸಿದ ಗಣೇಶ ಮೂರ್ತಿಗಳು ಪರಿಸರಕ್ಕೆ ಹಾನಿಕಾರಕ-ಕಲಾವಿದ ಆರ್.ಲಕ್ಷೀ ಚಲಪತಿ

ಮೈಸೂರು-ಭಗವಂತನಿಗೆ ಭಕ್ತಿಯಿಂದ ನೆರವೇರಿಸುವ ಪೂಜೆ ಮುಖ್ಯವೇ ಹೊರತು ವಿಜೃಂಭಣೆ, ಆಡಂಬರವಲ್ಲ.ವಿಷಕಾರಿ ರಾಸಾಯನಿಕ ವಸ್ತುಗಳಿಂದ ತಯಾರಿಸಿದ ಗಣೇಶ ಮೂರ್ತಿಗಳು ಪರಿಸರಕ್ಕೆ ಹಾನಿಕಾರಕವಾಗಿದ್ದು,ಅವುಗಳಿಂದ ಜಲಮಾಲಿನ್ಯ ಉಂಟಾಗುತ್ತಿದೆ.ಹಾಗೆಯೇ ಇತರ ಜೀವ ಜಂತುಗಳಿಗೂ ಹಾನಿ ಸಂಭವಿಸುತ್ತಿದೆ.ಶುದ್ಧ ಜೇಡಿಮಣ್ಣಿನಿಂದ ತಯಾರಿಸಿದ ಚಿಕ್ಕ ಗಣೇಶ ಮೂರ್ತಿಗಳನ್ನು ಪೂಜಿಸುವ ಮೂಲಕ ರಾಸಾಯನಿಕ ಹಾಗೂ ಪ್ಲಾಸ್ಟಿಕ್‌ ಮುಕ್ತ ಗಣೇಶೋತ್ಸ ವವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು ಎಂದು ಕಲಾವಿದರಾದ ಆರ್.ಲಕ್ಷೀ ಚಲಪತಿ ಮನವಿ ಮಾಡಿದರು.

ಮಂಚೇಗೌಡನ ಕೊಪ್ಪಲು ಸರ್ಕಾರಿ ಶಾಲೆಯಲ್ಲಿ ಶ್ರೀ ದುರ್ಗಾ ಫೌಂಡೇಶನ್ ನ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜೇಡಿಮಣ್ಣಿನಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸುವ ಶಿಬಿರದಲ್ಲಿ ಮಕ್ಕಳಿಗೆ ಮೂರ್ತಿಗಳ ನಿರ್ಮಿಸುವ ಬಗೆಯನ್ನು ಹೇಳಿಕೊಟ್ಟು ಅವರು ಮಾತನಾಡಿದರು.

ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷರಾದ ಮಂಜೇಗೌಡನ ಕೊಪ್ಪಲು ರವಿ ಮಾತನಾಡಿ ಇಂದಿನ ದಿನಗಳಲ್ಲಿ ‘ಪಿ ಓ ಪಿ,ಬಾಂಬೆ ಗಣೇಶಗಳನ್ನು ಕೂರಿಸುತ್ತಿದ್ದೇವೆ.ಇದರಿಂದ ಪರೋಕ್ಷವಾಗಿ ಮನುಷ್ಯನ ಮೇಲೆ ಪರಿಣಾಮ ಬೀರುತ್ತಿದೆ.ಶಾಸ್ತ್ರಗಳ ಪ್ರಕಾರ ಕಲ್ಲು,ಮಣ್ಣು ಮತ್ತು ಲೋಹ ದಿಂದ ವಿಗ್ರಹವನ್ನು ತಯಾರಿಸ ಬೇಕು.ಇವುಗಳಲ್ಲಿ ಮಾತ್ರ ದೈವತ್ವದ ಶಕ್ತಿ ಇರುತ್ತದೆ.ಪಿ ಒ ಪಿಯಿಂದ ತಯಾರಿಸಿದ ಗಣೇಶಮೂರ್ತಿಗಳಲ್ಲಿ ದೈವಶಕ್ತಿ ಇರುವುದಿಲ್ಲ ಕೇವಲ ಪ್ರದರ್ಶನಕ್ಕಷ್ಟೇ ಸೀಮಿತವಾಗಿರುತ್ತವೆ’ ಎಂಬ ಅಭಿಪ್ರಾಯ ಪಟ್ಟರು.

ಶ್ರೀ ದುರ್ಗಾಪೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ಮಾತನಾಡಿ
ಗಣೇಶ ಹಬ್ಬದಲ್ಲಿ ಸ್ನೇಹಿ ಗಣೇಶ ಮೂರ್ತಿಗಳಿಂದ ಪರಿಸರ ರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಪರಿಸರ ಉಳಿಸಬೇಕಾದ್ದು, ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಶಿಬಿರದಲ್ಲಿ 100ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ತಮ್ಮದೇ ಆದಂತಹ ವಿಭಿನ್ನ ಶೈಲಿಯ ಗಣಪತಿ ಮೂರ್ತಿ ತಯಾರಿಸಿ,ಸಂಭ್ರಮಿಸಿದರು. ಮೂರ್ತಿಯೊಳಗೆ ಬೀಜ ಇಟ್ಟು ಜೀವ ಗಣಪತಿ ತಯಾರಿಸಿ ಖುಷಿಪಟ್ಟು ಮನೆಗಳಿಗೆ ಕೊಂಡೊಯ್ದರು.

ಶ್ರೀ ದುರ್ಗಾಪೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ರವಿ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ಸಂತೋಷ್ ಕಿರಾಲು,ಅಶ್ವಿನಿ ಗೌಡ,ಶಾಲೆಯ ಮುಖ್ಯೋಪಾಧ್ಯಾಯರಾದ ಶುಭ,ಹಾಗೂ ಶಿಕ್ಷಕರು ಹಾಜರಿದ್ದರು.

———-ಮಧುಕುಮಾರ್

Leave a Reply

Your email address will not be published. Required fields are marked *

× How can I help you?