ತುಮಕೂರು:ಕಲ್ಪತರು ನಾಡಿನಲ್ಲಿ ನಾಳೆಯೇ 39ನೇ ಪತ್ರಕರ್ತರ ಸಮ್ಮೇಳನ-ಸುದ್ದಿಮನೆಯ ಸ್ನೇಹಿತರಿಗೆ ಸ್ವಾಗತ ಕೋರಿದ ರಾಜ್ಯಾಧ್ಯ ಕ್ಷರಾದ ಶಿವಾನಂದ ತಗಡೂರು

ತುಮಕೂರು:ಕಲ್ಪತರು ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 39ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಂಡಿದ್ದು ಸಮ್ಮೇಳನಕ್ಕೆ ಸುದ್ದಿ ಮನೆಯ ಎಲ್ಲಾ ಸ್ನೇಹಿತರಿಗೂ ಸ್ವಾಗತ ಕೋರಿದ್ದು ನಾಳೆ ನಡೆಯುವ ಸಮ್ಮೇಳನವನ್ನ ನಾವೆಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ತಿಳಿಸಿದರು.

ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಾಣ ಗೊಂಡಿರುವ ವೇದಿಕೆಯ ಸಿದ್ದತೆ ಕಾರ್ಯಗಳನ್ನು ಪರಿಶೀಲಿಸಿ ಮಾತನಾಡಿದ ಅವರು,ಸಂಘದ ತುಮಕೂರು ಜಿಲ್ಲಾ ಘಟಕ ಅದ್ದೂರಿಯಾಗಿ 39ನೇ ಸಮ್ಮೇಳನಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದೆ.ಈ ಕಾರ್ಯಕ್ರಮ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಪತ್ರಕರ್ತರುಗಳಿಗೆ ಬಹು ಮುಖ್ಯವಾದ ವೇದಿಕೆಯಾಗಲಿದೆ.ಜಾಹೀರಾತು ಸೇರಿದಂತೆ ಸುದ್ದಿ ಮನೆಯ ಎಲ್ಲಾ ವಿಚಾರ ಗೊಂದಲಗಳಿಗೆ ಇಲ್ಲಿ ಉತ್ತರ ಕಂಡುಕೊಳ್ಳುವ ದೃಷ್ಟಿಯಿಂದ ಸಮ್ಮೇಳನವನ್ನು ಆಯೋಜನೆ ಮಾಡಲಾಗಿದೆ.ಈ ಸಮ್ಮೇಳನಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆ.ಸಮ್ಮೇಳನದ ಮುಖ್ಯ ರೂವಾರಿಗಳಾದ ಡಾ,ಜಿ.ಪರ ಮೇಶ್ವರ್ ಅವರು ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ನಾಡಿನ ವಿವಿಧ ಗಣ್ಯರು ಮಠಾಧೀಶರು ಸೇರಿ ಸಮ್ಮೇಳನವನ್ನು ಯಶಸ್ವಿಗೊಳಿಸಲಿದ್ದಾರೆ ಎಂದು ತಿಳಿಸಿದರು.

ನಗರದ ಟೌನ್ ಹಾಲ್ ವೃತ್ತದಿಂದ ನಡೆಯಲಿರುವ ರಾಜ್ಯ ಸಮ್ಮೇಳನದ ಮೆರವಣಿಗೆ ಬಹಳ ಮಹತ್ವಪೂರ್ಣವಾಗಿದ್ದು ಇದರಲ್ಲಿ ಸಾವಿರಾರು ಪತ್ರಕರ್ತರುಗಳು ಹೆಜ್ಜೆ ಹಾಕಲಿದ್ದಾರೆ.ಸಮ್ಮೇಳನ ಜಾಗದಲ್ಲಿ ಏರ್ಪಾಡು ಮಾಡಿರುವ ವಸ್ತು ಪ್ರದರ್ಶನ ಎಲ್ಲರ ಗಮನ ಸೆಳೆಯಲಿದೆ. ನಾಳೆ ಸಂಜೆ ನಾಡಿನ ಖ್ಯಾತ ಗಾಯಕಿ ಶಮಿತ ಮಲ್ನಾಡ್ ಅವರಿಂದ ಆಯೋಜನೆ ಮಾಡಲಾಗಿರುವ ರಸ ಸಂಜೆ ಎಲ್ಲರ ಗಮನ ಸೆಳೆದಿದೆ. ಪತ್ರಕರ್ತರುಗಳಿಗೆ ಕಗ್ಗಂಟಾಗಿರುವ ಅನೇಕ ವಿಚಾರಗಳಿಗೆ ವಿಚಾರಗೋಷ್ಠಿಗಳನ್ನ ಆಯೋಜನೆ ಮಾಡಲಾಗಿದ್ದು ಈ ಘೋಷ್ಠಿಗಳಲ್ಲಿ ಅದಕ್ಕೆ ಉತ್ತರ ಕಂಡು ಕೊಳ್ಳಬಹುದು. ಇದಕ್ಕೆ ನಾಡಿನ ಹಿರಿಯ ಪತ್ರಕರ್ತರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುತ್ತಿದ್ದಾರೆ. ಮಹತ್ವಪೂರ್ಣವಾದ 39ನೇ ರಾಜ್ಯ ಸಮ್ಮೇಳನ ತುಮಕೂರಿನಲ್ಲಿ ನಡೆಯುತ್ತಿರುವುದು ಶ್ಲಾಘನೀಯವಾಗಿದ್ದು ಅದ್ದೂರಿಯ ವ್ಯವಸ್ಥೆಗಳನ್ನು ತುಮಕೂರು ಜಿಲ್ಲಾ ಘಟಕದ ಎಲ್ಲ ಪದಾಧಿಕಾರಿಗಳು ಮಾಡಿರುವುದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ಚೀನಿ ಪುರುಷೋತ್ತಮ್ ಅವರು ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವ ಅದ್ದೂರಿ ಸಮ್ಮೇಳನ ಐತಿಹಾಸಿಕವಾಗಲಿದೆ.ಈ ಕಾರ್ಯಕ್ರಮವನ್ನು ಆಯೋಜಿಸಲು ನಮ್ಮ ಸಂಘಟನೆಯ ಪದಾಧಿಕಾರಿಗಳು ಸಾಕಷ್ಟು ಶ್ರಮವನ್ನು ಹಾಕಿದ್ದು ಬರುವ ಪತ್ರಕರ್ತರಿಗೆ ಎಲ್ಲಾ ರೀತಿಯ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ.ನಮ್ಮ ಜಿಲ್ಲೆಯ ಅಧಿಕಾರಿಗಳು, ಜನಪ್ರತಿನಿಧಿಗಳು,ಸಂಘಟನೆಯ ಮುಖ್ಯಸ್ಥರು, ಕೈಗಾರಿಕೋ ದ್ಯಮಿಗಳು, ವಾಣಿಜ್ಯೋದ್ಯಮಿಗಳು ಸೇರಿದಂತೆ ಅನೇಕರ ಸಹಕಾರ ಸಹಾಯಗಳಿಂದಾಗಿ ನಮ್ಮ ಸಮ್ಮೇಳನ ಬಹಳ ಅದ್ದೂರಿಯಾಗಿ ನಡೆಯಲು ಕಾರಣವಾಗಿದೆ. ನಾಳೆ ನಡೆಯಲಿರುವ ಸಮ್ಮೇಳನಕ್ಕೆ ಪತ್ರಕರ್ತರ ಕುಟುಂಬಸ್ಥರು ಸುದ್ದಿ ಮನೆಯ ಪ್ರಮುಖರು ಸೇರಿದಂತೆ ಸಾರ್ವಜನಿಕರು ಬಂದು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿಕೊಂಡರು.

Leave a Reply

Your email address will not be published. Required fields are marked *

× How can I help you?