
ಚಿಕ್ಕಮಗಳೂರು-ತಾಲ್ಲೂಕಿನ ಖಾಂಡ್ಯ ಹೋಬಳಿ ಸುತ್ತಮುತ್ತಲು ಬಿಎಸ್ಎನ್ಎಲ್ ಟವರಿನಲ್ಲಿ ನೆಟ್ವರ್ಕ್ ಸಮಸ್ಯೆ ಉದ್ಬವಿಸಿದ್ದು ಶೀಘ್ರವೇ ಸರಿಪಡಿಸಬೇಕು ಎಂದು ಕಡವಂತಿ ಗ್ರಾ.ಪಂ. ಸದಸ್ಯ ವಿನೋದ್ ಶನಿವಾರ ಬಿಎಸ್ಎನ್ಎಲ್ ಜಿಲ್ಲಾ ಜನರಲ್ ಮ್ಯಾನೇಜರ್ ಬಾಲಾಜಿಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಖಾಂಡ್ಯ ಹೋಬಳಿ ಬೊಗಸೆ ಗ್ರಾಮದಲ್ಲಿ 4ಜಿ ಬಿಎಸ್ಎನ್ಎಲ್ ಟವರ್ ಕಳೆದ ಒಂದು ವರ್ಷದ ಹಿಂದೆ ನಿರ್ಮಾಣಗೊಂಡು ಸೇವೆ ಒದಗಿಸಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸರಿಯಾಗಿ ನೆಟ್ವರ್ಕ್ ಸಿಗದೇ ದೂರವಾಣಿ ಕರೆ ಹಾಗೂ ಆನ್ಲೈನ್ಗೂ ಬಹಳಷ್ಟು ಸಮಸ್ಯೆಯಾಗಿದೆ ಎಂದು ತಿಳಿಸಿದರು.
ಈ ಹಿಂದೆ ನಿರ್ಮಾಣಗೊಂಡಿದ್ಧ ಟವರ್ ಸೋಲಾರ್ನಿಂದ ಚಾಲನೆಗೊಂಡು ಖಾಂಡ್ಯ, ಕಡವಂತಿ, ಬೊಗಸೆ ಸೇರಿದಂತೆ ಅನೇಕ ಗ್ರಾಮಗಳಿಗೆ ಆಧಾರವಾಗಿತ್ತು. ಇದೀಗ ಬ್ಯಾಟರಿ ಸಮಸ್ಯೆ ಅಥವಾ ಪೂರ್ಣಪ್ರಮಾಣದ ವಿದ್ಯುತ್ ಇಲ್ಲದ ಕಾರಣ ತುಂಬಾ ನೆಟ್ವರ್ಕ್ ಸಮಸ್ಯೆ ಉಂಟಾಗುತ್ತಿದೆ ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಎಸ್ಎನ್ಎಲ್ ಅಧಿಕಾರಿ ಬಾಲಾಜಿ ಫೆ.03 ರಂದು ಗ್ರಾಮಕ್ಕೆ ಸಂಬoಧಿಸಿದ ಅಧಿಕಾರಿ ವೃಂದದೊoದಿಗೆ ಭೇಟಿ ನೀಡುತ್ತಿದ್ದು ನೆಟ್ವರ್ಕ್ ತೊಂದರೆ ಅಥವಾ ಬಿಎಸ್ಎನ್ಎಲ್ ಸಮಸ್ಯೆಗಳಿಂದ ಬಳಲುವವರನ್ನು ಭೇಟಿ ಮಾಡಿ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
———-ಸುರೇಶ್