
ಚಿಕ್ಕಮಗಳೂರು-ಕಾಫಿ ನಾಡಿನ ಪ್ರಖ್ಯಾತಿಯಾಗಿರುವ ಐಡಿ ಪೀಠಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಸಿಗುವ ಅತ್ತಿಗುಂಡಿ ಗ್ರಾಮದ ಗ್ರಾಮ ದೇವತೆ ಹೊನ್ನಮ್ಮನ ಹಳ್ಳದ ಹೊನ್ನಮ್ಮ ದೇವಿಯ ನೂತನ ದೇವಾಲಯವನ್ನು ಉದ್ಘಾಟಿಸಲಾಯಿತು.
ಅತಿವೃಷ್ಟಿಯಿಂದ ಹಾನಿಗೊಳಿಗಾಗಿದ್ದ ಈ ದೇವಾಲಯವನ್ನು ಪುನರ್ ಪ್ರತಿಷ್ಠಾಪಿಸಿ ನೂತನ ಹೊನ್ನಮ್ಮ ದೇವಿಯ ವಿಗ್ರಹ ದ ಪ್ರತಿಷ್ಠಾಪನೆ ಯಶಸ್ವಿಯಾಗಿ ನೆರವೇರಿಸಲಾಗಿದ್ದು ಈ ಹೊನ್ನಮ್ಮನ ಹಳ್ಳವು ದತ್ತಪೀಠಕ್ಕೆ ತೆರಳುವ ಪ್ರವಾಸಿಗರಿಗೆ ಆಕರ್ಷಣೀಯ ಕೇಂದ್ರಬಿoದುವಾಗಿತ್ತು, ದತ್ತಮಾಲಾದಾರಿಗಳು ಇಲ್ಲಿ ತಮ್ಮ ಮಾಲೆಯನ್ನು ವಿಸರ್ಜಿಸುವ ಸ್ಥಳವೂ ಕೂಡ ಆಗಿತ್ತು, ಸದ್ಯ ದಾನಿಗಳ ಕೃಪೆಯಿಂದ ಈ ದೇವಾಲಯ ತನ್ನ ಗತವೈಭವಕ್ಕೆ ಮರಳಿದೆ.

ಈ ದೇವಾಲಯವನ್ನು ಫಲಹಾರ ಸ್ವಾಮಿ ಮಠದ ಶ್ರೀಗಳಾಗಿರುವ ಮುರುಗೇಂದ್ರ ಮಹಾಸ್ವಾಮಿಗಳು ಉದ್ಘಾಟಿಸಿದ್ದು, ನೂತನ ವಿಗ್ರಹವನ್ನು ಬಿಸಾಗ್ನಿ ಮಠದ ಅರ್ಚಕರಾದ ಮಹೇಶ್ ಅವರು ದಾನದ ರೂಪದಲ್ಲಿ ನೀಡಿದ್ದು, ಇನ್ನು ಗಾಲ್ ಟಿ ಎಸ್ಟೇಟ್‌ನ ಮಾಲೀಕರಾದ ಎಂ.ಎನ್ ವಿಕ್ರಂ ಹಾಗೂ ಅವರ ಕುಟುಂಬಸ್ಥರು ಅವರು ಸಂಪೂರ್ಣ ದೇವಾಲಯ ನಿರ್ಮಾಣಕ್ಕೆ ಸಹಾಯ ಮಾಡಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.