ಎಚ್.ಡಿ.ಕೋಟೆ-ಶಾಲೆ ಬಿಟ್ಟ ಮಕ್ಕಳನ್ನು-ಮತ್ತೆ ಶಾಲೆಗೆ ಕರೆ ತಂದು ಗುಣಮಟ್ಟದ-ಶಿಕ್ಷಣವನ್ನು ನೀಡಿ- ಶಿಕ್ಷಕರಿಗೆ-ಜಿಲ್ಲಾ ಉಪನಿರ್ದೇಶಕ ಜವರೇಗೌಡ-ಕರೆ

ಎಚ್.ಡಿ.ಕೋಟೆ: ಸಾವಿತ್ರಿಬಾಯಿ ಪುಲೆಯವರು 18 ಶಾಲೆಗಳನ್ನು ಆರಂಭಿಸಿ, ಶಾಲೆ ಬಿಟ್ಟ ಮಕ್ಕಳಿಗೆ ಮತ್ತೆ ಓದಲು ಅವಕಾಶವನ್ನು ಕಲ್ಪಿಸಿಕೊಟ್ಟಿದ್ದರು ಎಂದು ಜಿಲ್ಲಾ ಉಪನಿರ್ದೇಶಕ ಜವರೇಗೌಡ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಸಾವಿತ್ರಿಬಾ ಫುಲೆ ಶಿಕ್ಷಕಿಯರ ಸಂಘದ ವತಿಯಿಂದ ಸಾವಿತ್ರಿ ಬಾ ಫುಲೆ ಜಯಂತಿ ಮತ್ತು ಮಹಿಳಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ಅವರು, ಪುಲೆಯವರು ಅಂದು ಶಾಲೆ ಬಿಟ್ಟ ಮಕ್ಕಳಿಗೆ ಶಾಲೆ ಕಟ್ಟಿದಂತೆ ಇಂದಿನ ಶಿಕ್ಷಕಿಯರು ಶಾಲೆ ಬಿಟ್ಟ ಮಕ್ಕಳು ಮತ್ತೆ ಶಾಲೆಗೆ ಕರೆ ತಂದು ಗುಣಮಟ್ಟದ ಶಿಕ್ಷಣವನ್ನು ನೀಡುವಂತೆ ಮಾಡಿ ಎಂದು ಕರೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಮಾತನಾಡಿ, ಸಾವಿತ್ರಿ ಭಾಯಿ ಪುಲೆಯವರು ರಾಷ್ಟ್ರದ ಮೊದಲ ಮಹಿಳಾ ಶಿಕ್ಷಕಿಯಾಗಿದ್ದು‌, ಶಿಕ್ಷಕಿಯರಿಗೆ ಮಾದರಿಯಾಗಿ ನಿಲ್ಲುತ್ತಾರೆ. ತಾಲ್ಲೂಕಿನಲ್ಲಿ ಶೇ.80 ಮಹಿಳಾ ಶಿಕ್ಷಕಿಯರಿದ್ದಾರೆ, ಇದರಿಂದ ಮಕ್ಕಳನ್ನು ತಾಯಿಯಂತೆ ಪೋಷಣೆ ಮಾಡಿಕೊಂಡು ಶಿಕ್ಷಣವನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ‌ಸೇವೆ ಸಲ್ಲಿಸಿದ ರೇಖಾಮಣಿ, ಸರಸ್ವತಿ, ಸರೋಜಮ್ಮ, ಕೋಮಲಾ ಸರಸ್ವತಿ ಮತ್ತು ಸಾರನಾಥ ಬುದ್ದವಿಹಾರದ ಮಾತೆ ಗೌತಮಿ ಅವರಿಗೆ ಮಹಿಳಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಕೃಷ್ಣಯ್ಯ, ಗೌತಮಿ ಬಂತೇಜಿ, ಸಂಘದ ಅಧ್ಯಕ್ಷೆ ಪ್ರತಿಭಾ, ಕಾರ್ಯದರ್ಶಿ ರೂಪ, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ್, ಮಿಲ್ ನಾಗರಾಜು, ಸೆಲ್ವಿಯಾ, ವೀಣಾ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷೆ ರಾಜೇಶ್ವರಿ, ಸಿದ್ದರಾಜು, ಭೀಮಪ್ಪ, ಎ.ಎಸ್. ಮಹದೇವು ಭೀಮನಹಳ್ಳಿ, ಸಿದ್ದರಾಜು, ಸೋಮಸುಂದರ್, ಸುಂದ್ರಮ್ಮ, ಜಯರಾಮೇಗೌಡ, ನಿರ್ದೇಶಕ ಯಶ್ವಂತ್ ಕುಮಾರ್, ದೀಪಾ, ಕೆಂಪರಾಜು, ದೊರೆಸ್ವಾಮಿ, ನಿರ್ದೇಶಕ ಪ್ರಮೋದ್, ಕೋಮಲಾ ಸೇರಿದಂತೆ ಮತ್ತಿತರರಿದ್ದರು.

Leave a Reply

Your email address will not be published. Required fields are marked *

× How can I help you?