ಅರಕಲಗೂಡು-ಭೂ-ಸುರಕ್ಷಾ ಯೋಜನೆ-ಅಡಿಯಲ್ಲಿ-ಅರಕಲಗೂಡು ತಾಲೂಕು-ಜಿಲ್ಲೆಯಲ್ಲಿ ಉತ್ತಮವಾದ-ಕಾರ್ಯನಿರ್ವಹಿಸುತ್ತಿದೆ -ಡಿಸಿ ಸತ್ಯಭಾಮ

ಅರಕಲಗೂಡು : ಭೂ ಸುರಕ್ಷಾ ಯೋಜನೆ ಅಡಿಯಲ್ಲಿ ತಾಲೂಕು ಕಚೇರಿಯಲ್ಲಿರುವ ಹಳೆಯ ಕಡತಗಳ ಸ್ಕ್ಯಾನಿಂಗ್ ಮತ್ತು ಅಪ್ಲೋಡ್ ಕಾರ್ಯದಲ್ಲಿ ಅರಕಲಗೂಡು ತಾಲೂಕು ಜಿಲ್ಲೆಯಲ್ಲಿ ಉತ್ತಮವಾದ ಕಾರ್ಯನಿರ್ವಹಿಸುತ್ತಿದೆ ಎಂದು ಡಿಸಿ ಸತ್ಯಭಾಮ ಹೇಳಿದರು.

ಅವರು ಅರಕಲಗೂಡು ತಾಲೂಕು ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಹಾಗೂ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಆಧಾರ್ ಸೀಡಿಂಗ್ ಲ್ಯಾಂಡ್ ಬಿಟ್ ದುರಸ್ತಿ ಕಾರ್ಯ ಹಾಗೂ ಬಗರ್ ಹುಕುಂ ಕಾರ್ಯಗಳಲ್ಲಿ ಹಾಸನ ಜಿಲ್ಲೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಸರ್ಕಾರಿ ಗೋಮಾಳ ಮಂಜೂರು ಮಾಡುವಾಗ ಸಾರ್ವಜನಿಕ ಉದ್ದೇಶಕ್ಕೆ ಜಾಗ ಮೀಸಲಿಟ್ಟು ಉಳಿಕೆ ಜಾಗವನ್ನು ಸಾಗುವಳಿದಾರರಿಗೆ ಜಮೀನು ಮಂಜೂರು ಮಾಡಲು ಕ್ರಮವಹಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿ , ಉಪ ವಿಭಾಗ ಅಧಿಕಾರಿ ಡಾ. ಶ್ರುತಿ, ಡಿಡಿಎಲ್ಆರ್ ಸುಜಯ್, ತಹಶಿಲ್ದಾರ್ ಮಲ್ಲಿಕಾರ್ಜುನ್ ,ಎ. ಡಿ. ಎಲ್. ಆರ್.ಸುಂದರ್, ಸಿ ಸ್ವಾಮಿ ಡಿ ಸೋಮಶೇಖರ್ ಹಾಗೂ ಎಲ್ಲಾ ಉಪಾ ತಾಸಿಲ್ದಾರರು ರಾಜಸ್ವ ನಿರೀಕ್ಷಕರು ಗ್ರಾಮ ಆಡಳಿತ ಅಧಿಕಾರಿಗಳು ತಾಲೂಕು ಕಚೇರಿಯ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮ ಸಹಾಯಕರು ಹಾಗೂ ಸಾರ್ವಜನಿಕರು ಹಾಜರಿದ್ದರು

-ಶಶಿಕುಮಾರ್‌, ಅರಕಲಗೂಡು

Leave a Reply

Your email address will not be published. Required fields are marked *

× How can I help you?