ಚಿಕ್ಕಮಗಳೂರು-ಗ್ರಾಮೀಣ-ಸೊಗಡಿನ-ವಿದ್ಯಾರ್ಥಿಗಳು-ಗಟ್ಟಿತನದವರು – ನಿವೃತ್ತ ಮುಖ್ಯ ಶಿಕ್ಷಕ-ಸಿದ್ದರಾಮಪ್ಪ


ಚಿಕ್ಕಮಗಳೂರು: ಹಳೇ ವಿದ್ಯಾರ್ಥಿಗಳ ತುಂಟಾಟ, ಬಾಲ್ಯದ ಸಿಹಿ-ಕಹಿ ಘಟನೆಗಳನ್ನು ಮೆಲುಕು ಹಾಕುವ ಮುಖಾಂತರ ಇದೀಗ ಉನ್ನತ ಹುದ್ದೆ ಅಲಂಕರಿಸಿರುವ ವಿದ್ಯಾರ್ಥಿಗಳು ಗ್ರಾಮಕ್ಕೆ ಪ್ರೇರ ಣಾದಾಯಕ ಎಂದು ನಿವೃತ್ತ ಮುಖ್ಯ ಶಿಕ್ಷಕ ಸಿದ್ದರಾಮಪ್ಪ ಹೇಳಿದರು.


ತಾಲ್ಲೂಕಿನ ಕರ್ತಿಕೆರೆ ಕ್ಲಸ್ಟರ್‌ನ ಚಿಕ್ಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗುರು ವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಇತ್ತೀಚೆಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮೀಣ ಸೊಗಡಿನ ವಿದ್ಯಾರ್ಥಿಗಳು ಗಟ್ಟಿತನದಿಂದ ಕೂಡಿರುತ್ತಾರೆ. ಕುಟುಂಬದ ಸಂಕಷ್ಟವನ್ನು ಅರಿತುಕೊಂಡು ಓದುವಂಥವರು. ಪಾಲಕರ ಶ್ರಮ ಹಾಗೂ ಶಿಕ್ಷಕರ ಸಮಗ್ರ ಬೋಧನೆಯಿಂದ ಶಾಲೆಯ ಹಲವಾರು ವಿದ್ಯಾರ್ಥಿಗಳು ಸಮಾಜದಲ್ಲಿನ ಅನೇಕ ಸರ್ಕಾರಿ ಕೆಲಸದಲ್ಲಿ ತೊಡಗಿಸಿಕೊಂಡು ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು.


ಗ್ರಾಮದ ನಿವೃತ್ತ ಶಿಕ್ಷಕಿ ಸಿದ್ದಗಂಗಮ್ಮ ಮಾತನಾಡಿ, ಪಟ್ಟಣದ ವ್ಯಾಮೋಹವಿಲ್ಲದೇ, ಕಲಿಕೆಯ ತುಡಿತ ದಲ್ಲಿದ್ಧ ಮಕ್ಕಳು ಇಂದು ಭುಜದೆತ್ತರಕ್ಕೆ ಬೆಳೆದು ನಿಂತಿರುವುದು ಹೆಮ್ಮೆಯ ಸಂಗತಿ. ಜೊತೆಗೆ ಸಮಾಜದ ಗೌರವಯುತ ಪೊಲೀಸ್, ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಹುದ್ದೆ ನಿರ್ವಹಿಸುತ್ತಿರುವುದಕ್ಕೆ ತಮಗೂ ಖುಷಿ ತಂದಿದೆ ಎಂದರು.


ಸ.ಕಿ.ಪ್ರಾ. ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಸ್ಪೂರ್ತಿಯಾ ಗಿರುವ ಹಳೇ ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ಮಾರ್ಗದರ್ಶನ ನೀಡಬೇಕು. ಭವಿಷ್ಯದಲ್ಲಿ ಎದುರಾ ಗುವಂಥ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುವ ಆತ್ಮಶಕ್ತಿಯನ್ನು ಪೂರೈಸಿದರೆ, ಹಳೇ ವಿದ್ಯಾರ್ಥಿಗಳಂ ತೆ ಯಶಸ್ಸು ಗಳಿಸಲು ಸಾಧ್ಯ ಎಂದರು.


ಈ ಸಂದರ್ಭದಲ್ಲಿ ಚಿಕ್ಕನಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕ ಸುರೇಶ್, ಹಾಲಿ ಶಿಕ್ಷಕರಾದ ಆಶಾ, ಇಂದಿರಾ, ಮೀನಾಕ್ಷಿ, ಲಲಿತಮ್ಮ, ಗ್ರಾಮಸ್ಥರಾದ ಲಕ್ಷ್ನಣ, ನಿಂಗೇಗೌಡ, ಸಿದ್ದರಾಮೇಗೌಡ, ರೇಣುಕಾಕುಮಾರ್, ಬಸ ವೇಗೌಡ, ಕೆಂಪಮ್ಮ, ತಮ್ಮಯ್ಯ, ಹುಲಿಯಪ್ಪಗೌಡ, ಮಂಜೇಗೌಡ, ರವಿ, ರಮೇಶ್, ದೊಡ್ಡೇಗೌಡ, ರಾಜೇ ಗೌಡ, ಅಜ್ಜೇಗೌಡ, ಕುಮಾರೇಗೌಡ ಮತ್ತಿತರರು ಹಾಜರಿದ್ದರು.

ಸುರೇಶ್ ಎನ್ , ಚಿಕ್ಕಮಗಳೂರು

Leave a Reply

Your email address will not be published. Required fields are marked *

× How can I help you?