ಚಿಕ್ಕಮಗಳೂರು-ಮನೆ-ಸುತ್ತಮುತ್ತಲು-ಸ್ವಚ್ಚತೆ-ಕಾಪಾಡುವುದು ಕರ್ತವ್ಯ : ನಗರಸಭಾ ಸದಸ್ಯ ಅರುಣ್

ಚಿಕ್ಕಮಗಳೂರು :- ಮನೆ ಹಾಗೂ ಸುತ್ತಮುತ್ತಲು ಸ್ವಚ್ಚತೆ ಕಾಪಾಡುವ ಮೂಲಕ ರೋಗ ರುಜಿನÀ ದೂರವಿರಿಸಬೇಕು. ಆರೋಗ್ಯಪೂರ್ಣ ಸಮಾಜ ನಿರ್ಮಿಸುವಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ನಗರಸಭಾ ಸದಸ್ಯ ಅರುಣ್‌ಕುಮಾರ್ ಹೇಳಿದರು.

ಕಲ್ಯಾಣನಗರದಲ್ಲಿ ನಗರ ವೆಲ್ಫೇರ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ಧ ಬೀದಿಬದಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಭಾಗಿಯಾಗಿ ಅವರು ಮಾತನಾಡಿ, ಮನುಷ್ಯ ಶಾರೀರಿಕವಾಗಿ ಶುದ್ಧವಾಗುವ ಜೊತೆಗೆ ಮನೆಯಂಗಳ ಹಾಗೂ ಸುತ್ತಮುತ್ತಲು ಸ್ವಚ್ಚತೆ ಕಾ ಪಾಡುವುದನ್ನು ಕರ್ತವ್ಯವೆಂದು ಭಾವಿಸಬೇಕು. ಅಕ್ಕಪಕ್ಕದ ಅಥವಾ ವಾರ್ಡಿನ ನಿವಾಸಿಗಳು ಎಲ್ಲೆಂದರಲ್ಲಿ ಕಸ ಬೀಸಾಡುವುದನ್ನು ಕಂಡಲ್ಲಿ ತಿಳಿಹೇಳಿ, ಕಸದ ಗಾಡಿಗಳಿಗೆ ಹಾಕುವಂತೆ ಸೂಚಿಸಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಸೋಂಕಿನಿಂದ ಮನುಷ್ಯನಿಗೆ ವಿವಿಧ ರೀತಿ ರೋಗಗಳು ಉಲ್ಬಣಿಸುತ್ತಿವೆ. ಅಲ್ಲದೇ  ಕೆಲವರು ಬೀದಿ ಬದಿಗಳಲ್ಲಿ ಹಸಿಕಸ ಎಲ್ಲೆಂದರಲ್ಲೇ ಬೀಸಾಡುತ್ತಿದ್ದಾರೆ. ಆದರೆ ಕಾಲಕ್ರಮೇಣ ಕೊಳೆತು ನಾರಿ  ಮಕ್ಕಳು, ವೃದ್ದರು ಅನಾರೋಗ್ಯಕ್ಕೆ ತುತ್ತಾಗುವ ಸಂಭವವಿರುವ ಕಾರಣ ನಿವಾಸಿಗಳು ಎಚ್ಚೆತ್ತುಕೊಂಡು ಗಾಡಿ ಗಳಿಗೆ ಕಸವನ್ನು ಹಾಕಬೇಕು ಎಂದು ಮಾಹಿತಿ ನೀಡಿದರು.

ನಗರ ವೆಲ್ಫೇರ್ ಟ್ರಸ್ಟ್ ಗೌರವಾಧ್ಯಕ್ಷ ಕಿಶೋರ್‌ಕುಮಾರ್ ಹೆಗ್ಡೆ ಮಾತನಾಡಿ ಮಾನವ ಮೊದಲು ಸ್ವಚ್ಚ ತೆಗೆ ಆದ್ಯತೆ ಕೊಡಬೇಕು. ಕೇವಲ ಸುತ್ತಮುತ್ತ ಸ್ವಚ್ಚಂದಗೊಂಡರೆ ಸಾಲದು. ಸಾಮಾಜಿಕ ಕಾರ್ಯದ ಮೂ ಲಕ ಸಮಾಜಕ್ಕೆ ಮಾದರಿಯಾಗಿ ಬದುಕಿದರೆ ಮಾನವನಾಗಿ ಜನಿಸಿದ್ದಕ್ಕೂ ಸಾರ್ಥಕವಾದಂತೆ. ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆ ಸ್ವಚ್ಚಂತೆ ವಿಷಯದಲ್ಲಿ ಹೆಚ್ಚು ಕಾರ್ಯನಿರ್ವಹಿಸಿದ ಪರಿಣಾಮ ರಾಜ್ಯ ಮಟ್ಟದಲ್ಲಿ ಉನ್ನತ ಸ್ಥಾನ ಗಳಿಸಿದೆ. ಇದರಿಂದ ವಾರಗಟ್ಟಲೇ ಪ್ರವಾಸಿಗರು ಕ್ಲೀನ್‌ಸಿಟಿ ಸೌಂದರ್ಯವನ್ನು ಸವಿದು ಆನಂದಿಸುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷ ಹರೀಶ್, ಸದಸ್ಯರು ಗಳಾದ ನಿಂಗರಾಜ್, ಮಹಾಬಲ, ವಾರ್ಡಿನ ನಿವಾಸಿಗಳು ಹಾಜರಿದ್ದರು.

ಸುರೇಶ್ ಎನ್ ಚಿಕ್ಕಮಗಳೂರು

Leave a Reply

Your email address will not be published. Required fields are marked *

× How can I help you?