ಕೆ.ಆರ್.ಪೇಟೆ-ಹಾಲು ಉತ್ಪಾದಕರ-ಅಭಿವೃದ್ಧಿಗೆ-ಪ್ರಾಮಾಣಿಕವಾಗಿ ಶ್ರಮವಹಿಸುತ್ತೇವೆ-ಮಂಡ್ಯ-ಜಿಲ್ಲಾ ಹಾಲು-ಒಕ್ಕೂಟದ-ನೂತನ ನಿರ್ದೇಶಕ-ಡಾಲು ರವಿ-ಭರವಸೆ

ಕೆ.ಆರ್.ಪೇಟೆ: ಅಪಾರ ನಂಬಿಕೆಯಿಂದ ಮೂರನೇ ಬಾರಿ ಅಭೂತಪೂರ್ವ ಗೆಲುವಿಗೆ ಸಾಕ್ಷಿಯಾಗಿರುವ ಹಾಲು ಉತ್ಪಾದಕರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮವಹಿಸುತ್ತೇವೆ ಎಂದು ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನೂತನ ನಿರ್ದೇಶಕ ಡಾಲು ರವಿ ಭರವಸೆ ನೀಡಿದರು.

ಅವರು, ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಕೈಗೊನಹಳ್ಳಿ-ರಂಗನಾಥಪುರ ಕ್ರಾಸ್, ಗಿಡದ ಬೊಪ್ಪನಹಳ್ಳಿ,ಜಾಗನಕೆರೆ, ಕೊಡಗಹಳ್ಳಿ,ಗ್ರಾಮಗಳ ಹಾಲು ಉತ್ಪಾದಕರ ಹಾಗೂ ಹಿತೈಷಿಗಳ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಇದು ನನ್ನ ಗೆಲುವಲ್ಲ ಹಾಲು ಉತ್ಪಾದಕರು ಹಾಗೂ ರೈತರ ಗೆಲುವು . ನನ್ನ ಮೇಲೆ ಇಲ್ಲಸಲ್ಲದ ಆರೋಪಗಳು ವದಂತಿ ಸೃಷ್ಟಿಸಿದರು. ಯಾರ ವದಂತಿಗೂ ಕಿವಿ ಕೊಡದೆ ಕಾಂಗ್ರೆಸ್,ಜೆಡಿಎಸ್, ಬಿಜೆಪಿ ಮೂರು ಪಕ್ಷದ ಕಾರ್ಯಕರ್ತರು ಅಪಾರವಿಶ್ವಾಸಟ್ಟು ಅಭೂತಪೂರ್ವ ಜಯಕ್ಕೆ ಶ್ರಮವಹಿಸಿ ಸಾಕ್ಷಿಯಾಗಿದ್ದೀರಿ. ಅದಕ್ಕೆ ಋಣಿಯಾಗಿ ಸಹಕಾರ ತತ್ವಗಳನ್ನು ಮತ್ತಷ್ಟು ಮೈಗೂಡಿಸಿಕೊಂಡು ರೈತರ ಹಾಗೂ ಹಾಲು ಉತ್ಪಾದಕರ ಅಭಿವೃದ್ಧಿಗೆ ಕಾಯ-ವಾಚ-ಮನಸ್ಸುನಿಂದ ಪ್ರಾಮಾಣಿಕವಾಗಿ ದುಡಿದು ಋಣ ತೀರಿಸುತ್ತೇನೆ ಎಂದು ಭರವಸೆ ನೀಡಿದರು.

ಮನ್ಮಲ್ ನೂತನ ನಿರ್ದೇಶಕ ಎಂ.ಬಿ ಹರೀಶ್ ಮಾತನಾಡಿ, ಈ ಚುನಾವಣೆಯಲ್ಲಿ ನಾವು ನಂಬಿದವರೆಲ್ಲ ಮೋಸ ಮಾಡಿದವರಿಗೆ ತಕ್ಕ ಪಾಠವನ್ನು ಫೆ. 2ನೇ ತಾರೀಕು ನಡೆದ ಚುನಾವಣೆಯಲ್ಲಿ ಮತದಾರರು ಅತಿ ಹೆಚ್ಚು ಮತ ನೀಡುವ ಮೂಲಕ ಫಲಿತಾಂಶದಲ್ಲಿ ಉತ್ತರ ನೀಡಿದ್ದೀರಿ. ಅದಕ್ಕೆ ಋಣಿಯಾಗಿ ದ್ವೇಷ ರಾಜಕಾರಣಕ್ಕೆ ಆದ್ಯತೆ ನೀಡಿದೆ ರೈತರ ಅಭಿವೃದ್ಧಿಗೆ ನಾನು ಹಾಗೂ ಡಾಲು ರವಿ ಪ್ರಾಮಾಣಿಕವಾಗಿ ಶ್ರಮ ವಹಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಪಿ.ಎಲ್.ಡಿ ಬ್ಯಾಂಕ್ ನೂತನ ನಿರ್ದೇಶಕ ಮಾಳಗೂರು ಜಗದೀಶ್, ಮುಖಂಡರಾದ ರಾಮೇಗೌಡ,ಜಾಗನಕೆರೆ ಅಶೋಕ್,ಅಂಬರೀಶ್, ಮನೋಜ್,ಸೋಮೇಶ್,ರಂಗನಾಥಪುರ ಕ್ರಾಸ್ ಪರಮೇಶ್ (ಪಚ್ಚಿ), ಲೋಕೇಶ್, ಗೋಪಿ, ಲವ ಕುಶ, ಪರ್ಮಿ, ಅಶೋಕ್, ರುದ್ರೇಶ್, ಸ್ವಾಮಿ, ಉಮೇಶ್, ಮಂಜು,ಮನು,ಮಂಜುನಾಥ್,ರೇವಣ್ಣ,ಸೇರಿದಂತೆ ಕೈಗೊನಹಳ್ಳಿ, ರಂಗನಾಥಪುರ ಕ್ರಾಸ್,ಗಿಡದ ಬೊಪ್ಪನಹಳ್ಳಿ,ಕೊಡಗಹಳ್ಳಿ,ಸಾರಂಗಿ, ಗ್ರಾಮದ ಉತ್ಪಾದಕರು ಮತ್ತು ಗ್ರಾಮಸ್ಥರಿದ್ದರು.

-‌ ಮನು ಮಾಕವಳ್ಳಿ‌, ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?