ಅರಕಲಗೂಡು : ಸರ್ಕಾರಗಳು ರೈತರ ಬಗ್ಗೆ ಯೋಚನೆ ಮಾಡಿ ಅವರು ಬೆಳೆಯುವ ಬೆಳೆಗಳಿಗೆ ಬೆಂಬಲ ಬೆಲೆಗಳನ್ನು ನೀಡಿ ಅವರನ್ನು ಸಾಲದ ಸೂಲೆಯಿಂದ ತಪ್ಪಿಸಲು ಕೆಲಸ ಮಾಡಬೇಕು ಎಂದು ಅರಕಲಗೂಡು ತಾಲೂಕು ಬಿಜೆಪಿ ಮುಖಂಡ ಯೋಗ ರಮೇಶ್ ಹೇಳಿದರು.
ತಾಲೂಕು ಕೊಣನೂರು ಹೋಬಳಿ ಕಂಟೇನ್ಹಳ್ಳಿ ಗ್ರಾಮದ ರೈತ ಕೆ ಡಿ ರವಿ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, ಅರಕಲಗೂಡು ತಾಲೂಕು ಬಿಜೆಪಿ ಮುಖಂಡ ಯೋಗ ರಮೇಶ್ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸರ್ಕಾರ ರೈತನು ಬೆಳೆಗಳನ್ನು ಹಾಕುವುದಕ್ಕೆ ಮೊದಲು ಭೂಮಿಗೆ ಬೀಜಗಳನ್ನು ಹಾಕುವಾಗ ಉತ್ತಮ ಗುಣಮಟ್ಟದ ಬೀಜಗಳನ್ನು ಕೊಡುವುದು ಮತ್ತು ಆ ಬೆಳೆಯನ್ನು ಬೆಳಗಾದ ಮೇಲೆ ಅದಕ್ಕೆ ಸರಿಯಾದ ಬೆಲೆಯನ್ನು ಕೊಡುವುದು ಇದು ಸರಕಾರದ ಕರ್ತವ್ಯವಾಗಿರುತ್ತದೆ. ಆದ್ದರಿಂದ ರೈತರನ್ನು ಮೇಲೆತ್ತಲು ಅವರು ಬೆಳೆಯುವ ಬೆಳೆಗಳಿಗೆ ಸರಿಯಾದ ಬೆಲೆಯನ್ನು ಕೊಟ್ಟು ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು. ಆಗ ಮಾತ್ರ ರೈತ ಆತ್ಮಹತ್ಯೆ ಅಂತ ಘೋರವಾದ ಕೆಲಸಗಳನ್ನು ಮಾಡಲು ಹೋಗುವುದಿಲ್ಲ ಎಂದು ಹೇಳಿದರು.
ಈ ವೇಳೆ ಬಿಜೆಪಿ ಮುಖಂಡರುಗಳು ಹಾಗೂ ಇತರ ಗ್ರಾಮಸ್ಥರು ಹಾಜರಿದ್ದರು.