ಎಚ್.ಡಿ.ಕೋಟೆ: ತಾಲೂಕಿನ ಹೊಸತೊರವಳ್ಳಿ ಗ್ರಾಮದಲ್ಲಿ ನೂತನವಾಗಿ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಅನಿಲ್ ಚಿಕ್ಕಮಾದು ಭೂಮಿ ಪೂಜೆ ನೆರವೇರಿಸಿದರು. ಗ್ರಾ.ಪಂ ಸದಸ್ಯೆ ಚಿಕ್ಕಮ್ಮ, ಮಾಜಿ ಸದಸ್ಯ ಚನ್ನನಾಯಕ (ಸೋಮಣ್ಣ), ಗಿರಿಗೌಡ, ಗ್ರಾಮಸ್ಥರಾದ ಅಂಕನಾಯಕ, ರೇವಣ್ಣೇಗೌಡ, ಮಹೇಶ್, ಕೆಂಪನಾಯಕ, ಗೌರಮ್ಮ, ಸ್ಟುಡಿಯೋ ಸ್ವಾಮಿ ಸೇರಿದಂತೆ ಮತ್ತಿತರರಿದ್ದಾರೆ.