ಹಾಸನ: ಮಕ್ಕಳಿಗೆ ಬೌದ್ಧಿಕ ಹಾಗೂ ದೈಹಿಕ ಶಕ್ತಿ ಎರಡೂ ಮುಖ್ಯವಾದುದು ಎಂದು ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಟೈಮ್ಸ್ ಗಂಗಾಧರ್ ಹೇಳಿದರು.
ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಈಚೆಗೆ ಶೋರಿನ ರಿಯೊ ಶೋರಿನ ಕಯ್ ಸಂಸ್ಥೆ ವತಿಯಿಂದ ನಡೆದ 28 ನೇ ರಾಷ್ಟçಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳಿಗೆ ನಾವು ಕೇವಲ ಪಠ್ಯದ ಓದುವಿಕೆಗೆ ಮಾತ್ರ ಸೀಮಿತವಾಗಿರಿಸಬಾರದು, ಶಿಕ್ಷಣದೊಂದಿಗೆ ಕರಾಟೆಯಂತಹ ದೈಹಿಕ ಸದೃಢತೆ ಕಾಪಾಡಿಕೊಳ್ಳಬಹುದಾದ ಕ್ರೀಡೆಯಲ್ಲಿ ಮಕ್ಕಳನ್ನು ಭಾಗವಹಿಸುವಂತೆ ಮಾಡಬೇಕು. ದೈಹಿಕ ಸದೃಢತೆ ಕಾಪಾಡಿಕೊಳ್ಳುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ್, ಲಕ್ಷ್ಮೀಕಾಂತ್, ರವಿಕುಮಾರ್, ಹನುಮಾನ್ ಮಮತಾ ನಟೇಶ್, ಸುನಿಲ್ ಕುಮಾರ್, ಡಾ. ಸತೀಶ್, ಶಿಹಾನ್ ದೀಪಕ್ ಹಾಗೂ ಇತರರು ಹಾಜರಿದ್ದರು.