ಚಿಕ್ಕಮಗಳೂರು: ವರ್ಷನುಗಟ್ಟಲೇ ಪಾಲಕರ ಪರಿಶ್ರಮ ಹಾಗೂ ಶಿಕ್ಷಕರ ಬೋಧನೆಗೆ ವಿದ್ಯಾರ್ಥಿಗಳು ಅಧ್ಯಯನ ಮೂಲಕ ಬೆಲೆಕೊಡಬೇಕು. ಅಂತಿಮ ಪರೀಕ್ಷೆಯಲ್ಲಿ ಧೈರ್ಯ ಮತ್ತು ಆತ್ಮವಿಶ್ವಾ ಸದ ಸಾಮರ್ಥ್ಯ ಮೈಗೂಡಿಸಿಕೊಳ್ಳಬೇಕು ಎಂದು ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆ, ಸಾಯಿ ಏಂಜೆಲ್ಸ್ ಪಿಯು ಕಾಲೇಜು ಚಿಕ್ಕಮಗಳೂರು ಹಾಗೂ ಕುವೆಂಪು ಯೂನಿವರ್ಸಿಟಿ ಯೂನಿಯನ್ ಸಹಯೋಗದಲ್ಲಿ ಗುರುವಾರ ಎಸ್. ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಬೀಳ್ಕೊಡಿಗೆ ಹಾಗೂ ಪರೀಕ್ಷೆ ಕುರಿತು ಪ್ರೇರಣಾ ಭಾಷಣ ಕಾರ್ಯಕ್ರಮವ ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂತಿಮ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ನಕರಾತ್ಮಕ ಚಿಂತನೆಗಳು ಸಹಜ. ಎಲ್ಲವನ್ನು ಬದಿಗಿರಿಸಿ ಸಕಾ ರತ್ಮಕವಾಗಿ ಯೋಚಿಸಬೇಕು. ಶಾಲೆಯ ಕ್ರೀಡಾಕೂಟ, ವಾರ್ಷಿಕೋತ್ಸವ ಬಳಿಕ ಅಂತಿಮ ಪರೀಕ್ಷಾ ಘಟ್ಟದಲ್ಲಿ ನಿರಂತರ ಕಲಿಕೆಯಿಂದ ಕೂಡಿದ್ದರೆ ಮಾತ್ರ ಪರೀಕ್ಷಾ ಕೊಠಡಿಗಳಲ್ಲಿ ಯಾವುದೇ ಆತಂಕವಿರುವುದಿಲ್ಲ ಎಂದು ತಿಳಿಸಿದರು.
ಇಂದಿನ ವಿದ್ಯಾರ್ಥಿಗಳೇ ದೇಶದ ಮುಂದಿನ ಆಸ್ತಿ. ಹಂತ ಹಂತವಾಗಿ ಬೆಳವಣಿಗೆ ಹೊಂದಿ ಸಮಾಜ ದ ಉನ್ನತ ಸ್ಥಾನ ಅಲಂಕರಿಸಬೇಕು. ವಿದ್ಯೆಯಿಂದಲೇ ಮಕ್ಕಳ ಬದುಕು ಮುಗಿಲೆತ್ತರಕ್ಕೆ ಕೊಂಡೊಯ್ಯಲು ಸಾಧ್ಯ. ಹೀಗಾಗಿ ಕಲಿಕೆ ಸಮಯದಲ್ಲಿ ಮೊಬೈಲ್, ಟಿವಿಗೆ ಮಾರುಹೋಗದಂತೆ ಎಚ್ಚರ ವಹಿಸಬೇಕು ಎಂದರು.
ಎಸ್.ಎಸ್.ಎಲ್.ಸಿ. ನೋಡಲ್ ಅಧಿಕಾರಿ ಕೃಷ್ಣಮೂರ್ತಿ ರಾಜ್ ಅರಸ್ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕದಿAದ ತೇರ್ಗಡೆ ಹೊಂದಿದ್ದರೆ, ಮುಂದಿನ ವ್ಯಾಸಂ ಗಕ್ಕೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ಸೀಟ್‌ಗಳು ಲಭ್ಯವಾಗಿ ಪಾಲಕರಿಗೆ ಲಕ್ಷಾಂತರ ರೂ.ಗಳನ್ನು ಉಳಿಸಬಹುದು ಎಂದು ಕಿವಿಮಾತು ಹೇಳಿದರು.
ಪರೀಕ್ಷಾ ಕೊಠಡಿಗಳಲ್ಲಿ ಅಕ್ರಮ ಚಟುವಟಿಕೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮ ರಾ ಅಳವಡಿಸಿ ಪ್ರತಿಯೊಬ್ಬರ ಚಲನವಲನ ಇಲಾಖೆ ಕಲೆಹಾಕುತ್ತದೆ. ಅಲ್ಲದೇ ವಿದ್ಯಾರ್ಥಿಗಳ ಸಮರ್ಪಕ ಓದಿಗೆ ತಕ್ಕ ಪ್ರತಿಫಲ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಈ ಪದ್ಧತಿಯನ್ನು ಜಾರಿಗೊಳಿಸಿದೆ ಎಂದರು.

ಸೆಂಟ್‌ಆಡ್ರಿಸ್ ಚರ್ಚ್ನ ಧರ್ಮಗುರು ಸಿ.ಜಾರ್ಜ್ ವಿನೋದ್‌ಕುಮಾರ್ ಮಾತನಾಡಿ ಪರೀಕ್ಷೆಗಳೆಂದ ರೆ ಇತ್ತೀಚಿನ ವಿದ್ಯಾರ್ಥಿಗಳಲ್ಲಿ ಒಂದೆಡೆ ಆತಂಕ, ಕೆಲವರು ಧೈರ್ಯವಾಗಿ ಎದುರಿಸುವ ಶಕ್ತಿ ಹೊಂದಿದ್ದಾರೆ. ಅಂತಿಮ ಪರೀಕ್ಷೆಗಳಲ್ಲಿ ಭಯ ಸಹಜ. ಇದನ್ನು ಮೆಟ್ಟಿನಿಲ್ಲಲು ನಿರಂತರ ವಿದ್ಯಾಭ್ಯಾಸವೇ ದೊಡ್ಡ ಆಸ್ತಿ ಎಂ ದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಯಿಏಂಜೆಲ್ಸ್ ಪಿಯು ಕಾಲೇಜು ಪ್ರಾಂಶುಪಾಲ ಕೆ.ಕೆ.ನಾಗರಾಜ್, ಉಪನ್ಯಾಸಕ ಕುಮಾರಸ್ವಾಮಿ, ಕುವೆಂಪು ಯೂನಿವರ್ಸಿಟಿ ಯೂನಿಯನ್ ಕಾರ್ಯದರ್ಶಿ ಎನ್.ರಕ್ಷಿತ್, ಟಿಪ್ಪುಸುಲ್ತಾನ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜಂಶೀದ್‌ಖಾನ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪ್ರಸಾದ್ ಅಮೀನ್, ಬಸವ ನಹಳ್ಳಿ ಬಾಲಕಿಯರ ಶಾಲೆಯ ಪ್ರಾಂಶುಪಾಲೆ ಇಂದ್ರಮ್ಮ, ಶಿಕ್ಷಕ ಮಧು ಮತ್ತಿತರರಿದ್ದರು.
– ಸುರೇಶ್ ಎನ್ ಚಿಕ್ಕಮಗಳೂರು