ಕೊರಟಗೆರೆ :– ಜೆಡಿಎಸ್ ಪಕ್ಷದಲ್ಲಿ 10-15 ವರ್ಷಗಳಿಂದ ಕಗ್ಗಂಟಾಗಿ ಖಾಲಿ ಉಳಿದಿದ್ದ ತಾಲೂಕು ಜೆಡಿಎಸ್ ಅಧ್ಯಕ್ಷ ಸ್ಥಾನ ಅಂತೂ ಇಂತೂ ಅಂತಿಮ ಹಂತ ತಲುಪಿದ್ದು, ಅಧ್ಯಕ್ಷರಾಗಿ ಗುಂಡನಪಾಳ್ಯ ಜಿ ಎಂ ಕಾಮರಾಜು ಎಂಬುವರನ್ನು ಆಯ್ಕೆ ಮಾಡಿ ಮಾಜಿ ಶಾಸಕ ಪಿ ಆರ್ ಸುಧಾಕರ್ ಲಾಲ್ ಹಾಗೂ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್ .ಅಂಜಿನಪ್ಪ ಘೋಷಣೆ ಮಾಡಿದ್ದಾರೆ.
ಕೊರಟಗೆರೆ ತಾಲೂಕಿನಲ್ಲಿ ಬಹಳ ವರ್ಷಗಳಿಂದ ಅಧ್ಯಕ್ಷ ಹುದ್ದೆ ಖಾಲಿಯಿದ್ದು, ಮಾಜಿ ಸಚಿವ ಸಿ .ಚೆನ್ನಿಗಪ್ಪನವರ ಅವಧಿಯಲ್ಲಿ ಎಲ್ಐಸಿ ರಾಜಣ್ಣ ನಂತರ ಲಿಂಗಾಪುರ ರಂಗನಾಥಪ್ಪ ಅಧ್ಯಕ್ಷರಾಗಿ ಅವರ ನಂತರ 10-15 ವರ್ಷಗಳಿಂದ ತಾಲೂಕ ಅಧ್ಯಕ್ಷರು ಹುದ್ದೆ ಖಾಲಿಯಿದ್ದು , ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ ಕಾರಣ ಜೆಡಿಎಸ್ ನ ಉನ್ನತ ಮಟ್ಟದ ರಾಜಕಾರಣಿಗಳು ಜೇನಿನ ಗೂಡಿಗೆ ಕೈ ಹಾಕದೆ ಜಾಣತನ ಮೆರೆದಿದ್ರೂ ಎನ್ನಲಾಗಿದೆ.

ರಾಜ್ಯ ರಾಜಕಾರಣದಲ್ಲಿ ಹಲವು ಬೆಳವಣಿಗೆಗಳ ನಂತರ ಎನ್ಡಿಎ ಮಿತ್ರ ಪಕ್ಷವಾಗಿರುವ ಜೆಡಿಎಸ್ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಕಾರ್ಯಕರ್ತರನ್ನ ಒಗ್ಗೂಡಿಸುವ ದೃಷ್ಟಿಯಿಂದ ಪದಾಧಿಕಾರಿಗಳ ಆಯ್ಕೆಗೆ ಹೈಕಮಾಂಡ್ ಮುಂದಾಗಿದ್ದು , ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಧ್ಯಕ್ಷರಾಗಿ ಜಿ ಎಂ ಕಾಮರಾಜು, ಕಾರ್ಯಾಧ್ಯಕ್ಷರಾಗಿ ತುಂಬಾಡಿ ಲಕ್ಷ್ಮಣ್, ಯುವ ಅಧ್ಯಕ್ಷರಾಗಿ ದಮಗಲ್ಲಯ್ಯನಪಾಳ್ಯ ವೆಂಕಟೇಶ್ ಎಂಬುವರನ್ನು ಆಯ್ಕೆ ಮಾಡಲಾಗಿದೆ ಉಳಿದಂತೆ ಉಳಿದ ಹುದ್ದೆಗಳನ್ನು ಕೆಲವೇ ದಿನಗಳಲ್ಲಿ ಆಯ್ಕೆ ಮಾಡುವ ಸುಳಿವು ನೀಡಿದ್ದು, ಕ್ಷೇತ್ರದಲ್ಲಿ ಬೇರು ಮಟ್ಟದಿಂದ ಪಕ್ಷ ಸಂಘಟಿಸುವಂತೆ ಅಧ್ಯಕ್ಷ, ಕಾರ್ಯಾಧ್ಯಕ್ಷ ಸೇರಿದಂತೆ ಮುಖಂಡರುಗಳಿಗೆ ಹೈಕಮಾಂಡ್ ಕಿವಿಮಾತು ಹೇಳಲಾಗಿದೆ.
ಈ ಸಂದರ್ಭದಲ್ಲಿ ತಾಲೂಕಿನ ಜೆಡಿಎಸ್ ನ ಖಜಾಂಚಿ ಲಕ್ಷ್ಮಣ್, ಮಾಜಿ ತಾಲೂಕ ಪಂಚಾಯಿತಿ ಅಧ್ಯಕ್ಷರು ಸುದಾ ಹನುಮಂತ ರಾಯಪ್ಪ , ಪ. ಪಂ ಸದಸ್ಯ ಸಿದ್ದಮಲ್ಲಪ್ಪ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ, ತಾ.ಪಂ ಸದಸ್ಯ ಎಲ್ ವಿ ಪ್ರಕಾಶ್, ಪಿ ಎಲ್ ಡಿ ಬ್ಯಾಂಕ್ ನ ರಂಗಣ್ಣ, ಡಿಸಿ ರವೀಂದ್ರ, ಗ್ರಾ.ಪಂ ಮಾಜಿ ಅಧ್ಯಕ್ಷ ರಮೇಶ, ಮುಖಂಡರುಗಳಾದ ವೆಂಕಟೇಶ್, ರವಿಕುಮಾರ್, ವಿನಯ್, ನರಸೀಯಪ್ಪ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
– ನರಸಿಂಹಯ್ಯ